ಬೆಂಗಳೂರು ವಸತಿ ಯೋಜನೆ; ಅರ್ಜಿ ಸಲ್ಲಿಕೆಗೆ ಅರ್ಹತೆ ಏನು?

ಬೆಂಗಳೂರು, ಏಪ್ರಿಲ್ 01; ಬೆಂಗಳೂರು ನಗರದಲ್ಲಿ ಮನೆ ಮಾಡುವುದು ಹಲವಾರು ಜನರ ಕನಸು. ಇದಕ್ಕಾಗಿ 'ಬೆಂಗಳೂರು ವಸತಿ ಯೋಜನೆ' ರೂಪಿಸಲಾಗಿದೆ. ಆಸಕ್ತರು 30/4/2021ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.

ವಸತಿ ಸಚಿವ ವಿ. ಸೋಮಣ್ಣ ಅವರು ಫೇಸ್ ಬುಕ್ ಪೋಸ್ಟ್ ನಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಅರ್ಹರು ಏಪ್ರಿಲ್ 30ರ ಒಳಗಾಗಿ ಅರ್ಜಿ ಸಲ್ಲಿಸಬೇಕಾಗಿದ್ದು, ಸಾರ್ವಜನಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿದ್ದಾರೆ.

ಪ್ರತಿ ಘಟಕ (1ಬಿಎಚ್‌ಕೆ) ಮೊತ್ತ 10.6 ಲಕ್ಷ ರೂ.ಗಳು. 2.7 ಲಕ್ಷ ಸಹಾಯಧನ ಹೊರತುಪಡಿಸಿ ಬಾಕಿ ಮೊತ್ತ 7.9 ಲಕ್ಷ ರೂ.ಗಳು. ಮನೆ ಹಂಚಿಕೆಯಾದ ನಂತರ ರಾಜೀವ್ ಗಾಂಧಿ ವಸತಿ ನಿಗಮ ಸೂಚಿಸಿದ ಸಂದರ್ಭದಲ್ಲಿ ಶೇ 25ರಷ್ಟು ಪಾವತಿ ಮಾಡಬೇಕು.

ಉಳಿದ ಹಣಕ್ಕೆ ಸಾಲ ಪಡೆಯಲು ಇಚ್ಚಿಸಿದಲ್ಲಿ ನಿಗಮದ ವತಿಯಿಂದ 15 ವರ್ಷಗಳಿಗೆ ಸಾಲ ನೀಡಲಾಗುತ್ತದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಲು ವೆಬ್ ಸೈಟ್‌ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸಲು ಅರ್ಹತೆ

ಅರ್ಜಿ ಸಲ್ಲಿಸಲು ಅರ್ಹತೆ

ಅರ್ಜಿಗಳನ್ನು ಸಲ್ಲಿಸುವವರ ವಾರ್ಷಿಕ ಆದಾಯ 3 ಲಕ್ಷ ಮೀರಿರಬಾರದು. ಕನಿಷ್ಠ 5 ವರ್ಷ ಬೆಂಗಳೂರು ನಗರ ಅಥವ ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ವಾಸವಾಗಿರಬೇಕು. ರಾಜ್ಯದಲ್ಲಿ ಎಲ್ಲಿಯೂ ಸ್ವಂತ ಮನೆ ಹೊಂದಿರಬಾರದು.

ಯಾವ-ಯಾವ ದಾಖಲೆಗಳು

ಯಾವ-ಯಾವ ದಾಖಲೆಗಳು

ಅರ್ಜಿಗಳನ್ನು ಸಲ್ಲಿಸಲು ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ವಾಸ ದೃಢೀಕರಣ ಪತ್ರ, ಬಿಪಿಎಲ್/ ಎಪಿಎಲ್ ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಚುನಾವಣಾ ಆಯೋಗದ ಗುರುತಿನ ಚೀಟಿ ಸಂಖ್ಯೆ, ಬ್ಯಾಂಕ್ ಖಾತೆ ನಂಬರ್ ದಾಖಲೆಗಳು ಬೇಕು.

ಅರ್ಜಿ ಶುಲ್ಕ ಎಷ್ಟು?

ಅರ್ಜಿ ಶುಲ್ಕ ಎಷ್ಟು?

ಅರ್ಜಿಗಳನ್ನು ಸಲ್ಲಿಸುವ ಜನರು 100 ರೂ. ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಆನ್‌ಲೈನ್ ಮೂಲಕ ಪಾವತಿಸಬಹುದು. ನಗದು ರೂಪದಲ್ಲಿ ಪಾವತಿ ಮಾಡುವವರು ಬೆಂಗಳೂರು ಒನ್ ಕೇಂದ್ರ, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಪಾವತಿ ಮಾಡಬಹುದು.

Recommended Video

    ಇಂದಿನಿಂದ ಸಾರಿಗೆ ನೌಕರರ ಚಳುವಳಿ ಆರಂಭ, ಏ.7ಕ್ಕೆ ಬಸ್‌ ಸಂಚಾರ ಸ್ಥಗಿತ | Oneindia Kannada
    ಎಲ್ಲಿ ಅರ್ಜಿ ಸಲ್ಲಿಸಬೇಕು?

    ಎಲ್ಲಿ ಅರ್ಜಿ ಸಲ್ಲಿಸಬೇಕು?

    'ಬೆಂಗಳೂರು ವಸತಿ ಯೋಜನೆಗೆ ಆಸಕ್ತರು 30/4/2021ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿಗಳನ್ನು ಎಲ್ಲಿ ಸಲ್ಲಿಸಬಹುದು ಎಂಬ ವಿವರ ಇಲ್ಲಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+