ವಿಜಯನಗರದಲ್ಲಿ ಮಹೇಂದ್ರ ಮನ್ನೊತ್ ಮೇಲೆ ದಾಳಿ
ಬೆಂಗಳೂರು, ಅ.1 : ವಿಜಯನಗರದ ಮಾರುತಿ ಮೆಡಿಕಲ್ ಮಾಲೀಕ ಮತ್ತು ಗೋ ಸಂರಕ್ಷಣೆ ಅಭಿಯಾನದ ಮುಖ್ಯಸ್ಥರಾದ ಮಹೇಂದ್ರ ಮನ್ನೊತ್ ಮೇಲೆ ಅಪರಿಚಿತರು ಗುರುವಾರ ಹಲ್ಲೆ ನಡೆಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಹೇಂದ್ರ ಮನ್ನೊತ್ ಶಾಲೆಯೊಂದರಲ್ಲಿ ಪುಸ್ತಕ ವಿತರಿಸಿ ವಾಪಸಾಗುತ್ತಿದ್ದ ಅವರ ಕಾರಿನ ಮೇಲೆ ದಾಳಿ ಮಾಡಿರುವ ಅಪರಿಚಿತರ ಗುಂಪು ಹಲ್ಲೆ ಮಾಡಿದೆ. ಕಾರಿನಿಂದ ಅವರನ್ನು ಕೆಳಗಿಳಿಸಿದ ದುಷ್ಕರ್ಮಿಗಳು ಪಕ್ಕದಲ್ಲಿದ್ದ ಶಾಲೆಯ ಆವರಣಕ್ಕೆ ಕರೆದುಕೊಂಡು ಹೋಗಿ ಕಲ್ಲಿನಿಂದ ಅವರ ಮೇಲೆ ಹಲ್ಲೆ ಮಾಡಿದ್ದಾರೆ.

ಮನ್ನೊತ್ ಪ್ರಯಾಣಿಸುತ್ತಿದ್ದ ಕಾರಿನ ಗಾಜುಗಳನ್ನು ಪುಡಿ ಮಾಡಿರುವ ದುಷ್ಕರ್ಮಿಗಳು, ವಿಜಯನಗರದ ಮಾರುತಿ ಮಂದಿರದ ಸಮೀಪದಲ್ಲಿರುವ ಅವರ ಮೆಡಿಕಲ್ ಮೇಲೆಯೂ ಕಲ್ಲು ತೂರಾಟ ನಡೆಸಿದ್ದಾರೆ. ವಿಜಯನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಹಲ್ಲೆಗೆ ಕಾರಣವೇನು : ಕೆಲವು ದಿನಗಳ ಹಿಂದೆ ಅಕ್ರಮವಾಗಿ ದನ ಸಾಗಿಸುತ್ತಿದ್ದವರನ್ನು ಮಹೇಂದ್ರ ಮನ್ನೋತ್ ಹಿಡಿದುಕೊಟ್ಟಿದ್ದರು ಎಂದು ತಿಳಿದುಬಂದಿದೆ. ಈ ಘಟನೆಯ ಹಿನ್ನಲೆಯಲ್ಲಿ ಅವರ ಗುಂಪಿನವರು ಮನ್ನೊತ್ ಮೇಲೆ ಇಂದು ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ.












Click it and Unblock the Notifications