ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಇಟಿಗೆ ಈ ಬಾರಿ ದಾಖಲೆ ಪ್ರಮಾಣದ ಅರ್ಜಿ ಸಲ್ಲಿಕೆ

|
Google Oneindia Kannada News

ಬೆಂಗಳೂರು, ಮಾರ್ಚ್ 07: ವೃತ್ತಿಪರ ಶಿಕ್ಷಣ ಕೋರ್ಸ್ ಗಳಿಗೆ ಪ್ರವೇಶ ಕಲ್ಪಿಸಲು ಅರ್ಹತೆ ಪಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಈ ಬಾರಿ ದಾಖಲೆ ಪ್ರಮಾಣದ ಅರ್ಜಿ ಸಲ್ಲಿಕೆಯಾಗಿದೆ.

ಏಪ್ರಿಲ್ 18ರಿಂದ ನಡೆಯಲಿರುವ ಸಿಇಟಿಗೆ ವಿದ್ಯಾರ್ಥಿಗಳ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಮಾರ್ಚ್ 7 ಕೊನೆಯ ದಿನವಾಗಿದ್ದು, ಅರ್ಜಿಗಳ ಸಂಖ್ಯೆ 2 ಲಕ್ಷ ತಲುಪುವ ಸಾಧ್ಯತೆ ಇದೆ. ಇದುವರೆಗೆ 1.80 ಲಕ್ಷ ಅರ್ಜಿಗಳುಸಲ್ಲಿಕೆಯಾಗಿದ್ದೇ ದಾಖಲೆಯಾಗಿತ್ತು.

ಪಿಯು ಪರೀಕ್ಷೆ: ಅರ್ಥಶಾಸ್ತ್ರ-ಭೌತಶಾಸ್ತ್ರ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಹೇಳಿದ್ದೇನು?ಪಿಯು ಪರೀಕ್ಷೆ: ಅರ್ಥಶಾಸ್ತ್ರ-ಭೌತಶಾಸ್ತ್ರ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಹೇಳಿದ್ದೇನು?

ಈ ವರ್ಷ 2,30,407 ಅಭ್ಯರ್ಥಿಗಳು ಸಿಇಟಿಗೆ ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಂಡಿದ್ದು, ಇದುವರೆಗೆ 1,94,739ಮಂದಿ ಬ್ಯಾಂಕ್ ಗಳಲ್ಲಿ ಶುಲ್ಕ ಪಾವತಿಸುತ್ತಿದ್ದಾರೆ. ಕೊನೆ ದಿನವಾದ ಬುಧವಾರ ಇನ್ನೂ ಕೆಲ ಸಾವಿರ ಅರ್ಜಿಗಳು ಸಲ್ಲಿಕೆಯಾಗಬಹುದೆಂದು ಕರ್ನಾಟಕ ಪರೀಕ್ಷಾ ಪ್ರಧಿಕಾರ (ಕೆಇಎ) ನಿರೀಕ್ಷಿಸಿದೆ. ಬ್ಯಾಂಕ್ ಗಳಲ್ಲಿ ಶುಲ್ಕ ಪಾವತಿಸಲು ಮಾ.8 ಕೊನೆಯ ದಿನವಾಗಿದೆ.

Around two lakhs students will face CET this year

ಈ ನಡುವೆ, ಅಭ್ಯರ್ಥಿಗಳು ಪ್ರಾಧಿಕಾರದ ಕೇಂದ್ರಗಳ ಬಳಿ ಅಲೆಯುವುದನ್ನು ತಪ್ಪಿಸಲು ಆನ್ ಲೈನ್ ನಲ್ಲೇ ದಾಖಲೆ ಪರಿಶೀಲಿಸಲು ಕೆಇಇಎ ಕಳೆದ ಎರಡು ವರ್ಷಗಳಿಂದ ಪ್ರಯತ್ನ ನಡೆಸಿದೆ. ಆದರೆ, ಅದರಲ್ಲಿ ಸಫಲವಾಗಿರಲಿಲ್ಲ. ಈ ವರ್ಷ ಸ್ನಾತಕೋತ್ತರ ವೈದ್ಯ ಸೀಟುಗಳ ಹಂಚಿಕೆಗೆ ಮುನ್ನ ನಡೆಸುವ ದಾಖಲೆಗಳ ಪರಿಶೀಲನೆಯನ್ನು ಪ್ರಾಯೋಗಿಕವಾಗಿ ಆನ್ ಲೈನ್ ನಲ್ಲೇ ನಡೆಸಲು ಪ್ರಾಧಿಕಾರ ನಿರ್ಧರಿಸಿದೆ.

ತಿದ್ದುಪಡಿಗೆ ಅವಕಾಶ: ಆನ್ ಲಯನ್ ನಲ್ಲಿ ಅಲ್ಲಿಕೆಯಾಗಿರುವ ಅರ್ಜಿಗಳಲ್ಲಿನ ತಪ್ಪುಗಳ ತಿದ್ದುಪಡಿಗೆ ಪಿಯುಸಿ ಪರೀಕ್ಷೆ ಮುಗಿದ ನಂತರ ಅವಕಾಶ ಕಲ್ಪಿಸಲು ಪ್ರಾಧಿಕಾರ ನಿರ್ಧರಿಸಿದೆ. ಪ್ರಸ್ತುತ ಎಲ್ಲ ವಿದ್ಯಾರ್ಥಿ ಗಳು ರೀಕ್ಷೆ ಬರೆಯುವುದರಲ್ಲಿ ನಿರತರಾಗಿರುವುದರಿಂದ ಗೊಂದಲ, ಆತಂಕಕ್ಕೊಳಗಾಗುವುದನ್ನು ತಪ್ಪಿಸಲು ನಂತರ ತಿದ್ದುಪಡಿಗೆ ಅವಕಾಶ ಕಲ್ಪಿಸಲು ಕೆಇಎ ತಿರ್ಮಾನಿಸಿದೆ.

English summary
Around two lakhs students will appear for commn entrance test for the courses of medical and engenieering this year. Karnataka Examination Authority has introduced online application system this time for the students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X