ಪ್ರಬಲ ಜಾತಿಗಳನ್ನು 2(ಎ) ಗೆ ಸೇರ್ಪಡೆಗೆ ಭಾರಿ ವಿರೋಧ
ಬೆಂಗಳೂರು, ಮಾರ್ಚ್ 10: ಪ್ರಬಲ ಜಾತಿಗಳನ್ನು 2(ಎ) ಸಮುದಾಯಕ್ಕೆ ಸೇರ್ಪಡೆಗೊಳಿಸಬಾರದು ಹಾಗೂ ಉನ್ನತ ಮಟ್ಟದ ಸಮಿತಿಯನ್ನು ರದ್ದುಗೊಳಿಸುವಂತೆ ಅತಿ ಹಿಂದುಳಿದ ವರ್ಗಗಳ ವೇದಿಕೆ ಆಗ್ರಹಿಸಿದೆ.
ಆಯವ್ಯಯದಲ್ಲಿ ನೀಡಿರುವ ಅನುದಾನದ ರೀತಿಯಲ್ಲಿಯೇ ಅತಿ ಹಿಂದುಳಿದ ಸಮುದಾಯಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಅತಿ ಹಿಂದುಳಿದ ವರ್ಗಗಳ ವೇದಿಕೆಯ ನಿಯೋಗ ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರು, ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿಯನ್ನ ಸಲ್ಲಿಸಿತು.
ಅತಿ ಹಿಂದುಳಿದ ವರ್ಗಗಳ ವೇದಿಕೆಯ ಗೌರವಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು, ಅಧ್ಯಕ್ಷರಾದ ಎಂ.ಸಿ ವೇಣುಗೋಪಾಲ್ ಅವರ ನೇತೃತ್ವದ ನಿಯೋಗ ಪ್ರಮುಖರನ್ನು ಭೇಟಿಯಾಗಿ ತನ್ನ ಮನವಿಯನ್ನು ಸಲ್ಲಿಸಿತು.

ಗೌರವಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಮಾತನಾಡಿ
ಮನವಿ ನೀಡುವ ಸಂದರ್ಭದಲ್ಲಿ ಅತಿ ಹಿಂದುಳಿದ ವರ್ಗಗಳ ವೇದಿಕೆಯ ಗೌರವಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಪ್ರವರ್ಗ 2(ಎ) ನಲ್ಲಿರುವ 102 ಅತಿ ಹಿಂದುಳಿದ ಜಾತಿ ವರ್ಗಗಳು ಒಂದಾಗಿ ಈ ಮನವಿಯನ್ನು ನೀಡುತ್ತಿದ್ದೇವೆ. ಪ್ರವರ್ಗ 2(ಎ) ಗೆ ಸೇರ್ಪಡೆಗೊಳಿಸುವಂತೆ ಹಲವಾರು ಪ್ರಬಲ ಸಮುದಾಯಗಳು ತಮ್ಮ ಬಲಪ್ರದರ್ಶನ ಮಾಡುತ್ತಿವೆ. ಈಗಾಗಲೇ ಪ್ರವರ್ಗ 2(ಎ) ದಲ್ಲಿರುವ ಹಲವಾರು ಅತಿ ಹಿಂದುಳಿದ ಜಾತಿಗಳು ಈ ಮೀಸಲಾತಿಯ ಪ್ರಯೋಜನವನ್ನು ಪಡೆದುಕೊಳ್ಳಲು ಆಗಿಲ್ಲ.
ಈ ಸಂದರ್ಭದಲ್ಲಿ ಇನ್ನು ಹೆಚ್ಚಿನ ಜಾತಿಗಳ ಸೇರ್ಪಡೆಯಿಂದಾಗಿ ಈಗಾಗಲೇ ಇರುವ ಜಾತಿಗಳಿಗೆ ತೊಂದರೆ ಉಂಟಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರವರ್ಗ 2(ಎ) ದಲ್ಲಿರುವ ಅತಿ ಹಿಂದುಳಿದ ಜಾತಿಗಳ ಅಸ್ತಿತ್ವ ಮತ್ತು ಆಸ್ಮಿತೆ ಕಾಪಾಡುವ ನಿರ್ಧಾರ ತಗೆದುಕೊಳ್ಳುವಂತೆ ಮನವಿ ಮಾಡಿದರು.

ಎಂ.ಸಿ ವೇಣುಗೋಪಾಲ್ ಮಾತನಾಡಿ
ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಎಂ.ಸಿ ವೇಣುಗೋಪಾಲ್ ಮಾತನಾಡಿ, ಪ್ರವರ್ಗ 2(ಎ) ಪಟ್ಟಿಯಲ್ಲಿರುವ ಅತಿ ಹಿಂದುಳಿದ ಸಮುದಾಯಗಳಿಗೆ ರಕ್ಷಣೆ ನೀಡುವ ಅವಶ್ಯಕತೆ ಇದೆ. ಅಲ್ಲದೆ ಈಗಾಗಲೇ ಸಿದ್ದಗೊಂಡಿರುವ ಜಾತೀವಾರು ಸಮೀಕ್ಷೆಯನ್ನು ಬಿಡುಗಡೆ ಮಾಡುವ ಮೂಲಕ ಪ್ರವರ್ಗ 2(ಎ) ದಲ್ಲಿರುವ ಜಾತಿಗಳಿಗೆ ರಕ್ಷಣೆ ನೀಡಿ ಎಂದು ಹೇಳಿದರು.

ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಮಾತನಾಡಿ
ವೇದಿಕೆಯ ಗೌರವ ಸಲಹೆಗಾರರಾದ ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಮಾತನಾಡಿ, ಕಳೆದ ಕೆಲವು ದಿನಗಳಿಂದಲೂ ತಮ್ಮನ್ನು ಪ್ರವರ್ಗ 2(a)ಗೆ ಸೇರಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ತರುವ ಹೋರಾಟವನ್ನು ಹಮ್ಮಿಕೊಂಡಿರುವ ʼವೀರಶೈವ ಪಂಚಮಸಾಲಿ' ಸಮುದಾಯ ಮತ್ತು ಇವರ ಹಾದಿಯಲ್ಲೇ ಹೊರಟ ಇತರೇ ಪ್ರಭಾವಿ ಸಮುದಾಯಗಳ ಒತ್ತಡವನ್ನು ಗಮನಿಸಿದರೆ ಈ ರಾಜ್ಯದಲ್ಲಿ ನಮ್ಮಂತಹ ಸಣ್ಣ ಪುಟ್ಟ ಸಮುದಾಯಗಳ ಭವಿಷ್ಯ ಅತ್ಯಂತ ಧಾರುಣವಾಗುವ ಸೂಚನೆಗಳು ಕಾಣುತ್ತಿವೆ. ಪ್ರವರ್ಗ 2(a) ನಲ್ಲಿ 15% ಮೀಸಲಾತಿ ಇದ್ದು ಇದನ್ನು 102 ಅತೀ ಹಿಂದುಳಿದ ಸಮುದಾಯಗಳು ಹಂಚಿಕೊಳ್ಳಬೇಕಿದೆ.
ಈ 15% ಮೀಸಲಾತಿ ಇನ್ನೂ ಅರ್ದದಷ್ಟು ದ್ವನಿಯೇ ಇಲ್ಲದ ಸಮುದಾಯಗಳಿಗೂ ತಲುಪಿಲ್ಲ!
ಆಶ್ಚರ್ಯವೆಂದರೆ ಇಲ್ಲಿನ ಅನೇಕ ಸಮುದಾಯಗಳಿಗೆ ಇಷ್ಟು ದಶಕಗಳಲ್ಲಿ ಒಮ್ಮೆಯೂ ಮೀಸಲಾತಿ ಸೌಲಭ್ಯ ದೊರೆತಿಲ್ಲ! ಇದರ ಬಗ್ಗೆ ತಮ್ಮ ಆಯೋಗ ಜಾತಿವಾರು ಸಮೀಕ್ಷೆಗಾಗಿ ಸಂಗ್ರಹಿಸಿರಬಹುದಾದ ದ್ವಿತೀಯ ಮೂಲದ(secondary source of information) ಮಾಹಿತಿಯನ್ನು ದಯವಿಟ್ಟು ಗಮನಿಸಬಹುದು ಎಂದರು.

ಸಲಹೆಗಾರ ಡಾ. ಸಿ.ಎಸ್ ದ್ವಾರಾಕಾನಾಥ್ ಮಾತನಾಡಿ
ವೇದಿಕೆಯ ಗೌರವ ಸಲಹೆಗಾರರಾದ ಡಾ. ಸಿ.ಎಸ್ ದ್ವಾರಾಕಾನಾಥ್ ಮಾತನಾಡಿ, ಸುಪ್ರೀಂ ಕೋರ್ಟ್ ನಿರ್ದೇಶನದ ಮೇಲೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ ಅಸ್ತಿತ್ವದಲ್ಲಿ ಇರುವಾಗ ಈಗಿನ ಮೀಸಲಾತಿ ಗೊಂದಲದ ಬಗ್ಗೆ ಮತ್ತೊಂದು "ಉನ್ನತ ಮಟ್ಟದ ಸಮಿತಿ"ಯನ್ನು ಸರ್ಕಾರ ಮಾಡಹೊರಟಿರುವುದು ಅನೈತಿಕ ಮತ್ತು ಅನಾವಶ್ಯಕ. ಈಗಿನ ಮೀಸಲಾತಿ ಗೊಂದಲವನ್ನು ಸದರಿ ಆಯೋಗವೇ ಪರಿಹರಿಸಬೇಕೆಂಬುದು ನಮ್ಮ ಆಶಯ. ಈ ಕಾರಣಕ್ಕೆ ಸದರಿ ಸಮಿತಿಯನ್ನು ಈ ಕೂಡಲೇ ರದ್ದು ಪಡಿಸಬೇಕೆಂದು ಸರ್ಕಾರವನ್ನು ನಮ್ರವಾಗಿ ಒತ್ತಾಯಿಸುತ್ತೇವೆ. ಈ ಎಲ್ಲಾ ಗೊಂದಲಗಳನ್ನು ಪರಿಹರಿಸುವ ಏಕೈಕ ಮಾರ್ಗ ಸರ್ಕಾರದ ಮುಂದಿರುವುದೆಂದರೆ ಹಿಂದುಳಿದ ವರ್ಗಗಳ ಆಯೋಗ ಮಾಡಿರುವ "ಜಾತೀವಾರು ಸಮೀಕ್ಷೆ" (socio economical & educational survey)ಯನ್ನು ಸ್ವೀಕರಿಸಿ ಸಾರ್ವಜನಿಕ ವಾಗಿ ಚರ್ಚೆಗೆ ಬಿಟ್ಟು ಆಯೋಗ ನೀಡಿರುವ ಅಂಕಿಅಂಶಗಳ ಆಧಾರದ ಮೇಲೆ ಈಗಿರುವ ಪಟ್ಟಿಗಳನ್ನು ಪುನರ್ ಪರಿಶೀಲಿಸಿ ಪರಿಷ್ಕೃತ ಪಟ್ಟಿಗಳನ್ನು ರೂಪಿಸಬೇಕು ಎಂದು ಹೇಳಿದರು.

ವಿಧಾನ ಪರಿಷತ್ತಿನ ಸದಸ್ಯರಾದ ಪಿ. ಆರ್. ರಮೇಶ್ ಮಾತನಾಡಿ
ವೇದಿಕೆಯ ಉಪಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸದಸ್ಯರಾದ ಪಿ. ಆರ್. ರಮೇಶ್ ಮಾತನಾಡಿ, ಇದು ಪ್ರವರ್ಗ 2(a) ನಲ್ಲಿರುವ ಅತಿ ಹಿಂದುಳಿದ, ಅಸಹಾಯಕ, ಅಸಂಘಟಿತ ಜಾತಿಗಳ ಜೀವನ್ಮರಣದ ಪ್ರಶ್ನೆ, ಹಾಗೇನಾದರೂ ಸರ್ಕಾರ ಬಲಿಷ್ಟರ ನ್ಯಾಯಬದ್ದವಲ್ಲದ ಒತ್ತಾಯಕ್ಕೆ ಮಣಿದರೆ ಇದು ತಬ್ಬಲಿ ಸಮುದಾಯಗಳ ಸಾಮೂಹಿಕ ಆತ್ಮಹತ್ಯೆಗೆ ಪ್ರೇರಣೆಯಾಗುತ್ತದೆ ಎಂದು ಅತ್ಯಂತ ನೋವಿನಿಂದ ಹೇಳುತ್ತಿದ್ದೇವೆ. ಬಲಿಷ್ಟರ ಈ ಅನ್ಯಾಯದ ಬೇಡಿಕೆಯನ್ನು ತೀವ್ರವಾಗಿ ವಿರೋಧಿಸುವ ನಾವು, ವೈಜ್ಞಾನಿಕವಾಗಿ, ನ್ಯಾಯಬದ್ದವಾಗಿ, ಸಾಂಪ್ರದಾಯಿಕವಾಗಿ ನಮಗೆ ದಕ್ಕಿರುವ ಹಕ್ಕು ಗಳಿಗೆ ಚ್ಯುತಿ ಬಾರದಂತೆ ನಮ್ಮ ಸಮುದಾಯಗಳಿಗೆ ರಕ್ಷಣೆ ನೀಡಿ ಸಾಮಾಜಿಕ ನ್ಯಾಯ ದಯಪಾಲಿಸಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಮನವಿ ಮಾಡುತ್ತೇವೆ. ಸರ್ಕಾರ ನಮ್ಮ ನೈತಿಕ ಮತ್ತು ನ್ಯಾಯಬದ್ದ ಮನವಿಯನ್ನು ಮಾನ್ಯ ಮಾಡದಿದ್ದರೆ ಪ್ರವರ್ಗ 2(a) ಪಟ್ಟಿಯಲ್ಲಿರುವ ಎಲ್ಲಾ 102 ಜಾತಿವರ್ಗಗಳು ಸಂಘಟಿತವಾಗಿ ಬೀದಿಗಿಳಿದು ರಾಜ್ಯಾದ್ಯಂತ ಹೋರಾಟ ಮಾಡುವುದು ಅನಿವಾರ್ಯ ಎಂದು ಈ ಮೂಲಕ ನಮ್ರವಾಗಿ ಎಚ್ಚರಿಸುತ್ತಿದ್ದೇವೆ ಎಂದು ಹೇಳಿದರು.
Recommended Video

ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ
ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಗೌರವಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು, ವೇದಿಕೆಯ ಅಧ್ಯಕ್ಷರು ಎಂ.ಸಿ ವೇಣು ಗೋಪಾಲ್ ನೇತೃತ್ವದ ನಿಯೋಗದಲ್ಲಿ, ಮಾಜಿ ಸಭಾಪತಿ ವಿ. ಆರ್. ಸುದರ್ಶನ್, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷರುಗಳಾದ ಡಾ. ಸಿ.ಎಸ್.ದ್ವಾರಕಾನಾಥ್, ಪ್ರೊ. ನರಸಿಂಹಯ್ಯ, ವಿದಾನಪರಿಷತ್ ಸದಸ್ಯರಾದ ಪಿ.ಆರ್.ರಮೇಶ್, ಕೆ.ಪಿ ನಂಜುಂಡಿ, ಪ್ರಧಾನ ಕಾರ್ಯದರ್ಶಿಗಳಾದ ಎಸ್ ಆರ್ ಯೆಲ್ಲಪ್ಪ, ವೇದಿಕೆಯ ಉಪಾಧ್ಯಕ್ಷ ರಾದ ಡಾ ಜಿ ರಮೇಶ್, ಹೆಚ್. ಸುಬ್ಬಣ್ಣ, ಸಿ. ನಂಜಪ್ಪ, ಬಿ. ವೆಂಕಟೇಶ್, ಬಸಬರಾಜು ಉಪಸ್ಥಿತರಿದ್ದರು.
ಅತಿ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಅನುದಾನ ನೀಡುವ ಭರವಸೆ: ಸಿಎಂ
ತಮ್ಮನ್ನು ಭೇಟಿಯಾದ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ನಿಯೋಗದ ಸಮಸ್ಯೆಗಳನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಆಲಿಸಿದರು. ನಂತರ ಮಾತನಾಡಿದ ಅವರು, ಈಗಾಗಲೇ ತಮ್ಮ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಜೊತೆಗೆ ಹಿಂದುಳಿದ ವರ್ಗಗಳಿಗೆ ಇನ್ನಷ್ಟು ಹೆಚ್ಚಿನ ಅನುದಾನವನ್ನು ನೀಡುವ ಹಾಗೂ ಇನ್ನಿತರ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರು.
-
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ












Click it and Unblock the Notifications