Atul Subhash suicide case: "ಕೇಸ್ ಇತ್ಯಾರ್ಥ ಮಾಡುವುದಕ್ಕೆ 5 ಲಕ್ಷ ಕೇಳಿದ್ದ ಜಡ್ಜ್"!
ಬೆಂಗಳೂರಿ ಟೆಕ್ಕಿ ಅತುಲ್ ಸುಭಾಷ್ ಕೇಸ್‌ಗೆ ಸಂಬಂಧಿಸಿದಂತೆ ವಿಚಾರಣೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಈ ನಡುವೆ ಅತುಲ್ ಅವರ ಆತ್ಮಹ*ಗೆ ಮುಂಚೆ ಯಾವ ರೀತಿಯ ಕಷ್ಟಗಳನ್ನು ಅನುಭವಿಸಿದ್ದರು ಎನ್ನುವ ವಿಚಾರಗಳು ಈಗ ವರದಿಯಾಗುತ್ತಿವೆ. ಇದೀಗ ಅತುಲ್ ಅವರ ಸಾವಿನ ಬಗ್ಗೆ ಅವರ ತಂದೆ ಸಹ ಮಾತನಾಡಿದ್ದು, ನ್ಯಾಯಾಧೀಶರ ವಿರುದ್ಧ ಗಂಭೀರ ಆರೋಪವನ್ನು ಸಹ ಮಾಡಿದ್ದಾರೆ. ನನ್ನ ಮಗ ಮಾನಸಿಕವಾಗಿ ಕುಗ್ಗಿ ಹೋಗಿದ್ದ ನನ್ನ ಮಗನ ಪತ್ನಿ ಹಾಗೂ ಅವರ ಕುಟುಂಬದವರು ದಾಖಲಿಸಿದ್ದ ಸಾಲು.. ಸಾಲು ದೂರುಗಳಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಅಲ್ಲದೆ ಈ ಪ್ರಕರಣಗಳನ್ನು ಇತ್ಯರ್ಥ ಮಾಡುವುದಕ್ಕೆ ನ್ಯಾಯಾಧೀಶರು 5 ಲಕ್ಷ ರೂಪಾಯಿ ಲಂಚ ಕೇಳಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ ಎಂದು ಹೇಳಿರುವುದನ್ನು ANI ವರದಿ ಮಾಡಿದೆ.
ಅತುಲ್ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಅವನ ಮೇಲೆ ಸಾಲು ಸಾಲು ಕೇಸ್‌ಗಳು ದಾಖಲಾಗಿದ್ದವು ಎಂದು ಅವರ ತಂದೆ ಹೇಳಿದ್ದಾರೆ. ಇನ್ನು ಅತುಲ್ ಸುಭಾಷ್ ಅವರು ಬೆಂಗಳೂರಿನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಇದರ ಬೆನ್ನಲ್ಲೇ ಅವರು ಬರೆದಿಟ್ಟಿದ್ದ ಸುದೀರ್ಘ ಡೆತ್‌ನೋಟ್ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಅದರಲ್ಲಿ ತನ್ನ ಮೇಲೆ ಸುಳ್ಳು ಕೇಸ್‌ಗಳನ್ನು ದಾಖಲಿಸಿರುವುದು ಹಾಗೂ ಜಡ್ಜ್ ಪ್ರಕರಣಗಳನ್ನು ಇತ್ಯಾರ್ಥ ಮಾಡುವುದಕ್ಕೆ 5 ಲಕ್ಷ ರೂಪಾಯಿ ಕೇಳಿದ್ದರು ಎನ್ನುವ ವಿಷಯವನ್ನೂ ಅವರು ಡೆತ್‌ನೋಟ್‌ನಲ್ಲಿ ಅತುಲ್ ಅವರು ಬರೆದಿದ್ದರು ಎನ್ನಲಾಗಿದೆ.

ಇದೀಗ ಇದೇ ವಿಚಾರವನ್ನು ಅವರ ತಂದೆ ಪುನರುಚ್ಚರಿಸಿದ್ದಾರೆ. ನನ್ನ ಮಗ ಇಲ್ಲಿ ತುಂಬಾ ಭ್ರಷ್ಟಾಚಾರ ಇದೆ. ಆದರೆ, ನಾನು ಸತ್ಯದ ಹಾದಿಯಲ್ಲಿ ಇರುವುದರಿಂದ ಹೋರಾಟ ಮುಂದುವರಿಸುತ್ತೇನೆ ಎಂದು ಹೇಳಿದ್ದ. ಅವನು ಮಾನಸಿಕವಾಗಿ ಕುಗ್ಗಿ ಹೋಗಿದ್ದ ಹೀಗಾಗಿ, ನಮ್ಮ ಬಳಿ ಏನನ್ನೂ ಅವನು ಹಂಚಿಕೊಳ್ಳುತ್ತಿರಲಿಲ್ಲ ಎಂದು ಅತುಲ್ ಅವರ ತಂದೆ ಪವನ್ ಕುಮಾರ್ ಅವರು ಹೇಳಿದ್ದಾರೆ.
ಅತುಲ್ ಅವರ ಪತ್ನಿ ಹಾಗೂ ಅವರ ಕುಟುಂಬದವರ ಕಡೆಯಿಂದ ಜನವರಿ 2021ರಿಂದಲೇ ಅತುಲ್ ಮೇಲೆ ಪ್ರಕರಣಗಳನ್ನು ದಾಖಲಿಸುವುದು ನಡೆದಿತ್ತು. ನನ್ನ ಮಗ ಕೊರೊನಾ ನಂತರ ಅವಳು (ತಮ್ಮ ಮನೆ) ತೊರೆದಿದ್ದಳು. ಇದಾದ ಮೇಲೆ 1 ವರ್ಷದ ಅತುಲ್ ಮಗ ತನ್ನ ಮಾವನ ಮನೆಯಲ್ಲಿ ಬೆಳೆಯಲಿದ್ದಾನೆ ಎಂದುಕೊಂಡಿದ್ದೆವು. ಆದರೆ, ಕೆಲವೇ ದಿನಗಳಲ್ಲಿ ನನ್ನ ಸೊಸೆ ನಮ್ಮ ಇಡೀ ಕುಟುಂಬದ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಲು ಪ್ರಾರಂಭಿಸಿದಳು ಎಂದು ಅತುಲ್ ಅವರ ತಂದೆ ದೂರಿದ್ದಾರೆ.
ಬೆಂಗಳೂರು ಪೊಲೀಸರಿಂದ ಬಂಧನ: ಇನ್ನು ಬೆಂಗಳೂರಿನ ಪೊಲೀಸರು ಉತ್ತರ ಪ್ರದೇಶಕ್ಕೆ ಭೇಟಿ ನೀಡಿ ಅತುಲ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಈಗಾಗಲೇ ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಅತುಲ್ ಅವರ ಆತ್ಮಹ* ಪ್ರಕರಣವು ದೇಶದಾದ್ಯಂತ ಆಕ್ರೋಶ ಸೃಷ್ಟಿ ಮಾಡಿದ್ದು, ಭಾರೀ ಜನಾಕ್ರೋಶ ವ್ಯಕ್ತವಾಗಿದೆ. ನಕಲಿ ಸ್ತ್ರೀವಾದ ನಿಲ್ಲಬೇಕು ಎನ್ನುವ ಅಭಿಪ್ರಾಯ ಕೇಳಿ ಬರುತ್ತಿದೆ.












Click it and Unblock the Notifications