ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಯಾಂಕ್ ಉದ್ಯೋಗಿ ಮೇಲೆ ಹಲ್ಲೆ ಸರ್ಕಾರಕ್ಕೆ ಪಾಠ

By Mahesh
|
Google Oneindia Kannada News

ಬೆಂಗಳೂರು, ನ.20: ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಅವರ ಮೇಲೆ ನಗರದ ಕಾರ್ಪೊರೇಷನ್ ಎಟಿಎಂ ಕೇಂದ್ರದಲ್ಲಿ ಭೀಕರ ಹಲ್ಲೆ ನಡೆದ್ದಿದ್ದನ್ನು ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದಾರೆ.

ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜ್ಯೋತಿ ಉದಯ್ ಅವರ ಆರೋಗ್ಯದ ಸ್ಥಿತಿ ಸುಧಾರಿಸುತ್ತಿದೆ. ಆದರೆ, ಜ್ಯೋತಿ ಅವರು ಬಲಗೈ, ಬಲಗಾಲು ಸ್ವಾಧೀನ ಕಳೆದುಕೊಂಡಿದ್ದಾರೆ.

ಬಿಜಿಎಸ್ ಆಸ್ಪತ್ರೆಗೆ ಕರೆದುಕೊಂಡು ಬರುವ ಮೊದಲು ವಿಕ್ಟೋರಿಯಾ ಆಸ್ಪತ್ರೆ ಹಾಗೂ ನಿಮ್ಹಾನ್ಸ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದ್ದು, ತೀವ್ರ ರಕ್ತಸ್ರಾವವಾಗಿರುವುದರಿಂದ ಹಾಗೂ ಮೆದುಳಿಗೆ ಪೆಟ್ಟಾಗಿರುವುದರಿಂದ ಪಾರ್ಶ್ವವಾಯುಗೆ ತುತ್ತಾಗಿದ್ದಾರೆ. ಹೀಗಾಗಿ ಬಲಗಾಲು ಸ್ವಾಧೀನ ತಪ್ಪಿದೆ. ಅಲ್ಲದೆ, ಮೂಗು ಮತ್ತು ತುಟಿಯ ಮೇಲ್ಭಾಗ ತುಂಡಾಗಿತ್ತು. ಪ್ಲಾಸ್ಟಿಕ್ ಸರ್ಜರಿ ನಡೆಲಾಗಿದೆ ಎಂದು ಕೆಂಗೇರಿಯ ಬಿಜಿಎಸ್ ಆಸ್ಪತ್ರೆ ಹಿರಿಯ ವೈದ್ಯ ವೆಂಕಟರಮಣ ತಿಳಿಸಿದ್ದಾರೆ.

ಗೃಹ ಸಚಿವ ಕೆಜೆ ಜಾರ್ಜ್ ಆದೇಶದ ಮೇರೆಗೆ ಎಸ್ ಜೆ ಪಾರ್ಕ್ ಠಾಣೆ ಪೊಲೀಸರು 8 ವಿಶೇಷ ತಂಡಗಳನ್ನು ರಚಿಸಿಕೊಂಡು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ. ಸಿಸಿಟಿವಿ ವಿಡಿಯೋ ತುಣುಕು(ಇಲ್ಲಿ ನೋಡಿ) ಎಲ್ಲಾ ಮಾಧ್ಯಮಗಳಲ್ಲು ಪ್ರಸಾರವಾಗಿದ್ದು, ಆರೋಪಿಯ ಬಗ್ಗೆ ಸುಳಿವು ಸಿಕ್ಕರೆ ತಕ್ಷಣವೇ ಎಸ್ ಜೆ ಪಾರ್ಕ್ ಪೊಲೀಸರ ಸಂಖ್ಯೆ 080-22942583 ಅಥವಾ 100ಗೆ ಕರೆ ಮಾಡಿ ತಿಳಿಸಿ..

ಸಾಮಾಜಿಕ ಜಾಲ ತಾಣಗಳಲ್ಲಿ ಬೆಂಗಳೂರಿನಲ್ಲಿ ಮಹಿಳಾ ಸುರಕ್ಷತೆ, ಎಟಿಎಂಗಳಲ್ಲಿ ಸೆಕ್ಯುರಿಟಿ ಗಾರ್ಡ್, ಬ್ಯಾಂಕ್ ನಿರ್ಲಕ್ಷ್ಯ, ಸಾರ್ವಜನಿಕರ ಹೊಣೆಗಾರಿಕೆ, ಜ್ಯೋತಿ ಉದಯ್ ಮೇಲೆ ಕನಿಕರದ ಮಾತು ಎಲ್ಲವೂ ಚರ್ಚಿತವಾಗುತ್ತಿದೆ.. ಅಸಮಗ್ರ ಟ್ವೀಟ್ ಗಳು ಇಲ್ಲಿವೆ ನೋಡಿ..

ಜ್ಯೊತಿಗಾಗಿ ಮಿಡಿದ ಜನತೆ

ಜ್ಯೊತಿಗಾಗಿ ಮಿಡಿದ ಜನತೆ

ಬೆಳ್ಳಂಬೆಳ್ಳಗೆ ದುಷ್ಟನ ಕೈಗೆ ಸಿಕ್ಕು ನಲುಗಿದ ಜ್ಯೋತಿ ಉದಯ್ ಅವರ ಅಸಹಾಯಕತೆ ಕಂಡು ಸಾರ್ವಜನಿಕರು ಮರುಗಿದ್ದಾರೆ. ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಜನತೆ ಆಗ್ರಹಿಸಿದ್ದಾರೆ. ಸರ್ಕಾರಕ್ಕೆ ಇದು ದೊಡ್ಡ ಪಾಠವಾಗಬೇಕಿದೆ ಎಂದಿದ್ದಾರೆ.

ಸಿಸಿಟಿವಿ ನೆರವು

ಸಿಸಿಟಿವಿ ನೆರವು

ಸಿಸಿಟಿವಿ ಕೆಮೆರಾದಲ್ಲಿ ಆರೋಪಿಯ ಮುಖ ಸೆರೆಹಿಡಿಯಲಾಗಿದ್ದು, ಇದರ ಆಧಾರದ ಮೇಲೆ ಎಲ್ಲಾ ಠಾಣೆಗಳಿಗೂ ಸ್ಕೆಚ್ ಕಳಿಸಲಾಗಿದೆ. ಜತೆಗೆ ಎಸ್ ಜೆ ಪಾರ್ಕ್ ಪೊಲೀಸರು ಆರೋಪಿಯ ಬೆರಳಚ್ಚು ಸಂಗ್ರಹಿಸಿದ್ದಾರೆ. 8 ವಿಶೇಷ ತಂಡಗಳ ಪೈಕಿ ಒಂದು ತಂಡ ತಮಿಳುನಾಡಿಗೆ ತೆರಳಿದ್ದು, ಶೀಘ್ರದಲ್ಲೇ ಆರೋಪಿ ಬಂಧಿಸಲಾಗುವುದು ಎಂದು ಡಿಸಿಪಿ ರಾಜಪ್ಪ ಹೇಳಿದ್ದಾರೆ

ಎಟಿಎಂ ಸುರಕ್ಷಿತವಲ್ಲ

ಮಹಿಳೆಯರ ಮೇಲೆ ಈ ರೀತಿ ಹಲ್ಲೆ ನಡೆದಿದೆ ಎಂದರೆ.. ಬೆಂಗಳೂರು ಎಷ್ಟು ಅಸುರಕ್ಷಿತವಾಗಿದೆ ಎಂಬುದು ಅರ್ಥ ಮಾಡಿಕೊಳ್ಳಿ

ಮಹಿಳಾ ಆಯೋಗ ಎಲ್ಲಿ

ಮಹಿಳೆ ಮೇಲೆ ಈ ರೀತಿ ಹಲ್ಲೆ ನಡೆದರೂ ಕಾಂಗ್ರೆಸ್ ಮಹಿಳಾ ಘಟಕ, ರಾಷ್ಟ್ರೀಯ ಮಹಿಳಾ ಆಯೋಗ ನಿದ್ದೆ ಮಾಡುತ್ತಿದೆ ಏಕೆ?

ಸರ್ದೇಸಾಯಿಗೆ ಸವಾಲು

ಹಲ್ಲೆ ವಿಡಿಯೋ ಪದೇ ಪದೇ ತೋರಿಸುತ್ತಿದ್ದ ಸಿಎನ್ ಎನ್ ಐಬಿಎನ್ ಟಿವಿಯ ರಾಜದೀಪ್ ಸರ್ದೇಸಾಯಿಗೆ ಸಾರ್ವಜನಿಕರೊಬ್ಬರ ಪ್ರಶ್ನೆ

ವಿದೇಶಿ ಯುವತಿ ಟ್ವೀಟ್

ನಾನು ಭಾರತಕ್ಕೆ ಬರುತ್ತಿದ್ದೇನೆ. ಪತ್ರಿಕಗಳಲ್ಲಿ ಎಟಿಎಂ ನಲ್ಲಿ ಮಹಿಳೆ ಮೇಲೆ ಹಲ್ಲೆ ಸುದ್ದಿ ಓದಿದೆ ಎಂದು ಇಂಗ್ಲೆಂಡಿನ ಯುವತಿ ಟ್ವೀಟ್ ಮಾಡಿದ್ದಾರೆ

ಹಣ ಸಾಲದೇ ನಿನಗೆ

ದುಷ್ಕರ್ಮಿ ಹಣ ತೆಗೆದುಕೊಂಡು ಹೋಗಿದ್ದರೆ ಸಾಕಿತ್ತು. ಯಾಕೆ ಆ ರೀತಿ ಹಲ್ಲೆ ಮಾಡಿದ

ಮಹಿಳಾ ಎಟಿಎಂ ಕೇಂದ್ರ?

ಭಾರತೀಯ ಮಹಿಳಾ ಬ್ಯಾಂಕ್ ಶಾಖೆಗಳು ಆರಂಭಗೊಂಡ ದಿನದಂದೇ ಮಹಿಳೆ ಮೇಲೆ ಹಲ್ಲೆಯಾಗಿರುವುದು ದುರಂತ. ಮಹಿಳಾ ಎಟಿಎಂ ಕೇಂದ್ರ ಸ್ಥಾಪನೆಗೂ ಕಾಂಗ್ರೆಸ್ ಮುಂದಾದರೆ ಅಚ್ಚರಿಯೇನಿಲ್ಲ.

ಬಿಬಿಸಿ ಸುದ್ದಿ

ಬಿಬಿಸಿ ವಾರ್ತೆಯಲ್ಲೂ ಬೆಂಗಳೂರಿನ ಹಲ್ಲೆ ಪ್ರಕರಣ

ತಂತ್ರಾಂಶದಿಂದ ಏನು ಪ್ರಯೋಜನ

ಸಾಫ್ಟ್ ವೇರ್, ಆಪ್ಸ್ ತಯಾರಿಸುವ ಐಟಿ ರಾಜಧಾನಿ ಬೆಂಗಳೂರಿನಿಂದ ಮಹಿಳೆ ರಕ್ಷಣೆಗೆ ಯಾವ ಕೊಡುಗೆಯೂ ಇಲ್ಲ

ಸೆಕ್ಯುರಿಟಿ ಗಾರ್ಡ್ ವೇಸ್ಟ್

ಸೆಕ್ಯುರಿಟಿ ಗಾರ್ಡ್ ಗಳಿದ್ದರೂ ವಯಸ್ಸಾದವರೇ ಇರುತ್ತಾರೆ. 12 ಗಂಟೆ ಅವಧಿ ಕಾರ್ಯ ನಿರ್ವಹಿಸಬೇಕಾಗುತ್ತದೆ

ಆಮ್ ಆದ್ಮಿ ಪಕ್ಷ ಖಂಡನೆ

ಜನ ಸಾಮಾನ್ಯರ ಪಕ್ಷದ ಕರ್ನಾಟಕದ ಘಟಕ ಘಟನೆಯನ್ನು ಖಂಡಿಸಿದ್ದು, ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.

English summary
Jyothi Uday who was attacked inside an ATM on JC Nagar in Bangalore in early morning on Tuesday is said to be stable now. But why no arrests have been made so far in gruesome attack case. Bangalore ATM incident is a wake up call to the Govt says Tweeples
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X