ಆಯುಷ್ ವೈದ್ಯರ ಸಮಸ್ಯೆಗಳ ಪರಿಹಾರಕ್ಕೆ ಅಸ್ತು ಎಂದ ಬಿ ಶ್ರೀರಾಮುಲು
ಬೆಂಗಳೂರು, ಮೇ 26: ಆಯುಷ್ ವೈದ್ಯರು ಮತ್ತು ಸಿಬ್ಬಂದಿ ವರ್ಗದ ಕುಂದು ಕೊರತೆ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು, ವೈದ್ಯರ ಹಾಗೂ ಅಧಿಕಾರಿಗಳ ಸಭೆ ಕರೆದಿದ್ದರು. ವಿವಿಧ ಬೇಡಿಕೆಗಳ ಈಡೇರಿಕಾಗಿ ಆಯುಷ ವೈದ್ಯರು ಹಾಗೂ ಸಿಬ್ಬಂದಿ ಕೆಲದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ.
Recommended Video
ಈ ವೇಳೆ ಸಚಿವರು, ವೈದರು ಮತ್ತು ಸಿಬ್ಬಂದಿಗಳ ಬೇಡಿಕೆಗೆ ನನ್ನ ಸಹಮತವಿದ್ದು ಪ್ರತಿಭಟನೆ ಹಿಂದಕ್ಕೆ ಪಡೆಯಲು ಮನವಿ ಮಾಡಿದ್ದೇನೆ ಎಂದಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಅಲೋಪತಿ ಗುತ್ತಿಗೆ ವೈದರಿಗೆ ಯಾವ ಆಧಾರದ ಮೇಲೆ ವೇತನ ಹೆಚ್ಚಿಸಲಾಗಿದೆಯೋ ಅದೇ ಮಾನದಂಡ ದ ಆಧಾರದ ಮೇಲೆ ಆಯುಷ್ ವೈದ್ಯರಿಗೆ ಸಹ ವೇತನ ಹೆಚ್ಚಿಸಲು ನಿರ್ಧರಿಸಲಾಗಿದೆ. NHM , RBSK ವೈದ್ಯರಿಗೆ ರಾಜ್ಯ ಸರ್ಕಾರ top up ವೇತನ ಕೊಡಲು ಆರ್ಥಿಕ ಇಲಾಖೆಗೆ ತಕ್ಷಣ ಕಡತ ಸಲ್ಲಿಸಲು ಸೂಚಿಸಲಾಗಿದೆ'' ಎಂದು ಸಚಿವರು ತಿಳಿಸಿದ್ದಾರೆ.
NHM , RBSK ವೈದ್ಯರಿಗೆ ವೇತನ ಹೆಚ್ಚಿಸಲು ಇದೇ ವರ್ಷದ PIP ಯಲ್ಲಿ ಅನುಷ್ಠಾನ ಗಳಿಸಲು ಕೇಂದ್ರದ ಅನುಮತಿ ಪಡೆಯಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

''ಆಯುಷ್ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ scholarship ಹೆಚ್ಚಿಸಲು ಆರ್ಥಿಕ ಇಲಾಖೆಗೆ ಕಡತ ಕಳಿಸಲು ತೀರ್ಮಾನಿಸಲಾಗಿದೆ. ವಿಶೇಷ ನೇಮಕಾತಿ ಘಟಕದ ಮುಖಾಂತರ 2000 MBBS ವೈದ್ಯರನ್ನು ನೇಮಕಾತಿ ಮಾಡಿಕೊಳ್ಳುವ ಮಾದರಿಯಲ್ಲಿ ಆಯುಷ್ ವೈದ್ಯರನ್ನು ಸಹ ನೇರ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ'' ಎಂದು ಶ್ರೀರಾಮುಲು ತಿಳಿಸಿದ್ದಾರೆ.












Click it and Unblock the Notifications