Video: ಬೆಂಗಳೂರಿನಲ್ಲಿ ಕಾರು ಹತ್ತಿಸಿ ವ್ಯಕ್ತಿಯ ಬರ್ಬರ ಕೊಲೆ: ಇಬ್ಬರ ಬಂಧನ

ಬೆಂಗಳೂರು, ಅಕ್ಟೋಬರ್ 30: ಬೆಂಗಳೂರಿನಲ್ಲಿ ನಿರ್ಭಿತಿಯಿಂದ ಜನರು ಓಡಾಡುವ ವೇಳೆಯಲ್ಲಿ ವ್ಯಕ್ತಿಯೊಬ್ಬರು ಬರ್ಬರ ಕೊಲೆ ನಡೆದಿದೆ. ಪುಲಿಕೇಶಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ಟೋಬರ್ 20 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಅರ್ಮೀನ್ ಮತ್ತು ನವಾಜ್ ಎಂದು ಗುರುತಿಸಲಾಗಿದೆ. ಈ ಆರೋಪಿಗಳು ಅಸ್ಗರ್ ನನ್ನು ಕಾರಿನಲ್ಲಿ ಕೊಚ್ಚಿ ಕೊಲೆ ಮಾಡಿದ್ದಾರೆ. ತಮ್ಮ ವಿರುದ್ಧ ದಾಖಲಾದ ಹಲ್ಲೆ ಪ್ರಕರಣ ಹಿಂಪಡೆಯಲು ಸೂಚಿಸಿದ್ದರು. ಇದನ್ನು ನಿರಾಕರಿಸಿದ ಅಸ್ಗರನ್ನು ಕೊಲೆ ಮಾಡಿದ್ದಾರೆ. ಈ ಕುರಿತು ವಿಡಿಯೋ ವೈರಲ್ ಆಗಿದೆ.

Asgar killed by SUV car in Pulikeshi Nagar: Police arrests two accused

ಸಂಚು ರೂಪಿಸಿಕೊಂಡು ಬಂದ ಆರೋಪಿಗಳು ಅಸ್ಗರ್ ಬೈಕ್‌ಗೆ ಎಸ್‌ಯುವಿ ಕಾರನ್ನು ಅಡ್ಡಗಟ್ಟಿದ್ದಾರೆ. ನಂತರ ಕಾರಿನೊಳಕ್ಕೆ ಕೊಚ್ಚಿ ಕೊಲೆ ಮಾಡಲು ಮುಂದಾಗಿದ್ದಾರೆ. ಆತ ತಪ್ಪಿಸಿಕೊಳ್ಳುತ್ತಿದ್ದಂತೆ ಎಸ್‌ಯುವಿ ಕಾರಿನ ಮೂಲಕವೇ ಬೆನ್ನಟ್ಟಿ ಓಡುವಾಗ ರಸ್ತೆ ಮೇಲೆ ಬಿದ್ದ ಅಸ್ಗರ್ ಮೇಲೆ ಕಾರು ಹತ್ತಿಸಿ ಕೊಂದಿದ್ದಾರೆ.

ರಾತ್ರಿ ಈ ಘಟನೆ ನಡೆದಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಟೋ, ಬೈಕ್‌ಗಳು ಅದೇ ರಸ್ತೆಯಲ್ಲಿ ಓಡಾಡುತ್ತಿದ್ದರೂ ಯಾರೊಬ್ಬರು ಅಸ್ಗರ್ ಸಹಾಯಕ್ಕೆ ಮುಂದಾಗಿಲ್ಲ. ಆರೋಪಿಗಳು ಕಾರನ್ನು ಅಸ್ಗರ್ ಮೇಲೆ ಹತ್ತಿಸಿ ಕೊಂದು ಸ್ಥಳದಿಂದ ಕಾಲ್ಕಿತ್ತ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.

ಕೊಲೆಗೆ ಕಾರಣ, ಹಿನ್ನೆಲೆಯೇನು?

ಅಸ್ಗರ್ ಅವರು ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದರು. ಆರೋಪಿಗಳು ಅಸ್ಗರ್‌ನಿಂದ 4 ಲಕ್ಷ ರೂ.ಗೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ದರು. ಈ ಕಾರಿನ ಮಾರಾಟ ವಿಚಾರವಾಗಿ ಅಸ್ಗರ್ ಆರೋಪಿಗಳ ಮಧ್ಯೆ ಜಗಳವಾಗಿತ್ತು. ಈ ವೇಳೆ ಅಸ್ಗರ ಮೇಲೆ ಹಲ್ಲೆ ನಡೆಸಿದ್ದರು. ಸಂತ್ರಸ್ತೆ ಆರೋಪಿ ವಿರುದ್ಧ ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿತ್ತು.

Asgar killed by SUV car in Pulikeshi Nagar: Police arrests two accused

ಹಲ್ಲೆ ಪ್ರಕರಣ ಸಂಬಂಧಿಸಿದಂತೆ ನೀಡಿದ್ದ ದೂರನ್ನು ಹಿಂಪಡೆಯುವಂತೆ ನಿರಾಕರಿಸಿದ ಕಾರಣಕ್ಕೆ ಆರೋಪಿಗಳು ಅಸ್ಗರ್ ಕೊಲೆಗೆ ಸಂಚು ರೂಪಿಸಿದ್ದಾರೆ. ಕೊಲೆನ ದಿನವು ಅಸ್ಗರ್ ಗೆ ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಆದರೆ ಈ ವೇಳೆಯು ನಿರಾಕರಿಸಿದ ಅಸ್ಗರ್‌ನನ್ನು ಆರೋಪಿಗಳು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪಘಾತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಡಿಯೋ ಆಧರಿಸಿ ಮತ್ತು ಮೃತ ಆಸ್ಗರ್ ಸ್ನೇಹಿತನನ್ನು ಪೊಲೀಸರು ವಿಚಾರಣೆ ನಡೆಸಿ ಅರೋಪಿಗಳನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+