ಸಿಗರೇಟ್ ಸೇದುತ್ತಾ ಮಹಡಿಯಿಂದ ಬಿದ್ದು ಸಾವು

ರಾಮಮೂರ್ತಿನಗರದ ನಿವಾಸಿ ಮಹೇಂದ್ರ (33) ಮೃತ ದುರ್ದೈವಿ. ಮಹೇಂದ್ರ ದೊಮ್ಮಲೂರಿನ ಔಟರ್ ರಿಂಗ್ ರಸ್ತೆಯಲ್ಲಿರುವ ಕಾಲ್ ಸೆಂಟರ್ ವೊಂದರಲ್ಲಿ (Maruti Infotech) ಉದ್ಯೋಗಿ. ಇಂದು ಬೆಳಗಿನ ಪಾಳಿಯಲ್ಲಿ ಕೆಲಸಕ್ಕೆ ಹಾಜರಾದ ಮಹೇಂದ್ರ ಮಹೇಂದ್ರ ಎಂದಿನಂತೆ ಇಂದು ಮುಂಜಾನೆ 5.30ರಲ್ಲಿ ಕಂಪನಿಯ ಕ್ಯಾಬ್ ನಲ್ಲಿ ಕಚೇರಿಗೆ ಬಂದಿದ್ದಾನೆ.
ಕಟ್ಟಡದ 3ನೇ ಮಹಡಿಯಲ್ಲಿರುವ ಕಾಲ್ ಸೆಂಟರ್ ಕಚೇರಿಯಲ್ಲಿ ಸಹದ್ಯೋಗಿಗಳನ್ನು ಮಾತನಾಡಿಸಿದ ಬಳಿಕ ಕಾಫಿ ಕುಡಿಯಲು ಪಕ್ಕದಲ್ಲೇ ಇರುವ ಕ್ಯಾಂಟಿನ್ನಿಗೆ ಹೋಗುವುದಾಗಿ ಹೇಳಿ ಮಹೇಂದ್ರ ತೆರಳಿದ್ದಾನೆ.
ಅಲ್ಲಿಂದ ಕ್ಯಾಂಟಿನ್ನಿನಲ್ಲಿ ಕಾಫಿ ಕುಡಿದು ಸಿಗರೇಟ್ ಸೇದಲು 6ನೇ ಮಹಡಿಗೆ ಹೋಗಿದ್ದಾರೆ. ಆ ವೇಳೆಯಲ್ಲೇ ಅನಾಹುತ ಸಂಭವಿಸಿದೆ. ಆತ ಕಟ್ಟಡದಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈ ಸಂಬಂಧ ಏರ್ ಪೋರ್ಟ್ ಪೊಲೀಸರಿಗೆ ದೂರು ನೀಡಲಾಗಿ, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಶವವನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.












Click it and Unblock the Notifications