• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು; ಆಟೋ ದರ ಏರಿಕೆ, ಎಷ್ಟು ಹೆಚ್ಚಳವಾಗಿದೆ?

|
Google Oneindia Kannada News

ಬೆಂಗಳೂರು, ನವೆಂಬರ್ 08; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಆಟೋ ರಿಕ್ಷಾ ಪ್ರಯಾಣದರವನ್ನು ಏರಿಕೆ ಮಾಡಲಾಗಿದೆ. ಪರಿಷ್ಕೃತ ದರ ಡಿಸೆಂಬರ್ 1ರಿಂದ ಜಾರಿಗೆ ಬರಲಿದೆ. ಕಳೆದ ಮೂರು ತಿಂಗಳಿನಿಂದ ಪ್ರಯಾಣ ದರ ಏರಿಕೆ ಮಾಡಬೇಕು ಎಂದು ಆಟೋ ಚಾಲಕರು ಹೋರಾಟ ನಡೆಸುತ್ತಿದ್ದರು.

ಬೆಂಗಳೂರು ನಗರ ಜಿಲ್ಲೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ಆಟೋ ದರ ಪರಿಷ್ಕರಣೆ ಕುರಿತು ಕೂಲಂಕುಷವಾಗಿ ಪರಿಶೀಲಿಸಿ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ. ಹಲವು ದಿನಗಳಿಂದ ಆಟೋ ದರ ಏರಿಕೆ ಕುರಿತು ಚರ್ಚೆ ನಡೆಯುತ್ತಿದ್ದು, ಅಂತಿಮವಾಗಿ ದರ ಏರಿಕೆಯಾಗಿದೆ.

ಆಟೋ ಚಾಲಕರ ಸಮಯಪ್ರಜ್ಞೆ; ಸುರಕ್ಷಿತವಾಗಿ ಸಿಕ್ಕ ಬೆಂಗಳೂರಿನ ಮಕ್ಕಳು! ಆಟೋ ಚಾಲಕರ ಸಮಯಪ್ರಜ್ಞೆ; ಸುರಕ್ಷಿತವಾಗಿ ಸಿಕ್ಕ ಬೆಂಗಳೂರಿನ ಮಕ್ಕಳು!

ಆಟೋ ದರಗಳನ್ನು ಪರಿಷ್ಕರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿತ್ತು. ಆಟೋ ಚಾಲಕರ ಸಂಘ ಈ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ದರ ಪರಿಷ್ಕರಣೆ ಮಾಡಲಾಗಿದೆ. ಹೊಸ ದರ ಡಿಸೆಂಬರ್ 1 ರಿಂದ ಜಾರಿಗೆ ಬರಲಿದೆ.

ಇದಪ್ಪಾ ಅದೃ‍‍ಷ್ಟ ಅಂದ್ರೆ..! ಆಟೋ ಡ್ರೈವರ್‌ಗೆ 12 ಕೋಟಿ ರೂಪಾಯಿ ಲಾಟರಿ..!ಇದಪ್ಪಾ ಅದೃ‍‍ಷ್ಟ ಅಂದ್ರೆ..! ಆಟೋ ಡ್ರೈವರ್‌ಗೆ 12 ಕೋಟಿ ರೂಪಾಯಿ ಲಾಟರಿ..!

ಪರಿಷ್ಕೃತ ದರಗಳು ಮೀಟರ್‌ನಲ್ಲಿ ಪ್ರದರ್ಶಿತವಾಗುವಂತೆ ಮೀಟರ್‌ಗಳನ್ನು ದಿನಾಂಕ 28/2/2022 ರೊಳಗೆ ಪುನಃ ಸತ್ಯಾಪನೆ ಮಾಡಿ ಮುದ್ರೆ ಹಾಕಿಸಿಕೊಳ್ಳಬೇಕು ಎಂದು ಆಟೋ ಚಾಲಕರಿಗೆ ಸೂಚನೆ ನೀಡಲಾಗಿದೆ. ಸಾರಿಗೆ ಪ್ರಾಧಿಕಾರದಿಂದ ಅನುಮೋದಿಸ್ಪಟ್ಟ ನಿಗದಿತ ಪರಿಸ್ಕೃತ ದರ ಪಟ್ಟಿಯನ್ನು ಪ್ರತಿಯೊಂದು ಆಟೋದಲ್ಲಿಯೂ ಪ್ರದರ್ಶಿಸಬೇಕು ಎಂದು ಸೂಚನೆ ನೀಡಲಾಗಿದೆ.

 ಶಿವಮೊಗ್ಗ: ಖಾಸಗಿ ಬಸ್ ಪ್ರಯಾಣ ದರ ಹೆಚ್ಚಳ, ಆಟೋ ಮೀಟರ್ ರೇಟ್ ದುಬಾರಿ ಸಂಭವ! ಶಿವಮೊಗ್ಗ: ಖಾಸಗಿ ಬಸ್ ಪ್ರಯಾಣ ದರ ಹೆಚ್ಚಳ, ಆಟೋ ಮೀಟರ್ ರೇಟ್ ದುಬಾರಿ ಸಂಭವ!

ಆಟೋ ದರ ಎಷ್ಟು ಏರಿಕೆ?

ಆಟೋ ದರ ಎಷ್ಟು ಏರಿಕೆ?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕನಿಷ್ಠ ಪ್ರಯಾಣ ದರ ಮೊದಲ 2 ಕಿಲೋಮೀಟರ್‌ಗೆ ರೂ. 30 ಆಗಿದೆ (ಮೂವರು ಪ್ರಯಾಣಿಕರು). ನಂತರ ಪ್ರತಿ ಕಿಲೋಮೀಟರ್ ದರ 15 ರೂಪಾಯಿ ದರ ನಿಗದಿ ಮಾಡಲಾಗಿದೆ (ಮೂವರು ಪ್ರಯಾಣಿಕರು ಮಾತ್ರ).

ಕಾಯುವಿಕೆಯ ದರವೂ ಪರಿಷ್ಕರಣೆ

ಕಾಯುವಿಕೆಯ ದರವೂ ಪರಿಷ್ಕರಣೆ

ಆಟೋಗಳ ಕನಿಷ್ಠ ಪ್ರಯಾಣದರ ಮಾತ್ರವಲ್ಲ ಕಾಯುವಿಕೆ ದರ (ವೈಟಿಂಗ್ ಚಾರ್ಜ್) ಸಹ ಹೆಚ್ಚಳ ಮಾಡಲಾಗಿದೆ. ಮೊದಲ ಐದು ನಿಮಿಷ ಕಾಯುವಿಕೆ ಉಚಿತ. ಮೊದಲ ಐದು ನಿಮಿಷದ ನಂತರ ಪ್ರತಿ ಹದಿನೈದು ನಿಮಿಷ ಅಥವ ಅದರ ಭಾಗಕ್ಕೆ 5 ರೂ. ದರ ನಿಗದಿ ಮಾಡಲಾಗಿದೆ.

ಪ್ರಯಾಣಿಕರ ಲಗೇಜು ದರಗಳು

ಪ್ರಯಾಣಿಕರ ಲಗೇಜು ದರಗಳು

ಪ್ರಯಾಣಿಕರ ಲಗೇಜು ಸಾಗಣಗೆ ಮೊದಲ 20 ಕೆ. ಜಿ. ಉಚಿತ. ಮೊದಲ 20 ಕೆ. ಜಿ. ಯಿಂದ ನಂತರ ಪ್ರತಿ 20 ಕೆ. ಜಿ.ಗೆ ಅಥವ ಅದರ ಭಾಗಕ್ಕೆ ರೂ. 5 ದರ ನಿಗದಿ ಮಾಡಲಾಗಿದೆ. ಗರಿಷ್ಠ ಪ್ರಯಾಣಿಕರ ಲಗೇಜುಗಳು 50 ಕೆ. ಜಿ. ಗೆ.

ರಾತ್ರಿ ವೇಳೆಯ ದರಗಳು

ರಾತ್ರಿ ವೇಳೆಯ ದರಗಳು

ರಾತ್ರಿ ವೇಳೆ ಆಟೋಗಳಲ್ಲಿ ಸಂಚಾರ ನಡೆಸುವಾಗ ಸಾಮಾನ್ಯ ದರ+ ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು ದರವನ್ನು ಪಾವತಿ ಮಾಡಬೇಕು. (ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯ ತನಕ ಮಾತ್ರ ಈ ದರಗಳು ಅನ್ವಯ)

  ಹಾಸನಾಂಬೆ ದೇವಿಯ ಬಳಿ ಏನೆಲ್ಲಾ ಬೇಡಿಕೆ ಇಟ್ಟಿದ್ದಾರೆ ಭಕ್ತಾದಿಗಳು | Oneindia Kannada
  ಬೆಲೆ ಏರಿಕೆಗಾಗಿ ಹೋರಾಟ

  ಬೆಲೆ ಏರಿಕೆಗಾಗಿ ಹೋರಾಟ

  ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಆಟೋ ಗ್ಯಾಸ್‌ ದರವೂ ಏರಿಕೆಯಾಗಿದೆ. ಬಿಡಿ ಭಾಗಗಳ ದರ ಹೆಚ್ಚಳವಾಗಿದೆ. ನಿರ್ವಹಣೆ ವೆಚ್ಚವೂ ಅಧಿಕವಾಗಿದೆ. ಆದ್ದರಿಂದ ಆಟೋಗಳ ಪ್ರಯಾಣ ದರ ಏರಿಕೆ ಮಾಡಬೇಕು ಎಂದು ಆಟೋ ಚಾಲಕರು ಹೋರಾಟ ನಡೆಸಿದ್ದರು.

  ಆಟೋ ದರ ಹೆಚ್ಚಳದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆದರ್ಶ ಆಟೋ ಯೂನಿಯನ್ ಅಧ್ಯಕ್ಷ ಮಂಜುನಾಥ್, "ಆಟೋ ಮೀಟರ್‌ಗಳ ಬದಲಾವಣೆಗೆ ಕಾಲಾವಕಾಶ ನೀಡಿದ್ದಾರೆ. ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೂ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಹೇಳಿದ್ದಾರೆ.

  English summary
  Auto rickshaw fare hiked in Bengaluru. New fare will come to effect from December 1, 2021. Auto drivers demanding the transport department for hike the base fare.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X