Get Updates
Get notified of breaking news, exclusive insights, and must-see stories!

ಯೋಗ ಶಿಕ್ಷಕಿ ರೂಪಾ ಶಿವಮೊಗ್ಗ ಅವರ ವಿಶೇಷ ಸಂದರ್ಶನ

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಯೋಗ ಸಾಧಕಿ ರೂಪಾ ಶಿವಮೊಗ್ಗ ಅವರು, ಒನ್ ಇಂಡಿಯಾಕ್ಕೆ ಸಂದರ್ಶನ ನೀಡಿದ್ದಾರೆ.

ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲು ಇಡೀ ವಿಶ್ವವೇ ಸಜ್ಜಾಗಿದೆ. ಭಾರತದ ಎಲ್ಲಾ ದೊಡ್ಡ ನಗರಗಳಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ ತಾಲೀಮು ನಡೆಯುತ್ತಿದೆ.

ಸಾಕಷ್ಟು ಸಂಖ್ಯೆಯಲ್ಲಿ ನಾಗರೀಕರು ಇದರಲ್ಲಿ ಭಾಗವಹಿಸುವ ಉತ್ಸುಕತೆ ತೋರಿದ್ದಾರೆ. ಕಳೆದೊಂದು ವಾರದಿಂದ ಯೋಗ ದಿನಾಚರಣೆಯ ಅಬ್ಬರ ದಶದಿಕ್ಕುಗಳಿಂದಲೂ ಕೇಳಿಬರುತ್ತಿದೆ.

ಈ ಹಿನ್ನೆಲೆಯಲ್ಲಿ, ವಿಶ್ವವಿಖ್ಯಾತ ಅಧ್ಯಾತ್ಮಿಕ ಹಾಗೂ ವ್ಯಕ್ತಿ ವಿಕಸನ ಸಂಸ್ಥೆಯಾದ 'ಆರ್ಟ್ ಆಫ್ ಲಿವಿಂಗ್'ನ ಯೋಗ ಶಿಕ್ಷಕಿಯಾದ ರೂಪಾ ಶಿವಮೊಗ್ಗ ಅವರ ಸಂದರ್ಶನವನ್ನು ಇಲ್ಲಿ ಕೊಡಲಾಗಿದೆ.

(ಸಾಧಕರ ಪರಿಚಯ: ರೂಪಾ ಶಿವಮೊಗ್ಗ ಅವರು 'ಆರ್ಟ್ ಆಫ್ ಲಿವಿಂಗ್' ನಲ್ಲಿ ಸುಮಾರು ವರ್ಷಗಳಿಂದ ಯೋಗ ತರಬೇತಿದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪದವಿ ವಿದ್ಯಾಭ್ಯಾಸ ಮುಗಿಸಿದ ನಂತರ, ಶಿವಮೊಗ್ಗದಲ್ಲಿ ಕೆಲ ದಿನಗಳ ಕಾಲ, ಪತ್ರಕರ್ತೆಯಾಗಿ ಸೇವೆ ಸಲ್ಲಿಸಿದ ನಂತರ ಅಧ್ಯಾತ್ಮಿಕತೆಯತ್ತ ಸೆಳೆತ ಹೆಚ್ಚಾಗಿ ಅವರು ಆರ್ಟ್ ಆಫ್ ಲಿವಿಂಗ್ ನಲ್ಲಿ ತೊಡಗಿಸಿಕೊಂಡು ಇದೀಗ 20 ವರ್ಷಗಳನ್ನು ಸಮಾಜ ಸೇವೆಯಲ್ಲೇ ಕಳೆದಿದ್ದಾರೆ.)

Art of living's yoga teacher reveals the significance of Yoga

1. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯೊಂದರ ಅವಶ್ಯಕತೆ ಎಷ್ಟರ ಮಟ್ಟಿಗಿದೆ?
ಜ್ಞಾನ ಯಾರಿಗೂ ಸೀಮಿತವಾದದ್ದಿಲ್ಲ. ಯಾವುದೇ ಒಳ್ಳೆಯ ವಿಚಾರ ಎಲ್ಲರಿಗೂ ತಲುಪಬೇಕು. ಉದಾಹರಣೆಗೆ ಔಷಧವನ್ನು ಯಾರಿಗೂ ಸಿಗದಂತೆ ಬಚ್ಚಿಟ್ಟರೆ ಅದು ತಪ್ಪಾಗುತ್ತದೆ. ಹಾಗಾಗಿ, ಕೇಂದ್ರ ಸರ್ಕಾರ ಇದನ್ನು ವಿಶ್ವಕ್ಕೆ ತಲುಪಿಸುವ ಗುರಿಯನ್ನಿಟ್ಟುಕೊಂಡು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿದೆ. ಇದು ಸಹಸ್ರಾರು ವರ್ಷಗಳ ಹಿಂದೆಯೇ ಭಾರತವು ವಿಶ್ವಕ್ಕೆ ನೀಡಿರುವ ಕೊಡುಗೆಯ ಮರು ನೀಡಿಕೆಯಷ್ಟೆ.

2. ಒತ್ತಡದಲ್ಲಿರುವ ಯುವ ಜನತೆಗೆ ಯೋಗದಿಂದಾಗುವ ಲಾಭಗಳೇನು?
ನಾಗರೀಕತೆ ಬೆಳೆದಾಗಿನಿಂದ ಈವರೆಗೆ ಆಯಾ ಕಾಲಘಟ್ಟದಲ್ಲಿನ ಆಗು ಹೋಗುಗಳಿಗೆ ಅವಲಂಬಿಸಿದಂತೆ ಒತ್ತಡಗಳು, ಭಾವುಕತೆಗಳು ಇದ್ದೇ ಇರುತ್ತವೆ. ಯಾವ ಜನರೇಷನ್ ನ ಯಾವುದೇ ಮನುಷ್ಯನೂ ಇದರಿಂದ ಹೊರತಲ್ಲ. ಆ ಒತ್ತಡಗಳನ್ನು ನಿವಾರಿಸಿಕೊಳ್ಳಲು ಮನುಷ್ಯ ಕಂಡುಕೊಂಡಿರುವ ಮನರಂಜನೆ ಮೊದಲಾದ ಉಪಾಯಗಳಿಗಿಂತ ಯೋಗ ಉನ್ನತವಾದ ಉಪಾಯ. ಆಯಾ ವಯೋಮಾನಕ್ಕೆ ತಕ್ಕಂತೆ ಯೋಗವನ್ನು ರೂಪಿಸಲಾಗಿದೆ. ಅದನ್ನು ಅಳವಡಿಸಿಕೊಂಡರೆ ಆರೋಗ್ಯದ ಜತೆಗೆ ಮನಸ್ಸಿನ ಸ್ವಾಸ್ಥ್ಯವೂ ಹೆಚ್ಚಾಗುತ್ತದೆ.

Art of living's yoga teacher reveals the significance of Yoga

3. ಇದ್ದಕ್ಕಿದ್ದಂತೆ ಯೋಗಾಭ್ಯಾಸಕ್ಕೆ ಮೈ ಬಗ್ಗಿಸುವುದು ಆಗಲ್ಲ ಎಂಬ ಅನಿಸಿಕೆಯಿಂದಲೇ ಕೆಲವರು ಯೋಗ ಮಾಡಲು ಹಿಂದೇಟು ಹಾಕುತ್ತಾರೆ. ಅವರಿಗೇನು ಕಿವಿಮಾತು ಹೇಳುತ್ತೀರಿ?
ನಿಜ ಹೇಳಬೇಕೆಂದರೆ, ಮಗು ತಾಯಿಯ ಗರ್ಭದಲ್ಲಿದ್ದಾಗಲೇ ಯೋಗಾವಸ್ಥೆಯಲ್ಲಿರುತ್ತದೆ. ಮುಷ್ಟಿಗಳನ್ನು ವಿವಿಧ ಮುದ್ರೆಗಳಲ್ಲಿ ರೂಪದಲ್ಲಿ ಮುಚ್ಚಿಕೊಂಡು ಆಗಲೇ ಅದು ತನಗರಿವಿಲ್ಲದಂತೆ ಯೋಗವನ್ನು ಮಾಡುತ್ತಿರುತ್ತದೆ. ಈ ದೃಷ್ಟಿಕೋನದಿಂದ ನೋಡಿದರೆ, ನಾವು ಹಿಂದೆ (ತಾಯಿ ಗರ್ಭದಲ್ಲಿ) ಮಾಡಿ ಬಿಟ್ಟ ಯೋಗವನ್ನೇ ಈಗ ಮತ್ತಷ್ಟು ಅಚ್ಚುಕಟ್ಟಾಗಿ ಮಾಡುವ ಅವಕಾಶ ಸಿಕ್ಕಿದೆ ಎಂದು ಅಂದುಕೊಳ್ಳಬೇಕು. ಯೋಗವನ್ನು ಕುಶಲತೆ ಎಂಬರ್ಥದಲ್ಲಿ ತೆಗೆದುಕೊಳ್ಳಬೇಕು. ಯೋಗವೆಂದರೆ, ಕೇವಲ ಶಾರೀರಿಕ ವ್ಯಾಯಾಮ ಎಂಬ ಸಾಮಾನ್ಯ ಅನಿಸಿಕೆಯಿಂದ ಆಚೆ ಬರಬೇಕು.

4. ಯೋಗದಂತೆಯೇ ಆಯುರ್ವೇದವನ್ನೂ ಭಾರತವು ವಿಶ್ವಕ್ಕೆ ಉಡುಗೊರೆಯಾಗಿ ಕೊಟ್ಟಿದೆ. ಅದನ್ನೂ ಹೀಗೆಯೇ ಅಂತಾರಾಷ್ಟ್ರೀಯ ಮಟ್ಟಕ್ಕೆ ಮುಟ್ಟಿಸುವ ಪ್ರಯತ್ನವಾಗಬೇಕಲ್ಲವೇ?
ಖಂಡಿತವಾಗಿಯೂ ಹೌದು. ಅನ್ನವೇ ಔಷಧ ಎಂಬ ತತ್ವದಡಿ, ನಾವು ಆಹಾರವಾಗಿ ಬಳಸಬಹುದಾದ ನೈಸರ್ಗಿಕ ವಸ್ತುಗಳನ್ನೇ ಸಂಗ್ರಹಿಸಿ, ಸಂಸ್ಕರಿಸಿ, ಔಷಧವನ್ನು ತಯಾರಿಸಲಾಗುತ್ತದೆ. ಕೇವಲ ಆಯುರ್ವೇದವೊಂದೇ ಅಲ್ಲ, ಯುನಾನಿ ಸೇರಿದಂತೆ ಹಲವಾರು ವೈದ್ಯಕೀಯ ಪದ್ಧತಿಗಳೂ ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿದೆ. ಇಂಥ ವಿಶಿಷ್ಠ ಪದ್ಧತಿಗಳನ್ನು ನಾವು ಅಂತಾರಾಷ್ಟ್ರೀಯ ಮಟ್ಟಕ್ಕೆ ದೊಡ್ಡ ಮಟ್ಟದಲ್ಲಿ ಮುಟ್ಟಿಸಬೇಕಿದೆ.

5. ವಿಶ್ವ ಯೋಗ ದಿನಾಚರಣೆಗೆ ಆರ್ಟ್ ಆಫ್ ಲಿವಿಂಗ್ ನ ಕೊಡುಗೆಗಳೇನು?
ಬಹು ಜನರಿಗೆ ತಿಳಿದಿರಲಿಕ್ಕಿಲ್ಲ. ವಿಶ್ವ ಯೋಗ ದಿನಾಚರಣೆಯ ಪರಿಕಲ್ಪನೆಯನ್ನು ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಮಾತನಾಡಿದ್ದೇ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀಶ್ರೀ ರವಿಶಂಕರ್ ಗುರೂಜಿ. ಇತಿಹಾಸ ಪರಿಶೋಧಿಸಿ, ಜೂನ್ 21ನೇ ದಿನವನ್ನು ಯೋಗ ದಿನಾಚರಣೆಯೆಂದು ಪರಿಗಣಿಸಬಹುದೆಂದು ಸಲಹೆ ನೀಡಿದ್ದರು. ಅವರು ನೀಡಿದ್ದ ಸಲಹೆ ಇಂದು ಕಾರ್ಯಗತವಾಗಿರುವುದು ಖುಷಿ ತಂದಿದೆ. ಇನ್ನು, ಆರ್ಟ್ ಆಫ್ ಲಿವಿಂಗ್ ನಲ್ಲಿ ನಿತ್ಯವೂ ಯೋಗ ದಿನವೇ. ಸಂಸ್ಥೆಯ ಶಾಖೆಗಳಿರುವ ಊರುಗಳಲ್ಲಿ, ದೇಶಗಳಲ್ಲಿ ಇವನ್ನು ನಾವು ಅನುಷ್ಠಾನಗೊಳಿಸುತ್ತಲೇ ಬಂದಿದ್ದೇವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+