ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಟಿಎಂ ಪ್ರಕರಣ : ಪಾತಕಿ ಆಂಧ್ರದಲ್ಲೂ ಕೊಲೆ ಮಾಡಿದ್ದ

|
Google Oneindia Kannada News

ಬೆಂಗಳೂರು, ನ.25 : ಕಾರ್ಪೋರೇಷನ್ ಬ್ಯಾಂಕ್ ವ್ಯವಸ್ಥಾಪಕಿ ಜ್ಯೋತಿ ಉದಯ್ ಮೇಲೆ ಎಟಿಎಂನಲ್ಲಿ ಹಲ್ಲೆ ನಡೆಸಿ ಪರಾರಿಯಾಗಿರುವ ಆರೋಪಿ ಆಂಧ್ರಪ್ರದೇಶದಲ್ಲೂ ಇಂತಹ ಕೃತ್ಯ ಎಸಗಿದ್ದಾನೆ ಎಂಬ ಆತಂಕಕಾರಿ ಅಂಶ ಬಯಲಾಗಿದೆ. ಆಂಧ್ರದ ಧರ್ಮಾವರಂನಲ್ಲಿ ಮಹಿಳೆಯೊಬ್ಬಳನ್ನು ಹತ್ಯೆ ಮಾಡಿ, ಎಟಿಎಂ ಕಾರ್ಡ್ ಕದ್ದು ಪರಾರಿಯಾಗಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಂಗಳೂರು ಎಟಿಎಂ ಹಲ್ಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಹಂತಕನ ಕೃತ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ, ಸದ್ಯ ಬೆಂಗಳೂರು ಪೊಲೀಸರು ಆಂಧ್ರಪ್ರದೇಶದ ಪೊಲೀಸರ ಸಹಕಾರದಿಂದ ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ನ.11ರಂದು ಆರೋಪಿ ಕದಿರಿಯ ಎಸ್‌ಬಿಎಂ ಬ್ಯಾಂಕ್ ಎಟಿಎಂನಲ್ಲಿ ಹಣ ಡ್ರಾ ಮಾಡಿರುವುದು ಸಿಸಿಟಿವಿಯಲ್ಲಿ ದೃಶ್ಯಾವಳಿಗಳಿಂದ ಪತ್ತೆಯಾಗಿದೆ.

ATM attack

ಬೆಂಗಳೂರಿನ ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಹಾಗೂ ಧರ್ಮವರಂನಲ್ಲಿ ಕೊಲೆಯಾದ ಮಹಿಳೆಯ ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಮಾಡಿರುವ ವ್ಯಕ್ತಿಯ ಚಹರೆಯಲ್ಲಿ ಸಾಮ್ಯತೆ ಇದೆ. ಆತ ಧರಿಸಿರುವ ಶರ್ಟ್, ಪ್ಯಾಂಟು, ಬ್ಯಾಗು, ಕೂದಲು ಮತ್ತು ಗಡ್ಡದ ಶೈಲಿ ಹೊಲಿಕೆಯಾಗುತ್ತವೆ. ಆದ್ದರಿಂದ ಅದೇ ವ್ಯಕ್ತಿ ಬೆಂಗಳೂರಿನಲ್ಲೂ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.

ಬೆಂಗಳೂರಿನ ಸಿಸಿಬಿ ಪೊಲೀಸರು ಮತ್ತೊಂದು ತಂಡ ಭಾನುವಾರ ಕದಿರಿಗೆ ತೆರಳಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದು ಆಂಧ್ರಪ್ರದೇಶ ಪೊಲೀಸರ ಸಹಕಾರದೊಂದಿಗೆ ತನಿಖೆ ಆರಂಭಿಸಿದೆ. ಆರೋಪಿ ಆಂಧ್ರದಲ್ಲಿದ್ದಾನೆ ಎಂದು ಪೊಲೀಸರು ಮೊದಲು ಶಂಕಿಸಿದ್ದರು. ಸದ್ಯ ಸಿಸಿಟಿವಿ ದೃಶ್ಯಾವಳಿಗಳಿಂದ ಅದು ಖಚಿತದಾದಂತಾಗಿದೆ. (ಎಟಿಎಂ ಹಲ್ಲೆ : ಆರೋಪಿ ಮೂಲ ಆಂಧ್ರಪ್ರದೇಶ)

ಆಂಧ್ರಪ್ರದೇಶದ ಪ್ರಕರಣ : ದಾರಾ ಪ್ರಮೀಳಮ್ಮ ಎಂಬಾಕೆ ಧರ್ಮವರಂನ ಹೊರ ವಲಯದಲ್ಲಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು. ನ.10ರಂದು ಭಾನುವಾರ ಮಧ್ಯಾಹ್ನ 1ಗಂಟೆ ಸುಮಾರಿಗೆ ಪ್ರಮೀಳಮ್ಮ ಮನೆಗೆ ಹಂತಹ ಆಗಮಿಸಿದ್ದನ್ನು ಸ್ಥಳೀಯರು ನೋಡಿದ್ದರು.

ಅಂದು ರಾತ್ರಿ 8 ಗಂಟೆ ಸುಮಾರಿಗೆ ಸ್ಥಳೀಯರು ಧರ್ಮವರಂ ಪೊಲೀಸರಿಗೆ ಕರೆ ಮಾಡಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಮೀಳಮ್ಮನ ಬಗ್ಗೆ ಮಾಹಿತಿ ನೀಡಿದ್ದರು, ಸ್ಥಳಕ್ಕೆ ಪೊಲೀಸರು ಧಾವಿಸಿದಾಗ ಪ್ರಮೀಳಮ್ಮ ಮೃತಪಟ್ಟಿರುವುದು ಪತ್ತೆಯಾಗಿತ್ತು.

ಅವರ ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಆಭರಣ, ಮನೆಯಲ್ಲಿದ್ದ 4,600 ರೂ. ಹಣ ಹಾಗೇ ಇತ್ತು. ಆದರೆ, ಅವರ ತಲೆ, ಕುತ್ತಿಗೆ ಮತ್ತು ಕಾಲಿಗೆ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು. ಘಟನೆ ನಡೆದ ನಾಲ್ಕು ದಿನಗಳ ಬಳಿಕ ಪ್ರಮೀಳಮ್ಮ ಪುತ್ರ, ನಮ್ಮ ತಾಯಿ ಬಳಿ ಇದ್ದ ಎರಡು ಎಟಿಎಂ ಕಾರ್ಡ್ ಕಳೆದು ಹೋಗಿವೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ನ.11ರಂದು ಬೆಳಗ್ಗೆ 10.30ಕ್ಕೆ ಕದಿರಿಯಲ್ಲಿ ಎಸ್‌ಬಿಐ ಬ್ಯಾಂಕ್ ಎಟಿಎಂನಲ್ಲಿ ಪ್ರಮೀಳಮ್ಮನ ಎಟಿಎಂ ಕಾರ್ಡ್ ಬಳಸಿ 4 ಸಾವಿರ ರೂ. ಹಣ ಡ್ರಾ ಮಾಡಲಾಗಿತ್ತು ಎಂಬ ಕುರಿತು ಮಾಹಿತಿ ಲಭ್ಯವಾಗಿದೆ.

ನ.12 ರಂದು ಸಂಜೆ 5.34ಕ್ಕೆ ಪುನಃ ಅದೇ ಎಟಿಎಂನಲ್ಲಿ ಅದೇ ಕಾರ್ಡ್ ಬಳಸಿ 400ರೂ. ಡ್ರಾ ಮಾಡಲಾದೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ನ. 15 ರಂದು ಬೆಂಗಳೂರಿನ ಎಟಿಎಂವೊಂದರಲ್ಲಿ ಹಣ ತೆಗೆಯಲು ಯತ್ನಿಸಲಾಗಿದೆ. ಆದರೆ, ಪ್ರಮೀಳಮ್ಮ ಮಗ ಕಾರ್ಡ್ ಬ್ಲಾಕ್ ಮಾಡಿಸಿದ್ದರು.

ಬೆಂಗಳೂರಿಗೆ ನ.15ರಂದು ಬಂದ ಇದೇ ಹಂತಹ 19ರಂದು ಜ್ಯೋತಿ ಉದಯ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

English summary
: In the latest development, Andhra Pradesh PSU bank officials on Sunday claimed to have possibly spotted the unidentified assailant, who had brutally battered a middle aged woman in an ATM kiosk Bangalore on November 19. The assailant of the brutal ATM attack incident could be involved in murder case of another woman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X