ಬಾಹುಬಲಿ-2 ಸಿನಿಮಾ ಟಿಕೆಟ್ ಬೆಲೆ 400, 500, 600: ಇದೆಂಥ ಹಗಲು ದರೋಡೆ?
ಬಾಹುಬಲಿ-2 ಸಿನಿಮಾದ ಟಿಕೆಟ್ ಮುಂಗಡ ಬುಕ್ಕಿಂಗ್ ಅರಂಭಿಸಿದ್ದು, 400, 500 ಹಾಗೂ 600 ರುಪಾಯಿ ವಸೂಲಿ ಮಾಡಲಾಗುತ್ತಿದೆ. ಇಂಥ ಹಗಲು ದರೋಡೆಯನ್ನು ಪ್ರಶ್ನಿಸುವವರಿಲ್ಲವೆ?
ಬೆಂಗಳೂರು, ಏಪ್ರಿಲ್ 25: ಮಲ್ಟಿಪ್ಲೆಕ್ಸ್ ಗಳಲ್ಲಿ ಸದ್ಯದಲ್ಲೇ ನಿಯಮ ಜಾರಿಯಾಗುತ್ತದೆ. ಗರಿಷ್ಠ ದರ 200 ರುಪಾಯಿ ಆಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿಳ್ಳೆ, ಚಪ್ಪಾಳೆ ಹಾಕಿ ಸಂಭ್ರಮ ಪಟ್ಟೆವು. ಆದರೆ ಏಪ್ರಿಲ್ 28ರಂದು ಬಿಡುಗಡೆ ಆಗಲಿರುವ ಬಾಹುಬಲಿ-2 ಸಿನಿಮಾಗೆ ಮುಂಗಡ ಬುಕ್ಕಿಂಗ್ ಶುರುವಾಗಿದ್ದು, ಟಿಕೆಟ್ ದರಗಳನ್ನು ಗಮನಿಸಿದ್ದೀರಾ?
ಊರ್ವಶಿ ಚಿತ್ರಮಂದಿರದಲ್ಲಿ 400, 500 ಹಾಗೂ 600 ರುಪಾಯಿ ಇದೆ. ಹಾಗೂ ಹಲವು ಪ್ರದರ್ಶನದ ಟಿಕೆಟ್ ಗಳು ಮಾರಾಟವಾಗಿವೆ. ರಾಜರಾಜೇಶ್ವರಿ ನಗರದ ಗೋಪಾಲನ್ ಮಾಲ್ ನಲ್ಲಿ ಎಲ್ಲ ಪ್ರದರ್ಶನದ ದರಗಳಿಗೆ 400 ರುಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಅಷ್ಟೇ ಅಲ್ಲ. ಒಂದೇ ತೆರೆಯ ಸಾಮಾನ್ಯ ಚಿತ್ರಮಂದಿರಗಳಲ್ಲೂ ಟಿಕೆಟ್ ಬೆಲೆ 200, 300 ರುಪಾಯಿ ನಿಗದಿ ಮಾಡಿದ್ದಾರೆ.[ಹೋರಾಟಗಾರರೇ, ಬಾಹುಬಲಿ ಪ್ರಕರಣ ಮುಗೀತಲ್ಲ? ಈಗ ಇತ್ತ ಗಮನ ಹರಿಸಿ...]

ರಜನೀಕಾಂತ್ ಸಿನಿಮಾ ಕಬಾಲಿಗೂ ಹೀಗೇ ಆಗಿತ್ತು. ಬಾಹುಬಲಿ-2 ಸಿನಿಮಾ ದೊಡ್ಡ ಬಜೆಟ್ ನದೇ ಇರಬಹುದು. ಹಾಗಂತ ತೀರಾ ಕಡಿಮೆ ಬಜೆಟ್ ನಲ್ಲಿ ಆಗಿರುವ ಸಿನಿಮಾಗೆ ಟಿಕೆಟ್ ದರ ಮಾಮೂಲಿಗಿಂತ ಕಡಿಮೆ ತೆಗೆದುಕೊಳ್ತಾರಾ? ಅದೇ ರೀತಿ ಸಾವಿರಾರು ಕೋಟಿ ವೆಚ್ಚದಲ್ಲಿ ತಯಾರಾಗಿರುವ ಫಾಸ್ಟ್ ಅಂಡ್ ಫ್ಯೂರಿಯಸ್-8 ಗೆ ಟಿಕೆಟ್ ದರ ಎಷ್ಟು ನಿಗದಿ ಮಾಡಬೇಕು.

ಇಂಥ ವಿಚಾರಗಳು ಬಂದಾಗ ಪ್ರೇಕ್ಷಕರ ಪರವಾಗಿ ಯಾರಾದರೂ ಧ್ವನಿ ಎತ್ತಲೇಬೇಕಲ್ವ? ತಮಿಳು ನಿರ್ದೇಶಕ ಶಂಕರ್, ತೆಲುಗು ನಿರ್ದೇಶಕ ರಾಜಮೌಳಿ ಸಿನಿಮಾ ಹಾಗೂ ರಜನೀಕಾಂತ್ ಅಭಿನಯದ ಸಿನಿಮಾ ಎಂದು ಟಿಕೆಟ್ ಬೆಲೆಯನ್ನು ಹೀಗೆ ಏಕಾಏಕಿ ಏರಿಸುವುದು ಎಷ್ಟು ಸರಿ?[ಕನ್ನಡಿಗರ ಕ್ಷಮೆಕೋರಿ ಸತ್ಯರಾಜ್ ಆಡಿರುವ ಮಾತುಗಳಿವು!]

ಊರ್ವಶಿ ಚಿತ್ರಮಂದಿರದಲ್ಲಿ ಫಾಸ್ಟ್ ಅಂಡ್ ಫ್ಯೂರಿಯಸ್ ಸಿನಿಮಾ ಪ್ರದರ್ಶನವಾಗುತ್ತಿದೆ. ಅದರ ಟಿಕೆಟ್ ದರವನ್ನು ಆನ್ ಲೈನ್ ನಲ್ಲಿ ಗಮನಿಸಿ, 150, 200 ಹಾಗೂ 100 ರುಪಾಯಿ ಇದೆ. ಆದರೆ ಬಾಹುಬಲಿ ಬಿಡುಗಡೆ ಆಗುತ್ತಿದೆ ಅಂದಾಕ್ಷಣ ಏಕಿಷ್ಟು ಬೆಲೆ ನಿಗದಿಪಡಿಸಲಾಗಿದೆ ಎಂದು ಪ್ರಶ್ನಿಸಬೇಕಿದೆ.

ದೊಡ್ಡ ಬಜೆಟ್ ನ ಸಿನಿಮಾ ಮಾಡಿ ಎಂದು ಯಾವ ಪ್ರೇಕ್ಷಕರೂ ಕೇಳುವುದಿಲ್ಲ. ಪ್ರೇಕ್ಷಕರಲ್ಲಿ ಕುತೂಹಲ ಇದೆ ಎಂಬ ಕಾರಣಕ್ಕೆ ಮನಸ್ಸಿಗೆ ಬಂದಂತೆ ದರ ಏರಿಸುವುದನ್ನು ಕೇಳುವವರೇ ಇಲ್ಲವಲ್ಲಾ? ನಾವೆಂಥ ಅಸಹಾಯಕರು, ಕೈಲಾಗದವರು..
-
ಕರ್ನಾಟಕ ಸರ್ಕಾರ: ಕಲೆ, ಸಾಹಿತ್ಯ ಗಣ್ಯರಿಗೆ ಗೌರವ, ಸಾಂಸ್ಕೃತಿಕ ಪ್ರಶಸ್ತಿಗಳ ಆಯ್ಕೆ ಪಟ್ಟಿ ಪ್ರಕಟ -
CBSE 10ನೇ ತರಗತಿ ಫಲಿತಾಂಶ 2026: ದಕ್ಷಿಣ ಭಾರತದ ವಿದ್ಯಾರ್ಥಿಗಳದ್ದೇ ಮೇಲುಗೈ, ಶೇ. 98.91ರಷ್ಟು ಸಾಧನೆ ಮಾಡಿದ ಬೆಂಗಳೂರು -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು










Click it and Unblock the Notifications