Pani Puri: 2050ರಲ್ಲಿ ಹೀಗಿರಲಿವೆ ಪಾನಿ ಪೂರಿ ಅಂಗಡಿ: HSR ಲೇಔಟ್‌ನಲ್ಲಿ ಹೈಟೆಕ್ ಶಾಪ್
ಪಾನಿ ಪೂರಿ ಮೇಲಿನ ಭಾರತೀಯರ ಪ್ರೀತಿಯನ್ನು ಅಕ್ಷರಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ. ಈ ಪದಾರ್ಥವನ್ನು ಚಿಕ್ಕ ಮಕ್ಕಳಿಂದ ಸೆಲಿಬ್ರಿಟಿ ವರೆಗೂ ಇಷ್ಟ ಪಡುವವರೆ. ರಸ್ತೆಯ ಬದಿಯಲ್ಲಿ ಹೊರಟಾಗ ನಿಮ್ಮ ಕಣ್ಣಿಗೆ ಪಾನಿ ಪೂರಿ ಅಂಗಡಿ ಕಂಡರೆ ಬಾಯಲ್ಲಿ ನೀರು ಬರುವುದು ಗ್ಯಾರಂಟಿ. ಈ ಪಾನಿ ಪೂರಿಗೆ ಈಗ ಹೈಟೆಕ್ ಟಚ್ ನೀಡಲಾಗಿದೆ.
ಐಟಿ ಹಬ್ ಎಂದೇ ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಈಗ ಒಂದು ಪಾನಿ ಪೂರಿ ಅಂಗಡಿ ಎಲ್ಲರ ಮನ ಗೆಲ್ಲುತ್ತಿದೆ. ಈ ಪಾನಿ ಪೂರಿ ತಿನ್ನಲ್ಲು ಚಿಣ್ಣರು ತಾ ಮುಂದು, ನಾ ಮುಂದು ಎಂದು ಬರುತ್ತಿದ್ದಾರೆ.

ಈ ಅಂಗಡಿಯನ್ನು ಒಮ್ಮೆ ನೋಡಿದರೆ, ಭವಿಷ್ಯದ ಕಲ್ಪನೆ ಕಾಣಬಹುದಾಗಿದೆ. ಬೆಂಗಳೂರಿನ ಸಾಮಾನ್ಯ ಜನರು 2024ರಲ್ಲಿ ಬಾಳುತ್ತಿದ್ದರೆ, ಎಚ್‌ಎಸ್‌ಆರ್ ಲೇಔಟ್‌ನ ಈ ಅಂಗಡಿ 2050ಕ್ಕೆ ನಿಮ್ಮನ್ನು ಕರೆದುಕೊಂಡು ಹೋಗುವುದರಲ್ಲಿ ಯಾವುದೇ ಸಂಶಯ ಇಲ್ಲ.
ಹೈಟೆಕ್ ಶಾಪ್
ಮೊದಲೆಲ್ಲಾ ಒಂದೇ ರೀತಿಯ ಪಾನಿ ಪೂರಿ ಸಿಗುತ್ತಿತ್ತು ಆದರೆ, ಈಗ ಕಾಲ ಬದಲಾಗಿದೆ. ವಿಭಿನ್ನ ರೀತಿಯ ಪಾನಿಗಳನ್ನು ಜನರು ಆಸ್ವಾದಿಸಬಹುದಾಗಿದೆ. ಈ ಅಟೋ ಮೆಟಿಕ್ ಮಶೀನ್ ಜನರ ಚಿತ್ತ ಕದ್ದಿದೆ. ಈಗಾಗಲೇ ಈ ಮಶೀನ್ ಇಂಟರ್ನೆಟ್‌ನಲ್ಲಿ ಸಂಚಲನವನ್ನು ಮೂಡಿಸಿದೆ. @benedictgershom ಬಳಕೆದಾರ ಒಂದು ಫೋಟೋ ಹಾಗೂ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಈ ಮಶೀನ್ ಒಮ್ಮೆ ನೋಡಿದರೆ ಸಾಕು, ಒಮ್ಮೆ ಹೋಗಿ ಟ್ರಯಲ್ ಪಾನಿ ಪೂರಿಯನ್ನು ತಿಂದು ಬಿಡಬೇಕು ಅನಿಸುತ್ತದೆ. ಇದನ್ನು ಒಂದು ಕಬ್ಬಿಣ್ಣದ ಚೌಕಾಕಾರದ ಒಂದು ಪೆಟ್ಟಿಗೆ ಕಾಣುತ್ತದೆ. ಈ ಪೆಟ್ಟಿಗೆಗೆ ನಾಲ್ಕು ಸ್ಟೀಲ್ ಪೈಪ್‌ಗಳನ್ನು ನೀಡಲಾಗಿದೆ. ನೀವು ಪೂರಿ ತೆಗೆದುಕೊಂಡು ಬಂದು ಈ ಪೈಪ್ ಮುಂದೆ ಹಿಡಿದರೆ ಸಾಕು, ಇದರಲ್ಲಿ ಹಾಕಿದ್ದ ನೀರಿನ ಫ್ಲೇವರ್ ಪೂರಿಗೆ ಸೇರುತ್ತದೆ. ಈ ಪಾನಿ ಪೂರಿಯನ್ನು ಸೇವಿಸಲು ಚಿಣ್ಣರು ಆಕರ್ಷಿತರಾಗಿದ್ದಾರೆ.
ಸಖತ್ ವೈರಲ್
ಜುಲೈ 14 ರಂದು ಪೋಸ್ಟ್ ಮಾಡಲಾಗಿದೆ. ಈಗಾಗಲೇ 11,14,000 ಜನರನ್ನು ವೀಕ್ಷಿಸಿದ್ದಾರೆ. ಸ್ವಯಂ ಚಾಲಿತ ಪಾನಿ ಪೂರಿ ಮಶೀನ್ ಸಕತ್ ಟ್ರೆಂಡ್ ಆಗುತ್ತಿದೆ. ಈ ಪೋಸ್ಟ್‌ಗೆ ಜನರು ವಿವಿಧ ರೀತಿಯ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ವಾಟ್ ದಿ ಫ್ಲೇವರ್ಸ್‌ನಿಂದ ನಿರ್ಮಿಸಲಾಗಿದೆ. ಈ ಅಂಗಡಿಯಲ್ಲಿ ಸಿಬ್ಬಂದಿಗಳು ಸದಸ್ಯರ ಹೈಜಿನ್ ಬಗ್ಗೆ ಹೆಚ್ಚಿನ ಒತ್ತನ್ನು ನೀಡುತ್ತಾರೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications