ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳೆಯರನ್ನು ಆಕರ್ಷಿಸುತ್ತಿರುವ ಚಿತ್ರಕಲಾ ಪರಿಷತ್ತಿನ ಆರ್ಟಿಸನ್ಸ್‌ ಬಜಾರ್‌

|
Google Oneindia Kannada News

ಬೆಂಗಳೂರು ಆಗಸ್ಟ್‌ 25: ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಪ್ರಾರಂಭವಾಗಿರುವ ಆರ್ಟಿಸನ್ಸ್‌ ಬಜಾರ್‌ ನಲ್ಲಿ ಇಂಪೋರ್ಟೆಡ್‌ ಸ್ಟೋನ್ಸ್‌ ಆಭರಣಗಳು ಹಾಗೂ ಬಿದಿರಿನ ಹ್ಯಾಂಡ್‌ ಬ್ಯಾಗ್‌ಗಳು ಎಲ್ಲರ ಗಮನ ಸೆಳೆಯತ್ತಿವೆ.

ಎಲ್ಲಾ ಬಣ್ಣಗಳ ಆಯ್ಕೆಯ ಕಲ್ಲುಗಳನ್ನು ಬಳಸಿ ರಚಿಸಲಾಗಿರುವ ಆಭರಣಗಳು ಸಾಂಪ್ರಾದಾಯಿಕ ಹಾಗೂ ಆಧುನಿಕ ವಿನ್ಯಾಸಗಳಲ್ಲಿ ಲಭ್ಯವಿವೆ. ಮಣಿಪುರದ ಬಿದಿರಿನ ಹ್ಯಾಂಡ್‌ ಬ್ಯಾಗ್‌ ಗಳು ಪರಿಸರ ಕಾಳಜಿಯನ್ನು ಎತ್ತಿ ಹಿಡಿಯುವಂತಿದ್ದು, ಆಧುನಿಕ ಮಹಿಳೆಯರು ದಿನನಿತ್ಯ ಯಾವುದೇ ಸಮಸ್ಯೆಗಳಿಲ್ಲದೆ ಬಳಸುವಂತಹ ವಿನ್ಯಾಸವನ್ನು ಹೊಂದಿವೆ.

ಗಣೇಶ ಹಬ್ಬದ ಸಂಭ್ರಮಕ್ಕೆ ಮೆರೆಗು ನೀಡಲಿರುವ ಆರ್ಟಿಸನ್ಸ್‌ ಬಜಾರ್‌ಗಣೇಶ ಹಬ್ಬದ ಸಂಭ್ರಮಕ್ಕೆ ಮೆರೆಗು ನೀಡಲಿರುವ ಆರ್ಟಿಸನ್ಸ್‌ ಬಜಾರ್‌

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಲಾಗಿರುವ ಆರ್ಟಿಸನ್ಸ್‌ ಬಜಾರ್‌ ಸೆಪ್ಟೆಂಬರ್‌ ೧ ರ ವರೆಗೆ ನಡೆಯಲಿದ್ದು, ಗಣೇಶ ಹಬ್ಬಕ್ಕೆ ಬೇಕಾದ ಎಲ್ಲಾ ರೀತಿಯ ಆಲಂಕಾರಿಕ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯುತ್ತಿದೆ.

ಬೆಂಗಳೂರು ಆಗಸ್ಟ್‌ 23, 2019: ಕರ್ನಾಟಕ ಚಿತ್ರಕಲಾ ಪರಿಷತ್‌ ಕಲೆ, ಚಿತ್ರ ಕಲೆ ಹಾಗೂ ಕಲಾ ಪ್ರಕಾರಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುತ್ತಾ ಬಂದಿದೆ. ಇಂತಹದೇ ಪ್ರಯತ್ನದ ಇನ್ನೊಂದು ಕಾರ್ಯಕ್ರಮ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಪ್ರಾರಂಭವಾಗಿರುವುದು ಬಹಳ ಸಂತಸ ತರುವ ಸಂಗತಿ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ ಬಿ ಎಲ್‌ ಶಂಕರ್‌ ಅಭಿಪ್ರಾಯಪಟ್ಟರು.

ನಗರದ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಇಂದಿನಿಂದ 10 ದಿನಗಳ ಕಾಲ ಆಯೋಜಿಸಲಾಗಿರುವ ಆರ್ಟಿಸನ್ಸ್‌ ಬಜಾರ್‌ ಗೆ ಚಾಲನೆ ನೀಡಿ ಅವರು ಮಾತನಾಡಿದರು. ಕಲೆಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಸ್ಥಾಪಿತವಾಗಿರುವ ಈ ಪರಿಷತ್ತು ಕಲಾ ಪ್ರಕಾರಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುತ್ತಿದೆ. ಈ ವೇದಿಕೆಯನ್ನು ಕಲಾವಿದರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಮಿಸ್‌ ಕರ್ನಾಟಕ ಪ್ರಶಸ್ತಿ ವಿಜೇತೆ ಶುಭಾ ಶ್ರೀರಾಮ್‌

ಮಿಸ್‌ ಕರ್ನಾಟಕ ಪ್ರಶಸ್ತಿ ವಿಜೇತೆ ಶುಭಾ ಶ್ರೀರಾಮ್‌

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಟಿ ಹಾಗೂ ಮಿಸ್‌ ಕರ್ನಾಟಕ ಪ್ರಶಸ್ತಿ ವಿಜೇತೆ ಶುಭಾ ಶ್ರೀರಾಮ್‌ ಮಾತನಾಡಿ, ಈ ಬಾರಿಯ ಚತುರ್ಥಿಗೆ ಇನ್ನಷ್ಟು ಮೆರಗು ತುಂಬಲು ಹಾಗೂ ದೇಶದ ಮೂಲೆ ಮೂಲೆಗಳಿಂದ ಆಗಮಿಸಲಿರುವ ಕಲಾವಿದರ ಕೈಚಳಕದ ಕಲಾಕೃತಿಗಳನ್ನು ನೋಡುವ ಮತ್ತು ಕೊಂಡುಕೊಳ್ಳುವ ಉತ್ತಮ ಅವಕಾಶವನ್ನು ಗ್ರಾಂಡ್‌ ಫ್ಲಿಯಾ ಮಾರ್ಕೇಟ್‌ ಹಾಗೂ ಚಿತ್ತಾರ ನಿಮ್ಮ ಮುಂದೆ ಇಡುತ್ತಿದೆ. ಇದೇ ಆಗಸ್ಟ್‌ 23 ರಿಂದ ಸೆಪ್ಟೆಂಬರ್‌ 1, 2019 ರ ವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್‌ ಆವರಣದಲ್ಲಿ ಆರ್ಟಿಸನ್ಸ್‌ ಬಜಾರ್‌ ನ್ನು ಆಯೋಜಿಸಿದೆ.

ನಗರದ ಮಧ್ಯಭಾಗದ ಕರಕುಶಲ ವಸ್ತುಗಳಿಗೊಸ್ಕರವೇ ಬಹಳಷ್ಟು ಪ್ರಸಿದ್ದಿಯನ್ನು ಹೊಂದಿರುವ ಚಿತ್ರಕಲಾ ಪರಿಷತ್‌ ಆವರಣದಲ್ಲಿ ಇಂತಹದೊಂದು ವಿಶಿಷ್ಟ್ಯ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದ್ದು ಎಲ್ಲರ ಗಮನ ಸೆಳೆಯುವಂತಿದೆ ಎಂದು ಹೇಳೀದರು.

ಮೇಳದ ಆಯೋಜಕರಾದ ಅಫ್ತಾಬ್‌

ಮೇಳದ ಆಯೋಜಕರಾದ ಅಫ್ತಾಬ್‌

ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದ ಆಯೋಜಕರಾದ ಅಫ್ತಾಬ್‌ ಮಾತನಾಡಿ, ಮುಂಬರುವ ಗಣೇಶ ಹಬ್ಬಕ್ಕೆ ಮನೆಯನ್ನು ವಿಭಿನ್ನವಾಗಿ ಅಲಂಕರಿಸಲು ಹಾಗೂ ಒಂದು ಸಂಪೂರ್ಣ ದಿನದ ಶಾಪಿಂಗ್‌ ನ ಅನುಭವ ಪಡೆಯಲು ಈ ಮೇಳ ಸೂಕ್ತ ಆಯ್ಕೆಯಾಗಿರಲಿದೆ.

ನೂರಕ್ಕೂ ಹೆಚ್ಚು ಸ್ಟಾಲ್‌ಗಳಲ್ಲಿ ದೇಶದ ವಿವಿಧ ಮೂಲೆಗಳ ಕಲಾವಿದರ ಕಲಾಕೃತಿಗಳು ಹಾಗೂ ಉತ್ಪನ್ನಗಳು ನೇರವಾಗಿ ಜನರಿಗೆ ತಲುಪಲಿವೆ. ನಿಮ್ಮ ಮನೆಯ ಗಾರ್ಡನ್‌ ಅಲಂಕರಿಸಲು, ನಿಮಗೊಪ್ಪುವ ಹ್ಯಾಂಡ್‌ ಲೂಮ್‌ ಸ್ಯಾರಿಯನ್ನು ಸೆಲೆಕ್ಟ್‌ ಮಾಡಲು, ಕುರ್ತಿಗಳು ಮತ್ತು ಆಭರಣಗಳನ್ನು ಕೊಳ್ಳಲು ಅತ್ಯುತ್ತಮ ಮೇಳ ಇದಾಗಿರಲಿದೆ.

ದೇಶದ ವಿವಿಧ ಭಾಗಗಳ ಕರಕುಶಲಕಾರ ಕೃತಿ

ದೇಶದ ವಿವಿಧ ಭಾಗಗಳ ಕರಕುಶಲಕಾರ ಕೃತಿ

ಈ ಮೇಳದಲ್ಲಿ ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತವೆ.

ಮನೆಯನ್ನು ಅಲಂಕಾರ ಮಾಡುವ ಉತ್ಪನ್ನಗಳು, ಹ್ಯಾಂಡ್‍ಲೂಂಗಳು, ಕರಕುಶಲ ವಸ್ತುಗಳು, ಬಟ್ಟೆ, ಮರದ ಆಟಿಕೆಗಳು, ಹೆಂಗಳೆಯರ ಆಕರ್ಷಣೆಗೆಂದು ಆಭರಣಗಳು, ಬೆಡ್ ಲೈನೆನ್, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್‍ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿರಲಿವೆ ಎಂದು ಹೇಳಿದರು.

 ಆಗಸ್ಟ್‌ 23 ರಿಂದ ಸೆಪ್ಟೆಂಬರ್‌ 1 ರ ವರೆಗೆ

ಆಗಸ್ಟ್‌ 23 ರಿಂದ ಸೆಪ್ಟೆಂಬರ್‌ 1 ರ ವರೆಗೆ

ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸಿರುವ ಈ ಮೇಳದ ಪ್ರಮುಖ ಉದ್ದೇಶ ಕುಶಲಕರ್ಮಿಗಳನ್ನು ಉತ್ತೇಜಿಸಿ ಅವರಿಗೊಂದು ಮಾರುಕಟ್ಟೆ ಕಲ್ಪಿಸುವುದಾಗಿದೆ. ಆಗಸ್ಟ್‌ 23 ರಿಂದ ಸೆಪ್ಟೆಂಬರ್‌ 1 ರ ವರೆಗೆ ಪ್ರತಿದಿನ ಬೆಳಗ್ಗೆ 11 ರಿಂದ ಸಂಜೆ 7 ಗಂಟೆಯವರೆಗೆ ಈ ಪ್ರದರ್ಶನ ಮತ್ತು ಮಾರಾಟ ಮೇಳ ಇರಲಿದೆ. ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸಿರುವ ಈ ಮೇಳದ ಪ್ರಮುಖ ಉದ್ದೇಶ ಕುಶಲಕರ್ಮಿಗಳನ್ನು ಉತ್ತೇಜಿಸಿ ಅವರಿಗೊಂದು ಮಾರುಕಟ್ಟೆ ಕಲ್ಪಿಸುವುದಾಗಿದೆ. ಆರ್ಟಿಸನ್ಸ್‌ ಬಜಾರ್‌ ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ (ಶಿವಾನಂದ ವೃತ್ತದ ಬಳಿ)

English summary
Artisan Bazaar a unique collection of art, crafts, handlooms and designed gift material sales attracting woman consumers, The event organised at Chitrakala Parishat, Bengaluru from August 23 to September 01, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X