ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೈಋತ್ಯ ರೈಲ್ವೆ: ಅಪ್ರೆಂಟಿಸ್ ಅಭ್ಯರ್ಥಿಗಳ ಖಾಯಂ ನೇಮಕಕ್ಕೆ ಒತ್ತಾಯ

|
Google Oneindia Kannada News

ಬೆಂಗಳೂರು, ಮಾರ್ಚ್ 06: ನೈಋತ್ಯ ರೈಲ್ವೆ ಆಕ್ಟ್ ಅಪ್ರೆಂಟಿಸ್ ತರಬೇತಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳನ್ನು ಸಬ್ಸಿಟ್ಯೂಟ್ ಮೂಲಕ ಖಾಯಂ ಆಗಿ ನೇರ ನೇಮಕ ಮಾಡಿಕೊಳ್ಳಬಬೇಕೆಂದು ಆಗ್ರಹಿಸಿ ಅಭ್ಯರ್ಥಿಗಳು ಮಾ.12ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಇದುವರೆಗೂ 2,500ಕ್ಕೂ ಹೆಚ್ಚು ತರಬೇತಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿದ್ದಾರೆ. ಆಕ್ಟ್ ಅಪ್ರೆಂಟಿಸ್ ತರಬೇತಿ ಪಡೆದು ಆಲ್ ಇಂಡಿಯಾ ವೃತ್ತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆದರೆ ರಾಜ್ಯದ 26 ಜಿಲ್ಲೆಗಳ ಪೈಕಿ ರೈಲ್ವೆಯಲ್ಲಿ ಅಪ್ರೆಂಟಿಸ್ ತರಬೇತಿ ಪಡೆದ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ರೈಲ್ವೆ ಇಲಾಖೆ ಹಾಗೂ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಅಭ್ಯರ್ಥಿ ರವಿ ಗಾಣಿಗೇರ ತಿಳಿಸಿದ್ದಾರೆ.

ರೈಲ್ವೆ ಇಲಾಖೆಯಲ್ಲಿ ಕೆಲಸ ಬೇಕೆ? 89 ಸಾವಿರ ಹುದ್ದೆ ನಿಮಗಾಗಿರೈಲ್ವೆ ಇಲಾಖೆಯಲ್ಲಿ ಕೆಲಸ ಬೇಕೆ? 89 ಸಾವಿರ ಹುದ್ದೆ ನಿಮಗಾಗಿ

ಮುಂಬೈ ನಗರದ ಕೇಂದ್ರೀಯ ರೈಲ್ವೆ ವಲಯದಲ್ಲಿ ಅಪ್ರೆಂಟಿಸ್ ನಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಅನ್ಯಾಯವೆಸಗಲಾಗುತ್ತಿದೆ. ಕರ್ನಾಟಕದ ಅಭ್ಯರ್ಥಿಗಳು ಕಳೆದ ಮೂರು ವರ್ಷಗಳಿಂದಲೂ ಮಾಡುತ್ತಿರುವ ಮನವಿಗೆ ಇದುವರೆಗೂ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದರು.

Apprentice in Raliways seek regulation

ಕರ್ನಾಟಕದ ಅಭ್ಯರ್ಥಿಗಳು ಈಗಾಗಲೇ ನೈಋತ್ಯ ರೈಲ್ವೆಯಲ್ಲಿ ತರಬೇತಿ ಪೂರ್ಣಗೊಳಿಸಿದ್ದು ಕೆಲಸಕ್ಕೆ ಹೊಸದಾಗಿ ಅರ್ಜಿ ಸಲ್ಲಿಸುವುದಾದರೆ ಇಲಾಖೆಯಲ್ಲಿ ತರಬೇತಿ ಪಡೆದು ಏನು ಪ್ರಯೋಜನ ಎಂದು ಪ್ರಸ್ನಿಸಿದ ಅವರು, ಪ್ರಸ್ತುತ ಲಭ್ಯವಿರುವ ಹುದ್ದೆಗಳಲ್ಲಿ ಶೇ.20ರಷ್ಟನ್ನು ನೈಋತ್ಯ ರೈಲ್ವೆ ವಲಯ ಅಭ್ಯರ್ಥಿಗಳಿಗೆ ಮೀಸಲಿಡಬೇಕೆಂದು ಒತ್ತಾಯಿಸಿದರು.

ರೈಲ್ವೆ ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಿರಿ ರೈಲ್ವೆ ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಿರಿ

English summary
More than 2,500 apprentice candidates have sought regularization their job who are working in central railway at mumbai and holding an agitation on March 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X