ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೃತಕ ಬುದ್ಧಿಮತೆ ಬಗೆಗಿನ ಕುತೂಹಲ ತಣಿಸಲಿದೆ ಕಾರ್ಯಾಗಾರ

By Manjunatha
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 05: ಕೃತಕ ಬುದ್ದಿಮತೆ ಇಂಗ್ಲಿಷಿನಲ್ಲಿ ಆರ್ಟಿಫಿಷಿಯಲ್ ಇಂಟಿಲೆಜೆನ್ಸ್‌ ಎನ್ನುವುದು ಜಗತ್ತಿನಾದ್ಯಂತ ತಂತ್ರಜ್ಞಾನ ತಜ್ಞರಿಂದ ಹಿಡಿದು ಸಾಮಾನ್ಯ ಆಸಕ್ತರವರೆಗೆ ಭಾರಿ ಕುತೂಹಲ ಮೂಡಿಸಿರುವ ವಿಷಯ.

ಮಾನವ ನಿರ್ಮಿಸಿದ ಯಂತ್ರಗಳು ತಾವೇ ಸ್ವತಃ ಯೋಚಿಸಿ ಕಾರ್ಯ ಮಾಡುವುದು ಹೇಗೆ? ಆ ರೀತಿಯ ಸ್ವಂತ ಯೋಚಿಸಿ ಕಾರ್ಯ ಮಾಡುವ ಯತ್ರಗಳಿಗೆ ಊಡಿಸಿರುವ ಕೋಡಿಂಗ್‌ಗಳಾದರೂ ಎಂತಹವು. ಅದರ ಸವಾಲುಗಳೇನು, ಸಾಧ್ಯತೆಗಳೇನು, ಅಪಾಯವೆಷ್ಟು, ಉಪಯೋಗವೆಷ್ಟು? ಎಲ್ಲದರ ಬಗ್ಗೆಯೂ ಮಾಹಿತಿ ಪಡೆಯಲು ನಗರದಲ್ಲಿ ನಡೆಯುವ ಕಾರ್ಯಾಗಾರಕ್ಕೆ ನೀವು ಬರಬೇಕು.

ನಾಗಕರಿಕ ಸ್ನೇಹಿ ಇ-ಆಡಳಿತ ಪ್ರಶಸ್ತಿಗೆ ಪಾತ್ರವಾದ ಬೆಂಗಳೂರು ಪೊಲೀಸ್ನಾಗಕರಿಕ ಸ್ನೇಹಿ ಇ-ಆಡಳಿತ ಪ್ರಶಸ್ತಿಗೆ ಪಾತ್ರವಾದ ಬೆಂಗಳೂರು ಪೊಲೀಸ್

ಸೆಪ್ಟೆಂಬರ್ 06ರಂದು, ಲಿಡೋ ಮಾಲ್ ಬಳಿಯ ಹೈಯಾಟ್ ಸೆಂಟ್ರಿಕ್ ಎಂಜಿ ರೋಡ್ ಕಟ್ಟಡ ದಲ್ಲಿ ಯುನಿಕಾಂ ಅವರು ಆಯೋಜಿಸಿರುವ ಆರ್ಟಿಫಿಶಿಯಲ್ ಇಂಟಿಲೆಜೆನ್ಸ್‌ ಆಂಡ್ ಮಶಿನ್ ಲರ್ನಿಂಗ್ ಕಾರ್ಗಾರದಲ್ಲಿ ದಿನಪೂರ್ತಿ ತಜ್ಞರು ಈ ಬಗ್ಗೆ ಮಾತನಾಡಲಿದ್ದಾರೆ. ಅನುಮಾನಗಳಿಗೆ ಉತ್ತರವನ್ನೂ ನೀಡಲಿದ್ದಾರೆ.

Artificial Intelligence and Machine Learning Summit in Bengaluru

ಆರ್ಟಿಫಿಶಿಯಲ್ ಇಟಿಲೆಜೆನ್ಸ್‌ ಎಂದರೇನು? ಈ ಕುರಿತು ಜಗತ್ತಿನಲ್ಲಿ ಈವರೆಗೆ ಆಗಿರುವ ಪ್ರಯೋಗಗಳು ಏನು? ಅವು ನೀಡಿರುವು ಫಲಿತಾಂಶ ಹೇಗಿವೆ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ ಭವಿಷ್ಯ ಏನು? ಹೀಗೆ ಹಲವು ಪ್ರಮುಖ ಪ್ರಶ್ನೆಗಳಿಗೆ ಇವು ಉತ್ತರ ನೀಡಲಿವೆ.

ಚೀನಾಕ್ಕೆ ಸೆಡ್ಡು ಹೊಡೆಯಲು ಭಾರತಕ್ಕೆ ಎಸ್‌ಟಿಎ ಮಾನ್ಯತೆ ನೀಡಿದ ಅಮೆರಿಕಚೀನಾಕ್ಕೆ ಸೆಡ್ಡು ಹೊಡೆಯಲು ಭಾರತಕ್ಕೆ ಎಸ್‌ಟಿಎ ಮಾನ್ಯತೆ ನೀಡಿದ ಅಮೆರಿಕ

ಸೆಪ್ಟೆಂಬರ್ 6 ರಂದು ಈ ಕಾರ್ಯಾಗಾರ ನಡೆಯಲಿದ್ದು ಹಲವು ವಿಷಯ ತಜ್ಞರು ಉಪನ್ಯಾಸ ನೀಡಲಿದ್ದಾರೆ. ಆಸಕ್ತಿ ಉಳ್ಳವರು ಮೊದಲೇ ನೊಂದಾವಣಿ ಮಾಡಿಕೊಳ್ಳಬೇಕು. ಆನ್‌ಲೈನ್ ನೊಂದಾವಣಿಗೆ ಯುನಿಕಾಮ್ ಲರ್ನಿಂಗ್ ವೆಬ್‌ಸೈಟ್ ವೀಕ್ಷಿಸಬಹುದು.

English summary
On September 06 Unicom summit and leadership community organizing Artificial Intelligence and Machine Learning Summit in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X