ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಇಂದಿನಿಂದಲೇ (ಡಿ.1) ಆಟೋ ಪ್ರಯಾಣ ದರ ಏರಿಕೆ; ಆಟೋ ಗ್ಯಾಸ್ ದರವೂ ಏರಿಕೆ!

|
Google Oneindia Kannada News

ಬೆಂಗಳೂರು, ಡಿಸೆಂಬರ್ 1: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಇಂದಿನಿಂದ(ಡಿ.1) ಏರಿಕೆಯಾಗಿದ್ದು, ಪ್ರಯಾಣಿಕರಿಗೆ ಹೊರೆಯಾಗಿ ಪರಿಣಮಿಸಿದೆ. ಕಳೆದ ಮೂರು ತಿಂಗಳಿನಿಂದ ಪ್ರಯಾಣ ದರ ಏರಿಕೆ ಮಾಡಬೇಕು ಎಂದು ಆಟೋ ಚಾಲಕರು ಹೋರಾಟ ನಡೆಸುತ್ತಿದ್ದರು. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ.

ಜನರು ಈಗಾಗಲೇ ಅಗತ್ಯ ವಸ್ತಗಳು ಬೆಲೆ ಏರಿಕೆಯ ಸಂಕಷ್ಟದ ಸಮಯದಲ್ಲೇ ಆಟೋ ರಿಕ್ಷಾ ಪ್ರಯಾಣ ದುಬಾರಿ ಆಗುತ್ತಿದೆ. ಪೆಟ್ರೋಲ್, ಡೀಸೆಲ್‌ನಿಂದ ಹಿಡಿದು ತರಕಾರಿ ಮತ್ತು ಇತರ ವಸ್ತುಗಳ ಬೆಲೆ ಏರಿಕೆ ಆಗಿದೆ. ಇಂತಹ ಕ್ಲಿಷ್ಟ ಸಂದರ್ಭದಲ್ಲೇ ಆಟೋ ಚಾಲಕರು ಶಾಕ್ ನೀಡಿದ್ದಾರೆ.

ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳ ಮಾಡಿ ಬೆಂಗಳೂರು ನಗರ ಜಿಲ್ಲೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ಆಟೋ ದರ ಪರಿಷ್ಕರಣೆ ಕುರಿತು ಕೂಲಂಕುಷವಾಗಿ ಪರಿಶೀಲಿಸಿ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ. ಹಲವು ದಿನಗಳಿಂದ ಆಟೋ ದರ ಏರಿಕೆ ಕುರಿತು ಚರ್ಚೆ ನಡೆಯುತ್ತಿದ್ದು, ಅಂತಿಮವಾಗಿ ದರ ಏರಿಕೆಯಾಗಿದೆ.

ಆಟೋ ದರಗಳನ್ನು ಪರಿಷ್ಕರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿತ್ತು. ಆಟೋ ಚಾಲಕರ ಸಂಘ ಈ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ದರ ಪರಿಷ್ಕರಣೆ ಮಾಡಲಾಗಿದೆ. ಹೊಸ ದರ ಡಿಸೆಂಬರ್ 1ರಿಂದ ಜಾರಿಗೆ ಬಂದಿದೆ.

 ಆಟೋ ದರ ಎಷ್ಟು ಏರಿಕೆ?

ಆಟೋ ದರ ಎಷ್ಟು ಏರಿಕೆ?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕನಿಷ್ಠ ಪ್ರಯಾಣ ದರ ಮೊದಲ 2 ಕಿಲೋಮೀಟರ್‌ಗೆ ರೂ. 30 ಆಗಿದೆ (ಮೂವರು ಪ್ರಯಾಣಿಕರು). ನಂತರ ಪ್ರತಿ ಕಿಲೋಮೀಟರ್ ದರ 15 ರೂಪಾಯಿ ದರ ನಿಗದಿ ಮಾಡಲಾಗಿದೆ (ಮೂವರು ಪ್ರಯಾಣಿಕರು ಮಾತ್ರ).

ಆಟೋಗಳ ಕನಿಷ್ಠ ಪ್ರಯಾಣದರ ಮಾತ್ರವಲ್ಲ ಕಾಯುವಿಕೆ ದರ (ವೈಟಿಂಗ್ ಚಾರ್ಜ್) ಸಹ ಹೆಚ್ಚಳ ಮಾಡಲಾಗಿದೆ. ಮೊದಲ ಐದು ನಿಮಿಷ ಕಾಯುವಿಕೆ ಉಚಿತ. ಮೊದಲ ಐದು ನಿಮಿಷದ ನಂತರ ಪ್ರತಿ ಹದಿನೈದು ನಿಮಿಷ ಅಥವಾ ಅದರ ಭಾಗಕ್ಕೆ 5 ರೂ. ದರ ನಿಗದಿ ಮಾಡಲಾಗಿದೆ.

 8 ವರ್ಷಗಳ ಬಳಿಕ ಆಟೋ ಪ್ರಯಾಣ ದರ ಏರಿಕೆ

8 ವರ್ಷಗಳ ಬಳಿಕ ಆಟೋ ಪ್ರಯಾಣ ದರ ಏರಿಕೆ

ಪ್ರಯಾಣಿಕರ ಲಗೇಜು ಸಾಗಣಗೆ ಮೊದಲ 20 ಕೆ.ಜಿ. ಉಚಿತ. ಮೊದಲ 20 ಕೆ.ಜಿ.ಯಿಂದ ನಂತರ ಪ್ರತಿ 20 ಕೆ.ಜಿಗೆ ಅಥವಾ ಅದರ ಭಾಗಕ್ಕೆ ರೂ. 5 ದರ ನಿಗದಿ ಮಾಡಲಾಗಿದೆ. ಗರಿಷ್ಠ ಪ್ರಯಾಣಿಕರ ಲಗೇಜುಗಳು 50 ಕೆ.ಜಿ.

2013ರಲ್ಲಿ ಈ ಹಿಂದೆ ಆಟೋ ದರ ಏರಿಕೆ ಮಾಡಲಾಗಿತ್ತು. ಅದಾದ ಬಳಿಕ ಸಾಕಷ್ಟು ಬಾರಿ ಜಿಲ್ಲಾಡಳಿತಕ್ಕೆ ಈ ಬಗ್ಗೆ ಮನವಿ ಮಾಡಿದ್ದರೂ ಆಟೋ‌ದರ ಏರಿಕೆಗೆ ಮನಸ್ಸು ಮಾಡಿರಲಿಲ್ಲ. ಆದರೀಗ 8 ವರ್ಷಗಳ ಬಳಿಕ ಆಟೋ ಚಾಲಕರು ಮತ್ತು ಮಾಲೀಕರ ಮನವಿಗೆ ಜಿಲ್ಲಾಡಳಿತ ಸ್ಪಂದಿಸಿ, ಆಟೋ ಪ್ರಯಾಣ ದರ ಏರಿಕೆಗೆ ಅಸ್ತು ಎಂದಿದೆ. ಇದರಿಂದ ಆಟೋ ಚಾಲಕರು ಖುಷಿಯಾಗಿದ್ದು, ಇವತ್ತಿನಿಂದ ಫುಲ್ ಜೋಷ್‌ನಲ್ಲಿ ರೋಡಿಗಿಳಿದಿದ್ದಾರೆ.

 ಆಟೋ ಗ್ಯಾಸ್ ದರವೂ ಏರಿಕೆ

ಆಟೋ ಗ್ಯಾಸ್ ದರವೂ ಏರಿಕೆ

8 ವರ್ಷದ ಬಳಿಕ ಆಟೋ ಪ್ರಯಾಣ ದರ ಏರಿಕೆಯಾಗಿರುವುದರಿಂದ ಒಂದು ಕಡೆ ಆಟೋ ಚಾಲಕರು ಸಂಭ್ರಮಿಸುತ್ತಿದ್ದರೆ, ಮತ್ತೊಂದೆಡೆ 1 ಲೀ. ಆಟೋ ಗ್ಯಾಸ್ ದರ 3 ರೂಪಾಯಿ 5 ಪೈಸೆ ಏರಿಕೆಯಾಗಿದೆ.

ಹಾಗಾದರೆ ಮತ್ತೊಂದು ಸುತ್ತು ಆಟೋ ದರ ಏರಿಕೆಯಾಗುತ್ತಾ? ಎಂಬ ಆತಂಕ ಹೆಚ್ಚಾಗಿದೆ. ಏಕೆಂದರೆ ಆಟೋ ಗ್ಯಾಸ್ ದರ ಏರಿಕೆಯಾಗಿರುವುದು ಚಾಲಕರಿಗೆ ಹೊರೆಯಾಗಲಿದೆ. ಹೀಗಾಗಿ ಮತ್ತೊಂದು ಸುತ್ತು ಆಟೋ ದರ ಏರಿಕೆಯಾಗುವ ಸಾಧ್ಯತೆ ಇದೆ.

 ಆಟೋ ಚಾಲಕರಿಂದ ಆಕ್ರೋಶ

ಆಟೋ ಚಾಲಕರಿಂದ ಆಕ್ರೋಶ

ಸದ್ಯ ಆಟೋ ದರ ಏರಿಕೆಯಾಗಿದ್ದು, ಸ್ವಲ್ಪ ಹಣ ಉಳಿಸಬಹುದು ಎಂದುಕೊಂಡಿದ್ದ ಆಟೋ ಚಾಲಕರು ಗ್ಯಾಸ್ ದರ ಏರಿಕೆಯಿಂದ ಕಂಗಾಲಾಗಿದ್ದಾರೆ. ಮಂಗಳವಾರ 66 ರೂಪಾಯಿ ಇದ್ದ ಗ್ಯಾಸ್ ದರ ಬುಧವಾರ ಬೆಳಗ್ಗೆ 69.05 ರೂ. ಆಗಿದೆ. ಆಟೋ ಗ್ಯಾಸ್ ದರ ಏರಿಕೆ ವಿರುದ್ಧ ಚಾಲಕರು ಆಕ್ರೋಶ ಹೊರ ಹಾಕಿದ್ದಾರೆ.

ಇಂದಿನಿಂದ ಪರಿಷ್ಕೃತ ಆಟೋ ಪ್ರಯಾಣ ದರ ಜಾರಿಯಾಗಿದ್ದು, ಕನಿಷ್ಠ ಪ್ರಯಾಣದ ದರ 5 ರೂ. ಏರಿಕೆ ಮಾಡಲಾಗಿತ್ತು. ಆದರೆ ಬೆಳಗ್ಗೆಯಿಂದ ಆಟೋ ಗ್ಯಾಸ್‌ ದರವೂ ಸಹ ಹೆಚ್ಚಳವಾಗಿದೆ. ಹೀಗಾದರೆ ನಾವು ಜೀವನ ಮಾಡುವುದು ಹೇಗೆಂದು ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Recommended Video

13 ರಾಷ್ಟ್ರಗಳಿಗೆ ಒಮಿಕ್ರಾನ್ ಲಗ್ಗೆ ! | Oneindia Kannada

English summary
Auto rickshaw fare hiked after 8 years in Bengaluru. New fare effected from December 1, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X