ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೌರಿಂಗ್‌ ವೈದ್ಯಕೀಯ ಕಾಲೇಜಿಗೆ ಪ್ರಾಧ್ಯಾಪಕರ ನೇಮಕಾತಿ; ಹೈಕೋರ್ಟ್‌ಗೆ ಅರ್ಜಿ

|
Google Oneindia Kannada News

ಬೆಂಗಳೂರು, ಆಗಸ್ಟ್‌ 29: ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ (ABVMCRI) ನೇರ ಬೋಧಕವರ್ಗದ ನೇಮಕಾತಿಯನ್ನು ಪ್ರಶ್ನಿಸಿ ನಾಲ್ವರು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (BMCRI) ಸಹಾಯಕ ಪ್ರಾಧ್ಯಾಪಕರು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಗುರುವಾರ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಮುಂದಿನ ವಿಚಾರಣೆಯ ತನಕ ನೇಮಕಾತಿಯನ್ನು ಮುಂದುವರಿಸದಂತೆ ಸೂಚನೆ ನೀಡಿದ್ದು, ಸೆಪ್ಟೆಂಬರ್ 1ಕ್ಕೆ ವಿಚಾರಣೆ ನಿಗದಿಪಡಿಸಲಾಗಿದೆ.

ಕರ್ನಾಟಕ ಹೈಕೋರ್ಟ್ ನೇಮಕಾತಿ 2022: 150 ಹುದ್ದೆಗಳಿಗೆ ಅರ್ಜಿಕರ್ನಾಟಕ ಹೈಕೋರ್ಟ್ ನೇಮಕಾತಿ 2022: 150 ಹುದ್ದೆಗಳಿಗೆ ಅರ್ಜಿ

ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಿಂದೆ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಾಗಿತ್ತು. ಅದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. 2016 ರಲ್ಲಿ ಸರ್ಕಾರವು ಬೌರಿಂಗ್ ಆಸ್ಪತ್ರೆಯನ್ನು ವೈದ್ಯಕೀಯ ಕಾಲೇಜಾಗಿ ಪರಿವರ್ತಿಸಿತು ಮತ್ತು ನಂತರ ಅದನ್ನು ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಎಂದು ಮರುನಾಮಕರಣ ಮಾಡಿತು. ಆದಾಗ್ಯೂ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಪ್ರಾಧ್ಯಾಪಕರು ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನಿಯೋಜನೆ ಮೇಲೆ ಕೆಲಸ ಮುಂದುವರೆಸಿದರು.

2019 ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಹೆಚ್ಚುವರಿ ಪ್ರಾಧ್ಯಾಪಕರು ಶಾಶ್ವತವಾಗಿ ವರ್ಗಾವಣೆ ಮಾಡಲು ಮತ್ತು ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಸೇರಿಕೊಳ್ಳಲು ಆಯ್ಕೆ ಮಾಡಬಹುದು ಎಂದು ಸರ್ಕಾರವು ಆದೇಶವನ್ನು ಸಹ ಅಂಗೀಕರಿಸಿತು. ಇದು 2021ರಲ್ಲಿ ಜ್ಞಾಪನಾ ಪತ್ರಗಳನ್ನು ಸಹ ನೀಡಿತು. ಅಧ್ಯಾಪಕರ ಆಯ್ಕೆಯನ್ನು ಮಾಡಲು ಸೂಚನೆ ನೀಡಲಾಯಿತು.

ಹೊಸದಾಗಿ ಪ್ರಾಧ್ಯಾಪಕ ನೇಮಕಾತಿಗೆ ನಿರ್ಧಾರ

ಹೊಸದಾಗಿ ಪ್ರಾಧ್ಯಾಪಕ ನೇಮಕಾತಿಗೆ ನಿರ್ಧಾರ

ಜೂನ್ 2021ರಲ್ಲಿ ಸರ್ಕಾರವು ತನ್ನ ನಿಲುವುವನ್ನು ಬದಲಾಯಿಸಿತು. ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಅಧ್ಯಾಪಕರನ್ನು ಹೊಸದಾಗಿ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿತು. ಇದನ್ನು ಕೆಲವು ಪ್ರಾಧ್ಯಾಪಕರು ನ್ಯಾಯಾಲಯದಲ್ಲಿ ತೀರ್ಪನ್ನು ಪ್ರಶ್ನಿಸಿದರು. ನ್ಯಾಯಲಯವು ಅವರ ಪರವಾಗಿ ತೀರ್ಪು ನೀಡಿತು.

ದೇಶದಲ್ಲಿ ಅತಿಹೆಚ್ಚು ಉದ್ಯೋಗ ನೀಡುವ ಮಹಾನಗರವೇ ನಮ್ಮ ಬೆಂಗಳೂರು!ದೇಶದಲ್ಲಿ ಅತಿಹೆಚ್ಚು ಉದ್ಯೋಗ ನೀಡುವ ಮಹಾನಗರವೇ ನಮ್ಮ ಬೆಂಗಳೂರು!

ಹೊಸ ಅಧ್ಯಾಪಕರನ್ನು ನೇಮಿಸಿಕೊಳ್ಳುವುದರಿಂದ ತೊಂದರೆ

ಹೊಸ ಅಧ್ಯಾಪಕರನ್ನು ನೇಮಿಸಿಕೊಳ್ಳುವುದರಿಂದ ತೊಂದರೆ

ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಆಗಸ್ಟ್ 5 ರಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಪ್ರೊಫೆಸರ್‌ಗಳನ್ನು ಸೇರಿಸಿಕೊಳ್ಳದೇ ಇರುವುದರಿಂದ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದಾಗಿನಿಂದ ಈ ಸಮಸ್ಯೆ ಮತ್ತೆ ಕಾಣಿಸಿಕೊಂಡಿದೆ. ಪ್ರೊಫೆಸರ್‌ಗಳು ತಾವು ಕೆಲವು ವರ್ಷಗಳಿಂದ ವೈದ್ಯಕೀಯ ಕಾಲೇಜಲ್ಲಿ ಕೆಲಸ ಮಾಡುತ್ತಿದ್ದೇವೆ. ಈಗ ಹೊಸ ಅಧ್ಯಾಪಕರನ್ನು ನೇಮಿಸಿಕೊಳ್ಳುವುದರಿಂದ ಅವರ ಭವಿಷ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ನಿಯಮಗಳ ಪ್ರಕಾರ ನಾಲ್ಕು ವರ್ಷಗಳ ನಂತರ ಬಡ್ತಿ ನೀಡಬೇಕು

ನಿಯಮಗಳ ಪ್ರಕಾರ ನಾಲ್ಕು ವರ್ಷಗಳ ನಂತರ ಬಡ್ತಿ ನೀಡಬೇಕು

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಹಿರಿಯ ಪ್ರಾಧ್ಯಾಪಕರು ನಿವೃತ್ತರಾದಾಗ ಮಾತ್ರ ನಾವು ಬಡ್ತಿಗಳನ್ನು ಪಡೆಯುತ್ತೇವೆ. ನಿಯಮಗಳ ಪ್ರಕಾರ, ಸಹಾಯಕ ಪ್ರಾಧ್ಯಾಪಕರು ನಾಲ್ಕು ವರ್ಷಗಳ ಸೇವೆಯ ನಂತರ ಸಹ ಪ್ರಾಧ್ಯಾಪಕರಾಗಿ ಬಡ್ತಿ ನೀಡಬೇಕು ಮತ್ತು ನಂತರ ಮತ್ತೆ ಮೂರು ವರ್ಷಗಳ ನಂತರ ಪ್ರಾಧ್ಯಾಪಕರಾಗಿ ಬಡ್ತಿ ನೀಡಬೇಕು ಎನ್ನುತ್ತಾರೆ ಸಹಾಯಕ ಪ್ರಧ್ಯಾಪಕರು.

ಮೊದಲು ಹಾಲಿ ಇರುವವರನ್ನು ನೇಮಿಸಿಕೊಳ್ಳಲು ಆಗ್ರಹ

ಮೊದಲು ಹಾಲಿ ಇರುವವರನ್ನು ನೇಮಿಸಿಕೊಳ್ಳಲು ಆಗ್ರಹ

ಆದರೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಈಗಾಗಲೇ ಪ್ರತಿ ವಿಭಾಗದಲ್ಲಿ ಗೊತ್ತುಪಡಿಸಿದ ಸಂಖ್ಯೆಯ ಅಧ್ಯಾಪಕರು ಇರುವುದರಿಂದ, 10 ವರ್ಷಗಳ ಸೇವೆಯ ನಂತರವೂ ನಮಗೆ ಬಡ್ತಿ ಸಿಗುವುದಿಲ್ಲ ಎಂದು ಅರ್ಜಿದಾರರೊಬ್ಬರು ಹೇಳುತ್ತಾರೆ. ನಾಲ್ಕು ಅರ್ಜಿದಾರರ ಪೈಕಿ ಇಬ್ಬರು 10 ವರ್ಷಗಳಿಂದ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದು, ಹೆಚ್ಚಿನ ಸಂಬಳ ಪಡೆಯುತ್ತಿದ್ದರೂ ಬಡ್ತಿ ಸಿಕ್ಕಿಲ್ಲ. ಅರ್ಜಿದಾರರು ವೈದ್ಯಕೀಯ ಕಾಲೇಜು ಅವರನ್ನು ಮೊದಲು ನೇಮಿಸಿಕೊಳ್ಳಬೇಕು. ನಂತರ ಉಳಿದ ಹುದ್ದೆಗಳಿಗೆ ಹೊಸ ಅಧ್ಯಾಪಕರನ್ನು ನೇಮಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

English summary
Four assistant professors of Bangalore Medical College and Research Institute (BMCRI) have moved the Karnataka High Court challenging the appointment of direct faculty to the Atal Bihari Vajpayee Medical College and Research Institute (ABVMCRI).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X