ಆಟೋ ದಿನ: ಶಂಕರ್‌ನಾಗ್ ನೆನಪಲ್ಲಿ ಆಟೋ ಅಣ್ಣಂದಿರ ಉತ್ಸವ
ಬೆಂಗಳೂರು, ನವೆಂಬರ್ 17: ದಿವಂಗತ ನಟ ಶಂಕರ್‌ನಾಗ್ ನೆನಪಲ್ಲಿ ಜಯನಗರದ ಶಾಲಿನಿ ಗ್ರೌಂಡ್‌ನಲ್ಲಿ ಇಂದು ಆಟೋ ದಿನ ಆಯೋಜಿಸಲಾಗಿತ್ತು. ನೂರಾರು ಆಟೋ ಡ್ರೈವರ್‌ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪೀಸ್ ಆಟೋ, ನಮ್ಮ ಆಟೋ, ಮಹೀಂದ್ರಾ, ಒಯೋ ಸಹಯೋಗದೊಂದಿಗೆ ಆಯೋಜಿಸಿದ್ದ ಈ ಆಟೋ ರಿಕ್ಷಾ ದಿನದ ಮುಖ್ಯ ಅತಿಥಿ ನಟ ಶ್ರೀಮುರಳಿ.
ಆಟೋ ರಿಕ್ಷಾ ದಿನದ ಸಂದರ್ಭದಲ್ಲಿ 'ನಮ್ಮ ಆಟೋ' ಸ್ವಯಂ ಸೇವಾ ಸಂಸ್ಥೆಯು ಆಟೋ ಡ್ರೈವರ್‌ಗಳಿಗೆಂದು ಸಹಕಾರ ಸಂಘವನ್ನು ಉದ್ಘಾಟಿಸಿತು. ಸಹಕಾರ ಸಂಘದಲ್ಲಿ ಆಟೋ ಡ್ರೈವರ್‌ಗಳಿಗೆ ಕಡಿಮೆ ಬಡ್ಡಿಗೆ ಸಾಲ ಸೌಲಭ್ಯ, ಫೋರ್ ಸ್ಟ್ರೋಕ್ ಆಟೋ ಕೊಳ್ಳಲು ಸಹಾಯಧನ ಮತ್ತಿತರೆ ಸಹಾಯಗಳನ್ನು ನೀಡಲಾಗುತ್ತದೆ.

ಎಲೆಕ್ಟ್ರಿಕ್ ಆಟೋ ಟ್ರಿಯೋ ಪ್ರದರ್ಶನ
ಮಹೀಂದ್ರಾ ಸಂಸ್ಥೆಯು ನಿನ್ನೆಯಷ್ಟೆ ಬಿಡುಗಡೆ ಆದ ತನ್ನ ಎಲೆಕ್ಟ್ರಿಕ್ ಆಟೋ 'ಟ್ರಿಯೋ'ವನ್ನು ಪ್ರದರ್ಶನಕ್ಕೆ ಇಟ್ಟಿತ್ತು. ಆಟೋ ಡ್ರೈವರ್‌ಗಳು ಎಲೆಕ್ಟ್ರಿಕ್ ಆಟೋವನ್ನು ಚಲಾಯಿಸಿ ನೋಡಿ ಖುಷಿ ಪಟ್ಟರು. ಹೊಸ ಮಾದರಿಯ ಆಟೋ ಬಗ್ಗೆ ತಜ್ಞರಿಂದ ಮಾಹಿತಿ ಪಡೆದರು.

ಸಿಂಗರಿಸಿದ ನೂರಾರು ಆಟೋಗಳು
ಆಟೋ ರಿಕ್ಷಾ ದಿನದ ಅಂಗವಾಗಿ ಸಿಂಗರಿಸಿದ ನೂರಾರು ಆಟೋಗಳು ಶಾಲಿನಿ ಗ್ರೌಂಡ್‌ನ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ ತುಂಬಿದ್ದವು. ನಮ್ಮ ಆಟೋ ಸಂಸ್ಥೆಯು ಚಾಲಕರ ಕೋಡ್‌ನ ಬೋರ್ಡ್‌ಗಳನ್ನು ಆಟೋ ಚಾಲಕರಿಗೆ ವಿತರಿಸಿತು.

ಸಭ್ಯತೆಯ ಬೋರ್ಡ್ ವಿತರಣೆ
ಗ್ರಾಹಕರೊಂದಿಗೆ ಸಭ್ಯತೆಯೊಂದಿಗೆ ವರ್ತಿಸುವುದು, ಸಂಚಾರಿ ನಿಯಮಗಳನ್ನು ಪಾಲಿಸುವುದು, ಮೀಟರ್ ಶುಲ್ಕ ಮಾತ್ರವೇ ಪಡೆಯುವುದು, ಸಮವಸ್ತ್ರ ಮತ್ತು ಬ್ಯಾಡ್ಜ್ ಧರಿಸುವುದು, ಮಹಿಳೆಯರು, ಹಿರಿಯರು, ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನ ಕೊಡುವುದು, ಬಾಡಿಗೆಯನ್ನು ನಯವಾಗಿ ನಿರಾಕರಿಸುವುದು, ಚಾಲನೆ ಸಮಯದಲ್ಲಿ ಮಧ್ಯಪಾನ, ಧೂಮಪಾನ ಮಾಡದೇ ಇರುವುದು ಇದೇ ಹಲವು ನಿಯಮಗಳುಳ್ಳ ಬೋರ್ಡ್‌ಗಳನ್ನು ಆಟೋ ಚಾಲಕರಿಗೆ ವಿತರಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮ
ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮವೂ ಆಯೋಜಿಸಲಾಗಿತ್ತು, ಡಾನ್ಸ್ ಶಾಲೆಯ ವಿದ್ಯಾರ್ಥಿಗಳು ಕನ್ನಡ ಹಾಡುಗಳಿಗೆ ಕುಣಿದು ನೆರೆದಿದ್ದವರನ್ನು ರಂಜಿಸಿದರು. ನೂರಾರು ಸಂಖ್ಯೆಯಲ್ಲಿ ಆಟೋ ಚಾಲಕರು ಮತ್ತು ಕುಟುಂಬ ವರ್ಗದವರು ಅಲ್ಲಿ ಸೇರಿದ್ದರು.












Click it and Unblock the Notifications