ಬೆಂಗಳೂರು ಆಟೋ ಚಾಲಕರು ಫುಲ್ ಸ್ಮಾರ್ಟ್‌: ಕ್ಯೂಆರ್ ಕೋಡ್‌ ಈಗ ಸ್ಮಾರ್ಟ್‌ ವಾಚ್‌ನಲ್ಲಿ

ಬೆಂಗಳೂರು, ಜಗತ್ತಿನಲ್ಲಿ ಎರಡು ಕಾರಣಗಳಿಂದ ಹೆಚ್ಚು ಹೆಸರು ಪಡೆಕೊಂಡಿರುವ ನಗರ. ಇಲ್ಲಿನ ಟ್ರಾಫಿಕ್ ಮತ್ತು ಐಟಿ ಹಬ್‌ ದೇಶ-ವಿದೇಶಗಳಲ್ಲೂ ಫೇಮಸ್. ಟೆಕ್‌ ಸಿಟಿ ಬೆಂಗಳೂರು ಭಾರತದ ಸ್ಟಾರ್ಟ್ ಅಪ್ ಕ್ಯಾಪಿಟಲ್ ಎಂದೇ ಹೆಸರಾಗಿದೆ.

ಬೆಂಗಳೂರು, ತನ್ನ ಅಭಿವೃದ್ಧಿ ಹೊಂದುತ್ತಿರುವ ಸ್ಟಾರ್ಟಪ್ ಸಂಸ್ಕೃತಿ, ಐಟಿ ಉದ್ಯಮ, ಟ್ರಾಫಿಕ್, ಗಗನಕ್ಕೇರುತ್ತಿರುವ ಬಾಡಿಗೆಗಳು ಮತ್ತು ನಾವೀನ್ಯತೆ ಮತ್ತು ಸೃಜನಶೀಲತೆಯಿಂದ ಯಾವಾಗಲೂ ಗದ್ದಲದಿಂದ ಕೂಡಿರುತ್ತದೆ. ಇಲ್ಲಿ ಲಕ್ಷ ಲಕ್ಷ ಪಡೆಯುವ ಐಟಿ ಉದ್ಯೋಗಿಗಳು ಮಾತ್ರವೇ ಅಲ್ಲ, ಆಟೋ ಓಡಿಸುವ ಚಾಲಕರು ಕೂಡ ಸ್ಮಾರ್ಟ್ ಆಗಿದ್ದಾರೆ.

auto-driver-displays-qr-code

ಇಂತಹದ್ದೇ ಒಂದು ಘಟನೆ ನಡೆದಿದ್ದು ಇದನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರವು ಆಟೋ ಪ್ರಯಾಣಿಕರೊಬ್ಬರು ಚಾಲಕನ ಸ್ಮಾರ್ಟ್ ವಾಚ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಹಣ ಪಾವತಿಸುತ್ತಿರುವುದನ್ನು ತೋರಿಸುತ್ತದೆ.

ಕ್ಯುಆರ್ ಕೋಡ್‌ಗೂ ಸ್ಮಾರ್ಟ್ ವಾಚ್‌!

ಪ್ರಯಾಣಿಕರು 'ನಮ್ಮ ಯಾತ್ರಿ' ಆಪ್‌ನಲ್ಲಿ ಆಟೋ ಬುಕ್ ಮಾಡಿ ಪ್ರಯಾಣ ಮಾಡಿದ್ದಾರೆ. ತಮ್ಮ ಸ್ಥಳ ಬಂದ ಬಳಿಕ ಇಳಿಯುವ ಮುನ್ನ ಬಾಡಿಗೆ ಪಾವತಿಸಲು ಕ್ಯುಆರ್ ಕೋಡ್ ಕೇಳಿದ್ದಾರೆ. ಆಟೋ ಡ್ರೈವರ್ ತುಂಬಾ ಸರಳವಾಗಿ ತನ್ನ ಸ್ಮಾರ್ಟ್ ವಾಚ್ ತೋರಿಸಿದ್ದು, ಪ್ರಯಾಣಿಕ ಒಂದು ಕ್ಷಣ ಆಘಾತಗೊಂಡಿದ್ದಾರೆ. ಸಾಮಾನ್ಯವಾಗಿ, ಜನರು ಕ್ಯೂಆರ್ ಕೋಡ್ ಹೊಂದಿರುವ ಲ್ಯಾಮಿನೇಟೆಡ್ ಕಾಗದವನ್ನು ಹೊರತೆಗೆಯುತ್ತಾರೆ. ಆದಾಗ್ಯೂ, ಈ ಬಾರಿ ಅದು ತುಂಬಾ ವಿಭಿನ್ನವಾಗಿತ್ತು ಎಂದು ಹೇಳಿದ್ದಾರೆ.

ಟ್ವಿಟರ್ ನಲ್ಲಿ ಬರೆದಿರುವ ಅವರು, "ಇಂದು ನಾನು ನಮ್ಮ ಯಾತ್ರಿಯಲ್ಲಿ ನಮ್ಮ ಟೋನಿ ಸ್ಟಾರ್ಕ್(ಐರನ್ ಮ್ಯಾನ್) ಅವರನ್ನು ಭೇಟಿಯಾದೆ. ನನ್ನ ಆಟೋ ಡ್ರೈವರ್‌ಗೆ ಕ್ಯೂಆರ್ ಕೋಡ್ ಕೇಳಿದೆ. ಆತ ತನ್ನ ಕೈಯನ್ನು ತಿರುಗಿಸಿ ತನ್ನ ಸ್ಮಾರ್ಟ್ ವಾಚ್ ಅನ್ನು ನನಗೆ ತೋರಿಸಿದನು. ಅವನು QR ಕೋಡ್ ಅನ್ನು ತನ್ನ ಸ್ಮಾರ್ಟ್ ವಾಚ್ ಸ್ಕ್ರೀನ್‌ಸೇವರ್ ಆಗಿ ಉಳಿಸಿಕೊಂಡಿದ್ದಾನೆ." ಅವರು ಚಿತ್ರವನ್ನು ಪೋಸ್ಟ್ ಮಾಡುವಾಗ ಬಳಕೆದಾರರು ಬರೆದಿದ್ದಾರೆ.

ಬೆಂಗಳೂರಿನಲ್ಲಿ ಮಾತ್ರ ಇವೆಲ್ಲಾ ಸಾಧ್ಯ

ವೈರಲ್ ಆಗಿರುವ ಚಿತ್ರವು 105 ಸಾವಿರ ವೀಕ್ಷಣೆ ಪಡೆದುಕೊಂಡಿದೆ. ಅನೇಕರು ಆಟೋ ಚಾಲಕನ ಬುದ್ಧಿವಂತಿಕೆಗೆ ಬೆರಗಾಗಿದ್ದಾರೆ. "ನಾನು ಬೆಂಗಳೂರಿನಲ್ಲಿ ಮಾತ್ರ ಅನುಭವಿಸಿದ ಈ ಚಿಕ್ಕ ಅವಲೋಕನಗಳನ್ನು ಕೇಳಲು ಮತ್ತು ಹೇಳಲು ನಾನು ಸಂಪೂರ್ಣವಾಗಿ ಇಷ್ಟಪಡುತ್ತೇನೆ" ಎಂದು ಟ್ವಿಟರ್ ಬಳಕೆದಾರರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ, "ಇದೆಲ್ಲ ಬೆಂಗಳೂರಿನಲ್ಲಿ ಮಾತ್ರ ಸಾಧ್ಯ".

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+