ಬೆಂಗಳೂರು: ಪಿಜಿ ಸೆಂಟರ್ ಮಾಲೀಕರ ಭೀಕರ ಹತ್ಯೆ

Bangalore Banasawadi PG center owner Mary Lukos murdered
ಬೆಂಗಳೂರು, ಏ.30: ನಗರದ ಬಾಣಸವಾಡಿಯಲ್ಲಿ ಪೇಯಿಂಗ್ ಗೆಸ್ಟ್ ಕೇಂದ್ರವನ್ನು ನಡೆಸುತ್ತಿದ್ದ ಕೇರಳ ಮೂಲದ ವೃದ್ಧೆಯನ್ನು ದುಷ್ಕರ್ಮಿಗಳು ಮಂಗಳವಾರ ಮಧ್ಯಾಹ್ನ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಕೇರಳದಿಂದ ಬಂದಿದ್ದ ಇಬ್ಬರು ನಿನ್ನೆ ಬೆಳಗ್ಗೆ ಇಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದರು. ಅವರೇ ಕೊಲೆ ಮಾಡಿದರಾ? ವಿಚಾರಣೆಯಿಂದ ತಿಳಿದುಬರಬೇಕಿದೆ.

ಕೇರಳದ ಮೇರಿ ಲೂಕಾಸ್ (70) ಬಾಣಸವಾಡಿಯ ಕಾಚರಕನಹಳ್ಳಿ ಮುಖ್ಯರಸ್ತೆಯಲ್ಲಿ ಪುರುಷರಿಗಾಗಿ (ಪಿಜಿ ಸೆಂಟರ್) ವಸತಿ ಗೃಹ ನಡೆಸುತ್ತಿದ್ದರು. ವಸತಿ ಗೃಹದಲ್ಲಿದ್ದ ವಿದ್ಯಾರ್ಥಿಯೊಬ್ಬ ನಿನ್ನೆ ಮಧ್ಯಾಹ್ನ 2 ಗಂಟೆಯಲ್ಲಿ ತನ್ನ ಕೊಠಡಿಗೆ ಬೀಗ ಹಾಕಿಕೊಂಡು, ಕೀಲಿಯನ್ನು ಮೇರಿಗೆ ಕೊಟ್ಟು ಊಟಕ್ಕೆಂದು ಹೊರಹೋಗಿದ್ದಾನೆ.

ಆದರೆ ಆತ ಒಂದು ಗಂಟೆ ಬಿಟ್ಟು ವಾಪಸು ಬರುವ ವೇಳೆಗೆ ಮೇರಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಮೇರಿ ಕೈಕಾಲುಗಳನ್ನು ಕಟ್ಟಿ ಹಾಕಿ ಉಸಿರುಗಟ್ಟಿಸಿ, ಹತ್ಯೆ ಮಾಡಲಾಗಿದೆ.

ಮೇರಿ ಪತಿ 7 ವರ್ಷಗಳ ಹಿಂದೆ ಮೃತ ಪಟ್ಟಿದ್ದಾರೆ. ಅವರ ಒಬ್ಬ ಮಗ ಚೆನ್ನೈನಲ್ಲಿದ್ದರೆ ಮತ್ತೊಬ್ಬ ಮಗ ರಾಮಮೂರ್ತಿನಗರದಲ್ಲಿ ಪ್ರತ್ಯೇಕವಾಗಿ ವಾಸವಿದ್ದಾರೆ. ಆರು ಕೊಠಡಿಗಳಿರುವ ಈ ಮನೆಯಲ್ಲಿ ಹಲವಾರು ವರ್ಷಗಳಿಂದ ಮೇರಿಯವರು ಪುರುಷರಿಗಾಗಿ ಪಿಜಿ ನಡೆಸುತ್ತಿದ್ದರು.

ಮೇರಿ ಮೈ ಮೇಲಿನ ಚಿನ್ನಾಭರಣಗಳಾಗಲಿ ಅಥವಾ ಮನೆಯಲ್ಲಿದ್ದ ಚಿನ್ನಾಭರಣಗಳು ಕಾಣೆಯಾಗಿಲ್ಲ. ಆದ್ದರಿಂದ ಆಸ್ತಿ ವಿಚಾರವಾಗಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪರಿಚಿತರಿಂದಲೇ ಒಂಟಿ ಮಹಿಳೆ ಹತ್ಯೆ:
ಬೆಳಗ್ಗೆ 9 ಗಂಟೆಯಲ್ಲಿ ಕೇರಳದಿಂದ ಬಂದಿದ್ದ ಇಬ್ಬರು ಮೇರಿ ಪಿಜಿಯಲ್ಲಿ ಕೊಠಡಿ ಪಡೆದಿದ್ದರು. ಅವರೇ ಈ ಕೊಲೆ ಮಾಡಿದರಾ? ಪೊಲೀಸರ ವಿಚಾರಣೆಯಿಂದ ಸತ್ಯ ಹೊರಬರಬೇಕಾಗಿದೆ. ಹತ್ಯೆ ಸಮಯದಲ್ಲಿ ಮೇರಿ ಒಬ್ಬಂಟಿಯಾಗಿ ಮನೆಯಲ್ಲಿದ್ದರು. ಪರಿಚಿತರೇ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+