Get Updates
Get notified of breaking news, exclusive insights, and must-see stories!

ಬೈಕ್ ಟ್ಯಾಕ್ಸಿ ನಿಷೇಧಿಸದಿದ್ದರೆ ಚುನಾವಣೆ ಬಹಿಷ್ಕಾರ: ಸರ್ಕಾರಕ್ಕೆ ಆಟೋ ಚಾಲಕರ ಬೆದರಿಕೆ, ವಿಡಿಯೋ

ಬೆಂಗಳೂರು, ಮಾರ್ಚ್. 27: ಬೆಂಗಳೂರಿನ ಆಟೋರಿಕ್ಷಾ ಚಾಲಕರು ಅಕ್ರಮ ಬೈಕ್ ಟ್ಯಾಕ್ಸಿ ಚಾಲಕರ ವಿರುದ್ಧ ಹೊಸ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸದಿದ್ದಲ್ಲಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ ಎಂದು ಹಲವು ಆಟೋರಿಕ್ಷಾ ಚಾಲಕರು ತಮ್ಮ ಕುಟುಂಬ ಸಮೇತ ಬೆದರಿಕೆ ಹಾಕಿದ್ದಾರೆ.

"ಈ ಸರ್ಕಾರ ಆಟೋರಿಕ್ಷಾ ಚಾಲಕರ ಜೊತೆ ನಿಲ್ಲದಿದ್ದರೆ ನಾವು ಚುನಾವಣೆ ಬಹಿಷ್ಕರಿಸುತ್ತೇವೆ. ನಾವು ಚುನಾವಣೆಯಲ್ಲಿ ಮತ ಹಾಕುವುದಿಲ್ಲ. ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗಳನ್ನು ಬ್ಯಾನ್ ಮಾಡುವ ಮೂಲಕ ಆಟೋರಿಕ್ಷಾ ಚಾಲಕರನ್ನು ಉಳಿಸಿ" ಎಂದು ಹಲವು ಆಟೋ ಚಾಲಕರು ಮತ್ತು ಅವರ ಕುಟುಂಬದವರು ವಿಡಿಯೋಗಳನ್ನು ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ.

Auto rickshaw drivers threatening to boycott Karnataka Election 2023 If Bike Taxis are not banned

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಾರಿಗೆ ಸಚಿವ ಶ್ರೀರಾಮುಲು ಅವರು ಅಕ್ರಮ ಬೈಕ್ ಟ್ಯಾಕ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ. ನಾವು ಅವರ ಆಶ್ವಾಸನೆಯನ್ನು ಕೇಳಿ ಸುಮ್ಮನೆ ಕುಳಿತಿದ್ದೇವೆ ಎಂದು ಭಾವಿಸಿರಬಹುದು. ಆದರೆ, ಈ ಬಾರಿ ಚುನಾವಣೆಗೆ ನಾವು ಮತ ಹಾಕುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಹೊಂಗಸಂದ್ರದಲ್ಲಿ ಆಟೋರಿಕ್ಷಾ ಓಡಿಸುವ ಚಾಲಕ ಮಂಜು ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. " ನನ್ನ ಕುಟುಂಬದಿಂದ 15 ಮತಗಳು ಮತ್ತು ನನ್ನ ಪತ್ನಿಯ ಕುಟುಂಬದಿಂದ ಸುಮಾರು 15 ಮತಗಳಿವೆ. ಅವರು ಕೂಡ ನನ್ನ ಕುಟುಂಬದವರಾಗಿರುವುದರಿಂದ ನಾನು ಹೇಳುವುದನ್ನು ಅವರೆಲ್ಲಾ ಕೇಳುತ್ತಾರೆ. ಈ ಬಾರಿ ಪ್ರತಿಭಟನೆ ಇನ್ನಷ್ಟು ತೀವ್ರವಾಗಲಿದೆ. ದಯವಿಟ್ಟು ನಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಿ" ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ಅಥವಾ ಕಾಂಗ್ರೆಸ್ ಸರ್ಕಾರ ಆಗಿರಲಿ. ಆಟೋರಿಕ್ಷಾ ಚಾಲಕರು ಎದುರಿಸುತ್ತಿರುವ ತೊಂದರೆಗಳನ್ನು ನೀವು ಅರ್ಥಮಾಡಿಕೊಳ್ಳಬೇಕು ಎಂದು ಹಲವರು ಆಟೋ ಚಾಲಕರು ತಮ್ಮ ಕಷ್ಟ ತೊಡಿಕೊಂಡಿದ್ದಾರೆ. ಕಳೆದ ವಾರ, ರಾಪಿಡೋ, ಉಬರ್ ಮತ್ತು ಇತರ ಅಗ್ರಿಗೇಟರ್‌ಗಳು ನಿರ್ವಹಿಸುವ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಹಲವಾರು ಆಟೋರಿಕ್ಷಾ ಚಾಲಕರ ಸಂಘಗಳಿಂದ ಪ್ರತಿಭಟನೆ ನಡೆಸಲಾಗಿತ್ತು.

Auto rickshaw drivers threatening to boycott Karnataka Election 2023 If Bike Taxis are not banned

ಪ್ರತಿಭಟನೆ ನಡೆಸಿದ್ದ ಹಲವಾರು ಆಟೋರಿಕ್ಷಾ ಚಾಲಕರನ್ನು ಬಂಧಿಸಲಾಗಿದೆ. ನಂತರ ಸಂಘದ ಸದಸ್ಯರು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದ್ದರು. ಬೆಂಗಳೂರಿನಲ್ಲಿ ವೈಯಕ್ತಿಕ ದ್ವಿಚಕ್ರ ವಾಹನಗಳನ್ನು (ವೈಟ್ ಬೋರ್ಡ್ ಬೈಕ್‌ಗಳು) ಬೈಕ್ ಟ್ಯಾಕ್ಸಿಗಳಾಗಿ ಬಳಸುವುದನ್ನು ನಿಷೇಧಿಸಬೇಕೆಂದು ಆಟೋ ಚಾಲಕರ ಒಕ್ಕೂಟಗಳು ಒತ್ತಾಯಿಸಿವೆ.

2021 ರಲ್ಲಿ, ಕರ್ನಾಟಕ ಹೈಕೋರ್ಟ್ ರಾಪಿಡೋ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ತೆಗೆದುಕೊಳ್ಳದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮಾರ್ಚ್ 29 ಬುಧವಾರದಂದು ನಡೆಸಲಿದೆ.

ಹೈಕೋರ್ಟ್ ವಿಚಾರಣೆಗೆ ಪ್ರತಿಕ್ರಿಯಿಸಿದ ಆಟೋರಿಕ್ಷಾ ಚಾಲಕ ಮೋನಿಶ್, "ಬೈಕ್ ಟ್ಯಾಕ್ಸಿಗಳು ಆಕ್ರಮಣಕಾರಿ ಹುಳುಗಳಂತಿವೆ. ಬೈಕ್ ಟ್ಯಾಕ್ಸಿಗಳು ನಮ್ಮ ಜೀವನೋಪಾಯದ ಮೇಲೆ ಬೀರುವ ಪರಿಣಾಮದ ಬಗ್ಗೆ ಸರ್ಕಾರ ಅಥವಾ ಸಾರ್ವಜನಿಕರಿಗೆ ತಿಳಿದಿಲ್ಲ. ಮೊದಮೊದಲು ಮಾರ್ಚ್ 24ಕ್ಕೆ ವಿಚಾರಣೆ ಎಂದಿದ್ದರು ಈಗ ಮಾರ್ಚ್ 29ಕ್ಕೆ ಎಂದು ಹೇಳುತ್ತಿದ್ದಾರೆ. ಆದರೆ ನಮ್ಮ ಬಗ್ಗೆ ಯಾರು ಯೋಚಿಸುತ್ತಾರೆ..? ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಸರ್ಕಾರಕ್ಕೆ ಮನವಿ ಸಲ್ಲಿಸಿ ಸುಸ್ತಾಗಿದ್ದೇವೆ' ಎಂದು ಸಂಕಟ ವ್ಯಕ್ತಪಡಿಸಿದ್ದಾರೆ.

(ಮಾಹಿತಿ ಕೃಪೆ- ನ್ಯೂಸ್ ನೈನ್)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+