ಅತ್ತಿಬೆಲೆ ಪಟಾಕಿ ದುರಂತ: ಸೂಕ್ತ ಚಿಕಿತ್ಸೆ, ನೆರವು ಸಿಗದೇ ಮಗ ಸಾವು: ಸರ್ಕಾರಕ್ಕೆ ಕಟುಂಬಸ್ಥರು ಹಿಡಿಶಾಪ
ಬೆಂಗಳೂರು ಅಕ್ಟೋಬರ್ 12: ರಾಜಧಾನಿ ಬೆಂಗಳೂರಿನ ಅತ್ತಿಬೆಲೆ ಕಳೆದ ಶನಿವಾರ ಪಟಾಕಿ ಗೋದಾಮಿ ಹೊತ್ತಿ ಉರಿದ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆ ಆಗಿದೆ. ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಮೃತಪಟ್ಟಿದ್ದಾರೆ. ಇರುವ ಒಬ್ಬ ಮಗನನ್ನು ಕಳೆದುಕೊಂಡು ಮೃತ ಪೋಷಕರು ಕಣ್ಣೀರಿಟ್ಟಿದ್ದಾರೆ. ಸೂಕ್ತ ಚಿಕಿತ್ಸೆ ನೀಡದ ಹಿನ್ನೆಲೆ ಮಗನ ಸಾವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಶನಿವಾರ ಪಟಾಕಿ ಗೋದಾಮಿನಲ್ಲಿ ಅಗ್ನಿ ಸ್ಟೋಟ ಸಂಭವಿಸಿತ್ತು. ಈ ವೇಳೆ ಬೊಮ್ಮಾನಹಳ್ಳಿ ನಿವಾಸಿ ವೆಂಕಟೇಶ್ ಎಂಬಾತ ಪಟಾಕಿ ತರಲು ತೆರಳಿದ್ದ. ಘಟನೆಯಲ್ಲಿ ಅವರಿಗೂ ಸುಟ್ಟಗಾಯಗಳಾಗಿದ್ದವು. ಕೂಡಲೇ ಅವರನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ (ಅ.12) ಬೆಳಗಿನ ಜಾವ ಮೃತಟ್ಟಿದ್ದಾರೆ.

ಇದ್ದ ಒಬ್ಬನೇ ಮಗನ ಸಾವಿನ ಸುದ್ದಿ ತಿಳಿದ ಕುಟುಂಬಸ್ಥರಿಗೆ ದಿಕ್ಕೇ ತೋಚದಂತಾಗಿದೆ. ಪಟಾಕಿ ತರಲು ಹೋಗಿದ್ದ ಮಗ ವೆಂಕಟೇಶ್ ಗಾಯಗೊಂಡಿದ್ದ ತಾನೆ ನಡೆದು ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಮಗನ ಸಾವಾಗಿದೆ ಎಂದು ಮೃತ ತಂದೆ ತಾಯಿ ಕಣ್ಣೀರಿಟ್ಟು ಗೋಳಾಡಿದ ದೃಶ್ಯ ಕಂಡು.
ಎರಡು ಸರ್ಕಾರದಿಂದ ಯಾವ ನೆರವು ಸಿಕ್ಕಿಲ್ಲ: ಮೃತರ ತಂದೆ
ಘಟನೆ ಬಳಿಕ ಕರ್ನಾಟಕ ಸರ್ಕಾರ, ಮುಖ್ಯಮಂತ್ರಿಗಳು ಮತ್ತು ತಮಿಳುನಾಡು ಸರ್ಕಾರದ ಪ್ರತಿನಿಧಿಗಳು ಬಂದು ನೋಡಿಕೊಂಡು ಹೋದರೆ ವಿನಃ ನಮ್ಮ ಸಹಾಯಕ್ಕೆ ಯಾರು ಬರಲಿಲ್ಲ. ಅವರು ಬಂದು ಹೋದ ಮೇಲೆ ಸರಿಯಾಗಿ ಚಿಕಿತ್ಸೆ ನೀಡಿದರು. ನಂತರ ಸಾಕಷ್ಟು ಹಣಕ್ಕೆ ಬೇಡಿಕೆ ಇಟ್ಟರು. ಕೇಳಿದಷ್ಟು ಹಣ ನೀಡಿದ್ದೇವೆ.

ಸರ್ಕಾರದಿಂದ ಒಂದು ರೂಪಾಯಿಯ ನೆರವು ನಮಗೆ. ನೆನ್ನೆ ತಡರಾತ್ರಿ 43000 ರೂಪಾಯಿ ಕೇಳಿದ್ದರು. ನಂತರ ನೋಡಿದರೆ ಬೆಳಗ್ಗೆ ಮಗನ ಮೃತಪಟ್ಟ ಸುದ್ದಿ ತಿಳಿಯಿರಿ ಎಂದು ಮೃತ ವೆಂಕಟೇಶ್ ತಂದೆ ಅಳಲು ತೋಡಿಕೊಂಡರು.
ಅನಾಥವಾದ ಮೃತ ವೆಂಕಟೇಶ್ ಕುಟುಂಬ
ಘಟನೆಯಲ್ಲಿ ಗಾಯಗೊಂಡ ಬಳಿಕ ಅಣ್ಣನನ್ನು ಆಸ್ಪತ್ರೆ ಚಿಕಿತ್ಸೆಗೆ ದಾಖಲಿಸಲಾಯಿತು. ಸುಟ್ಟ ಗಾಯಗಳಾಗಿದ್ದರಿಂದ ಚರ್ಮ ಬೇಕಿದೆ ಎಂದರು. ನಂತರ ಚರ್ಮ, ರಕ್ತ ಒದಗಿಸಿದೆವು. ಹಣ ಕಟ್ಟಿದ ಮೇಲೆ ಚಿಕಿತ್ಸೆ ಎಂದಿದ್ದಕ್ಕೆ ಅಗತ್ಯ ಹಣ ಕಟ್ಟಿದ್ದೇವೆ.
ನೆನ್ನ ಬುಧವಾರ ಸಂಜೆ ಬೆಡ್ ಮೇಲಿದ್ದ ಅಣ್ಣ ಕೈಕಾಲುಗಳು ಸುಖಾಸುಮ್ಮನೆ ಅಲುಗಾಡುತ್ತಿದ್ದನ್ನು ಕಂಡು ವೈದ್ಯರಿಗೆ ತಿಳಿಸಿದೆ. ಅವರು ಪರಿಶೀಲಿಸಿದ ಹೃದಯಬಡಿತ ಕಡಿಮೆ ಆಗಿದೆ ಎಂದಿದ್ದರು ಎಂದು ಮೃತರ ಸಹೋದರಿ ತಿಳಿಸಿದ್ದಾರೆ. ಬದುಕಿಗೆ ಆಸರೆಯಾಗಬೇಕಿದ್ದ ಮಗ ಇಂದು ಇಲ್ಲದಾಗಿದ್ದು, ಆ ಇಡೀ ಕುಟುಂಬವೇ ಅನಾಥವಾಗಿದೆ.
ವೆಂಕಟೇಶ್ ಸಾವಿನಿಂದ ಅತ್ತಿಬೆಲೆ ಪಟಾಕಿ ದುರಂತದಲ್ಲಿ ಒಟ್ಟು ಸಾವಿನ ಸಂಖ್ಯೆ 16ಕ್ಕೆ ಏರಿಕೆ ಆಗಿದೆ. ಘಟನೆ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತವರ ತಂಡ ಸ್ಥಳಕ್ಕೆ ಭೇಟಿ ನೀಡಿತ್ತು. ತನಿಖೆಗೆ ಆದೇಶಿಸಿತ್ತು. ಮಂಗಳವಾರ ರಾಜ್ಯಾದ್ಯಂತ ಪಟಾಕಿ ನಿಷೇಧಿಸಿದ, ಹಸಿರು ಪಟಾಕಿಗೆ ಅವಕಾಶ ನೀಡಿ ಅವರು ನಿರ್ಧಾರ ಪ್ರಕಟಿಸಿದರು.












Click it and Unblock the Notifications