ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನವರಿ 2ರಿಂದ ಸಜ್ಜನ್‌ರಾವ್ ವೃತ್ತದಲ್ಲಿ ಅವರೆ ಮೇಳ

|
Google Oneindia Kannada News

ಬೆಂಗಳೂರು, ಡಿ. 28 : ಅವರೆ ಹಾಗೂ ಅವರೆ ಖಾದ್ಯಗಳ ಪ್ರಿಯರಿಗೆ ಸಿಹಿಸುದ್ದಿ. ಬೆಂಗಳೂರಿನ ಸಜ್ಜನ್‌ರಾವ್ ವೃತ್ತದಲ್ಲಿ ಜ.2ರಿಂದ 14ರವರೆಗೆ 2014ರ ಅವರೆ ಮೇಳ ನಡೆಯಲಿದೆ. ಅವರೆ ಬೇಳೆಯಿಂದ ತಯಾರಿಸಿದ ಜಿಲೇಜಿ ಈ ಬಾರಿಯ ಮೇಳದ ಸ್ಪೆಷಲ್.

ವಾಸವಿ ಕಾಂಡಿಮೆಂಟ್ಸ್ ಜ.2ರಿಂದ 14ರವರೆಗೆ ವಿವಿ ಪುರಂನ ಸಜ್ಜನ್‌ರಾವ್ ವೃತ್ತದಲ್ಲಿ ಅವರೆ ಮೇಳವನ್ನು ಆಯೋಜಿಸಿದೆ ಎಂದು ಮೇಳದ ಆಯೋಜಕಿ ಗೀತಾ ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಚಿಕ್ಕಪೇಟೆ ಶಾಸಕ ಆರ್‌.ವಿ.ದೇವರಾಜ್ ಮೇಳವನ್ನು ಉದ್ಘಾಟಿಸಲಿದ್ದಾರೆ.

Avare Mela

ಗ್ರಾಹಕರು ಹಾಗೂ ರೈತರ ನಡುವೆ ನೇರ ವಹಿವಾಟಿಗೆ ವೇದಿಕೆ ಕಲ್ಪಿಸಲು 14 ವರ್ಷಗಳಿಂದ ಅವರೆ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದು ಗೀತಾ ಶಿವಕುಮಾರ್ ಹೇಳಿದರು. ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ನಟರಾದ ಪ್ರಜ್ಜಲ್ ದೇವರಾಜ್, ಗಣೇಶ್, ನಟಿಯರಾದ ತಾರಾ ಅನುರಾಧ, ಸಂಜನಾ ಮುಂತಾದವರು ಪಾಲ್ಗೊಳ್ಳಲಿದ್ದಾರೆ. [ಹಾಲಿನ ದರ ಏರಿಕೆ ಪ್ರಸ್ತಾವನೆ ಮುಂದಿಟ್ಟ ಕೆಎಂಎಫ್]

ಮಾಗಡಿ, ಹುಣಸೂರು, ಮುಳುಬಾಗಿಲು, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳ ರೈತರು ಅವರೆ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ತಾಜಾ ಅವರೆ ಕಾಯಿಗಳ ಜೊತೆ ಅವರೆಯಿಂದ ತಯಾರಿಸಿದ ವಿವಿಧ ಖಾದ್ಯಗಳು ಮೇಳದಲ್ಲಿ ದೊರೆಯಲಿವೆ. [ಕೊಪ್ಪಳ ರೈತರ ಬಾಯಲ್ಲಿ ಪಪ್ಪಾಯಿ ಜಪ!]

ಅವರೆ ಜಿಲೇಬಿ : ಈ ಬಾರಿಯ ಮೇಳದಲ್ಲಿ ಅವರೆ ಬೇಳೆಯಿಂದ ತಯಾರಿಸಿದ ಜಿಲೇಬಿಯನ್ನು ಪರಿಚಯಿಸಲಾಗುತ್ತದೆ. ಜಿಲೇಬಿ ಜೊತೆಗೆ ಅವರೆ ಬೇಳೆ ದೋಸೆ, ಪಾಯಸ, ಮಸಾಲ ವಡೆ, ಚಿತ್ರಾನ್ನ, ಹೋಳಿಗೆ, ಅವಲಕ್ಕಿ ಮಿಕ್ಸ್, ಜಾಮೂನು, ಅವರೇಕಾಳು ಉಪ್ಪಿಟ್ಟು ಸೇರಿದಂತೆ ವಿವಿಧ ಖಾದ್ಯಗಳು ಮೇಳದಲ್ಲಿರುತ್ತವೆ.

English summary
Avare Mela is back in Bengaluru. Sri Vasavi condiments is organizing annual Avare Mela from January 2 to 14 in Sajjan Rao Circle in VV Puram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X