B-Khata: 15 ದಿನದಲ್ಲಿ ಎ-ಖಾತಾ ಭರವಸೆ ಎಲ್ಲಿ?, ಹಣ ಕಟ್ಟಿ ರಶೀದಿಗೆ ಪಾಲಿಕೆ ಕಚೇರಿಗೆ ಅಲೆಯುತ್ತಿರುವ ನಾಗರಿಕರು
ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಆಸ್ತಿಗಳ ಪರಿವರ್ತನೆಯಲ್ಲಿ ಉಂಟಾಗುವ ತೊಂದರೆ ನಿವಾರಣೆಗೆ ಸರ್ಕಾರ ಬಿ-ಖಾತಾ ಗಳನ್ನು ನಿಯಮಗಳಡಿ ಪರಿವರ್ತಿಸಿ ಎ-ಖಾತಾ ನೀಡುವ ಉಪ್ರಕಮ ಆರಂಭಿಸಿತ್ತು. ನವೆಂಬರ್‌ನಲ್ಲಿ ಶುರುವಾದ ಈ ಕಾರ್ಯಕ್ರಮಕ್ಕೆ ಒಂದೆರಡು ವಾರಗಳ ಹಿಂದಷ್ಟೇ ಎ- ಖಾತಾ ವಿತರಣೆ ಮಾಡಲಾರಂಭಿಸಿದೆ. ಇನ್ನೂ ಅರ್ಜಿ ಹಾಕಿ 1.67 ಲಕ್ಷ ರೂಪಾಯಿ ಪಾವತಿಸಿದಗೂ ಸಹ ಅರ್ಜಿ ಸ್ಟೇಟಸ್ ಬದಲಾಗಿಲ್ಲ. ಹಣ ಪಾವತಿ ರಶೀದಿ, ಅರ್ಜಿ ಸ್ಟೇಟಸ್ ಅಪ್ಡೇಟ್ ನೀಡದೇ ಪಾಲಿಕೆ ಸಿಬ್ಬಂದಿ ಸಾರ್ವಜನಿಕರನ್ನು ಸತಾಯಿಸುತ್ತಿರುವುದು ಬೆಳಕಿಗೆ ಬಂದಿದೆ.
ಅನಧಿಕೃತ ಆಸ್ತಿಗಳ ಬಿ-ಖಾತಾ ವನ್ನು ಕಾನೂನು ಬದ್ಧಗೊಳಿಸಲು, ಮಾರಾಟ, ನೋಂದಣಿ ಇನ್ನಿತರ ಅವಕಾಶಗಳಿಗೆ ಅನುಕೂಲವಾಗುವಂತೆ ಎ-ಖಾತಾ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ. ಇದಕ್ಕಾಗಿ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆದರೆ ಅರ್ಜಿ ಹಾಕಿದವರ ಪೈಕಿ ಹಲವರು ಒಂದಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲಿ ವಾರ್ಡ್ 161ರ ವ್ಯಾಪ್ತಿಗೆ ಬರುವ ಹೊಸಕೆರೆಹಳ್ಳಿ ನಿವಾಸಿ ಎಮ್. ಶ್ರೀನಿವಾಸ್ ಅವರು ಒಬ್ಬರು.

ಶುಲ್ಕ ಕಟ್ಟಿದ್ದಕ್ಕೆ ರಶಿದಿಯೇ ಇಲ್ಲ, ಅಧಿಕಾರಿಗಳ ನಿರ್ಲಕ್ಷ್ಯ
'ನಮ್ಮ ಬಿ-ಖಾತಾ ಸ್ವತ್ತಿನ ಮನೆಗೆ ಎ-ಖಾತಾಗೆ ವರ್ಗಾವಣೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದೇನೆ. ಈ ಸ್ವತ್ತು ನನ್ನ ಪತ್ನಿ ಸ್ವಾತಿ ಎನ್.ಕೆ. ಹೆಸರಿನಲ್ಲಿ ಇದೆ. ಕಳೆದ ಶುಕ್ರವಾರ, ಅಂದರೆ ಫೆಬ್ರವರಿ 12ರಂದು ನಿಯಮದಂತೆ ಶೇ.5ರಷ್ಟು ಮೊತ್ತವನ್ನು 1,67,771.45 (ಒಂದು ಲಕ್ಷದ ಅರವತ್ತೇಳು ಸಾವಿರದ ಏಳು ನೂರಾ ಎಪ್ಪತ್ತೊಂದು) ರೂಪಾಯಿ ಆನ್ ಲೈನ್ ಮೂಲಕ ಪಾವತಿ ಮಾಡಿದ್ದೇನೆ. ಆದರೆ ಏಳು ದಿನಗಳ ನಂತರವೂ ಆ ಪಾವತಿಯು 'ಪೆಂಡಿಂಗ್' ಎಂಬ ಸ್ಟೇಟಸ್ ತೋರಿಸುತ್ತಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪಾಲಿಕೆ ಕಚೇರಿಗೆ ತೆರಳಿ ಸಿಬ್ಬಂದಿ, ಅಧಿಕಾರಿಗಳನ್ನು ಪ್ರಶ್ನಿಸಿದರೂ ನನಗೆ ಯಾವುದೇ ಸ್ಪಷ್ಟತೆಯೇ ಸಿಗುತ್ತಿಲ್ಲ. ಹಾಗಾದರೆ ಅರ್ಜಿ ವಿಲೇವಾರಿ, ಹಣ ಪಾವತಿ ಸಂದರ್ಭದಲ್ಲಿ, ಖಾತಾ ವಿತರಣೆ ಪ್ರಕ್ರಿಯೆ ವೇಳೆ ಪಾಲಿಕೆ ಹೊಣೆಗಾರರಲ್ಲವೇ. ಅರ್ಜಿ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಲು ಸರ್ಕಾರ ಸಹಾಯವಾಣಿ, ಇತರ ವ್ಯವಸ್ಥೆ ಮಾಡಿಕೊಂಡಿಲ್ಲವೇ? ಎಂದು ಅವರು ಪಶ್ನಿಸಿದ್ದಾರೆ. ನಮ್ಮ ಹಣ ಎಲ್ಲಿ ಹೋಯಿತು, ಮರಳಿ ಕೈ ಸೇರುತ್ತಾ? ಅಥವಾ ಪಾಲಿಕೆ ರಶೀದಿ ನೀಡುತ್ತಾ? ಯಾವುದಕ್ಕೂ ಸ್ಪಷ್ಟತೆ ಇಲ್ಲದಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ವಾರ ಕಳೆದರೂ ಹಣ ಪಾವತಿ ಪೆಂಡಿಂಗ್
ಅರ್ಜಿ ಸಲ್ಲಿಕೆ ವೇಳೆ ಪಾವತಿಸಿದ್ದ ಹಣವು ನಮ್ಮ ಖಾತೆಯಿಂದ ಡೆಬಿಟ್ ಆಗಿದೆ. ಆದರೆ ಆ ಮೊತ್ತಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕಡೆಯಿಂದ ಯಾವುದೇ ರಸೀದಿ ಜನರೇಟ್ ಆಗಿಲ್ಲ. ಆ ಹಣವು ಆನ್ ಲೈನ್ ಸ್ಟೇಟಸ್ ಪೆಂಡಿಂಗ್ ಅಂತಲೇ ತೋರಿಸುತ್ತಿದೆ. ಇಷ್ಟು ದೊಡ್ಡ ಮೊತ್ತ ಹೀಗೆ ಒಂದು ವಾರ ಕಳೆದರೂ ಯಾವ ಸ್ಥಿತಿಯಲ್ಲಿದೆ ಎಂಬುದು ಗೊತ್ತಾಗುತ್ತಿಲ್ಲ. ಇನ್ನು ಯಾರು ಈ ಸಮಸ್ಯೆಯನ್ನು ಬಗೆಹರಿಸಬಹುದು ತಿಳಿಯುತ್ತಿಲ್ಲ' ಎಂದು ಅವರು ಆತಂಕ ವ್ಯಕ್ತಪಡಿಸಿದರು. ಇದರೊಂದಿಗೆ ಅವರು ಹಣ ಪಾವತಿಸಿದ್ದು ಸೇರಿ ಕೆಲವು ದಾಖಲೆಗಳನ್ನು ಹಿಡಿದು ಕಚೇರಿಗೆ ಅಲೆದರೂ, ಸಿಬ್ಬಂದಿಯಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ತೊಂದರೆ ಅನುಭವಿಸುಂತಾಗಿದೆ' ಎಂದು ಅವರು ದೂರಿದರು.
ಪಾಲಿಕೆ ಅಧಿಕಾರಿಗಳೇ ಸಮಸ್ಯೆಗೆ ಪರಿಹಾರ ಕೊಡಿ?
'ಹೊಸಕೆರೆ ಹಳ್ಳಿಯ ನಮ್ಮ ಆಸ್ತಿಯ ಇಪಿಐಡಿ ಸಂಖ್ಯೆ- 2320169004. ಅದರ ಆಸ್ತಿ ತೆರಿಗೆ ಪಾವತಿ ಸಂಖ್ಯೆ- 8000188789, ಇನ್ನೂ ಪೇ ಯು ಮೂಲಕ ಪಾವತಿಸಿದ ಶುಲ್ಕ ಪಾವತಿಸಿದ ಐಡಿ ಸಂಖ್ಯೆ 27277109848 ಜೊತೆಗೆ ಒಂದಷ್ಟು ಸ್ಕ್ರೀನ್ ಶಾಟ್ ಗಳನ್ನು ಹಂಚಿಕೊಂಡಿದ್ದಾರೆ. ಪರಿಹಾರಕ್ಕಾಗಿ ಪಾಲಿಕೆಗೆ ಇ-ಮೇಲ್ ಸಹ ಮಾಡಿದ್ದಾಗಿ' ಅವರು ತಿಳಿಸಿದ್ದಾರೆ. ಇದು ಇವರೊಬ್ಬ ಸಮಸ್ಯೆಯಲ್ಲ, ಹೊಸ ನಿವೇಶನಗಳಿಗೆ ಎ-ಖಾತಾ ನೀಡದಿರುವುದು, ಸಕಾಲಕ್ಕೆ ಬಿ-ಖಾತಾಗಳು ಎ ಖಾತಾ ಆಗಿ ಪರಿವರ್ತನೆ ಆಗದಿರುವುದು ಸೇರಿ ಹಲವು ಸಮಸ್ಯೆಗಳನ್ನು ಕೆಲವು ಎದುರಿಸುತ್ತಿದ್ದಾರೆ.
'ಜನಸಾಮಾನ್ಯರಿಗಾಗಿ ಜಾರಿಗೆ ತಂದ ಯೋಜನೆಯನ್ನು ನಂಬಿ ಅರ್ಜಿ ಸಲ್ಲಿಸಿದ್ದೇವೆ. ದೊಡ್ಡ ಮೊತ್ತದ ಹಣವನ್ನು ಪಾವತಿಸಿದ್ದೇವೆ. ಹಣ ಕಟ್ಟಿ ಎ ಖಾತಾ ವಿತರಣೆ ಎದರು ನೋಡುತ್ತಿದ್ದ ನಮಗೆ ಆತಂಕ ಶುರುವಾಗಿದೆ. ನಮ್ಮ ವಾರ್ಡ್ ವ್ಯಾಪ್ತಿಯ ಎಆರ್ಒಯಿಂದ ಹಿಡಿದು, ಜಿಬಿಎ ಕೇಂದ್ರ ಕಚೇರಿವರೆಗೆ ಅಲೆದರೂ ಯಾರೊಬ್ಬರು ಇದಕ್ಕೆ ಸರಿಯಾದ ಉತ್ತರ ನೀಡುತ್ತಿಲ್ಲ. ತಾವು ಇದಕ್ಕೆ ಜವಾಬ್ದಾರರಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇನ್ನೂ ಸ್ವಲ್ಪ ದಿನ ಕಾಯಿರಿ ಎನ್ನುತ್ತಿದ್ದಾರೆ. ಸಿಬ್ಬಂದಿ ಮುಖದಲ್ಲಿ ಪ್ರಶ್ನೆ ಕಾಣುತ್ತದೆಯೇ ಹೊರತು ಪರಿಹಾರವಲ್ಲ' ಎಂದು ಅವರು ಬೇಸರ ಹೊರ ಹಾಕಿದರು.
15 ದಿನದಲ್ಲಿ ಎ ಖಾತಾ ನೀಡಬೇಕು?
ಡಿಸಿಎಂ ಡಿಕೆ ಶಿವಕುಮಾರ್ ಅವರು ಕಳೆದ ಅಕ್ಟೋಬರ್ ತಿಂಗಳಲ್ಲಿ '100 ದಿನ ಅಭಿಯಾನ'ಕ್ಕೆ ಚಾಲನೆ ನೀಡಿದ್ದಾರೆ. ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಬಿ-ಖಾತಾ ಆಸ್ತಿ ಮಾಲೀಕರು ನಿಗದಿತ ಹಣ ಪಾವತಿಸಿ ಅರ್ಜಿ ಸಲ್ಲಿಸಿದರೆ ಅವರಿಗೆ 15 ದಿನಗಳಲ್ಲಿ ಎ ಖಾತಾ ವಿತರಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದು ಕೆಲವರ ಪಾಲಿಗೆ ಭರವಸೆಯಾಗಿಯೇ ಉಳಿದಿದೆ. ಅರ್ಜಿ ಸಲ್ಲಿಸಲು ನೀವು ಕಚೇರಿಗೆ ಹೋಗಬೇಕಿಲ್ಲ. ಮನೆಯಲ್ಲಿ ಕೂತೆ ಅರ್ಜಿ ಸಲ್ಲಿಸಿ, ಹಣ ಪಾವತಿಸಿದರೆ ಪರಿವರ್ತನೆಗೊಂಡ ಎ-ಖಾತಾ ನಿಮ್ಮ ಕೈ ಸೇರುತ್ತದೆ ಎಂದಿದ್ದರು. ಮಾತ್ರವಲ್ಲದೇ ಈ ಸಂಬಂಧ ಅಧಿಕಾರಿಗಳಿಗೆ ಒಂದಷ್ಟು ನಿರ್ದೇಶನ ನೀಡಿದ್ದರು.
.@BBMPCOMM I have paid aamount of ₹1.67 Lakhs for A-Khata conversion (EPID: 2320169004) on Feb 13. Money is gone from my bank, but BBMP portal shows 'Pending'. No response from ARO office. Requesting immediate intervention. @DKShivakumar @BBMP_IT @PayUIndia #NammaBengaluru #BBMP pic.twitter.com/FFPczo5cL3
— Srinivasa (@sreekabeer) February 18, 2026
ಅರ್ಜಿದಾರರಿಗೆ ಸೂಕ್ತ ಸಹಾಯ, ನೆರವು ಸಿಗಬೇಕು
ಯೋಜನೆಗೆ ಚಾಲನೆ ನೀಡಿದ ಬಳಿಕ ಸಾಕಷ್ಟು ಜನರು ಅರ್ಜಿ ಸಲ್ಲಿಸಿದ್ದಾರೆ. ಆಸ್ತಿಯ ಶೇ.5ರಷ್ಟು ಶುಲ್ಕ ಪಾವತಿ ಬೃಹತ್ ಮೊತ್ತವಾಗುತ್ತದೆ ಎಂದು ಒಂದಷ್ಟು ದೂರುಗಳು ಕೇಳಿ ಬಂದವು. ಹೀಗಿದ್ದರು ಅಷ್ಟು ಹಣ ಕಟ್ಟಿದವರಿಗೆ ಸರಿಯಾಗಿ ಎ ಖಾತಾ ಸಿಗುತ್ತಿಲ್ಲ. ಖಾತಾಗಳಿಗೆ ಸಂಬಂಧಿಸಿದಂತೆ ಅರ್ಜಿದಾರರು ಅರ್ಜಿ, ಹಣದ ಸ್ಟೇಟಸ್ ತಿಳಿಯಲು ಸಂಪರ್ಕಿಸಲು ಸಹಾಯವಾಣಿ, ಸಿಬ್ಬಂದಿಯಿಂದ ಸಹಾಯ ಸಿಗುವ ವ್ಯವಸ್ಥೆ ಮಾಡಬೇಕಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications