ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ರಿಯಾಶೀಲ ಮಾಧ್ಯಮ ಡಿಪ್ಲೊಮಾ ಕೋರ್ಸಿಗೆ ಆಹ್ವಾನ

By Mahesh
|
Google Oneindia Kannada News

ಬೆಂಗಳೂರು, ಮೇ.7: ಬೆಂಗಳೂರಿನ ಬದುಕು ಕಮ್ಯೂನಿಟಿ ಕಾಲೇಜಿನ ವತಿಯಿಂದ ಆರು ತಿಂಗಳ 'ಕ್ರಿಯಾಶೀಲ ಮಾಧ್ಯಮ' ಡಿಪ್ಲೊಮಾ ಕೋರ್ಸ್ ಅನ್ನು ನಡೆಸಲಾಗುತ್ತಿದೆ. ತರಬೇತಿಯಲ್ಲಿ ಮುದ್ರಣ, ಹಾಗೂ "ವಿದ್ಯುನ್ಮಾನ ಮಾಧ್ಯಮಗಳ "ವಿಷಯಗಳನ್ನು ಒಳಗೊಂಡಿರುತ್ತದೆ.

ಅವಕಾಶ ವಂಚಿತ ಗ್ರಾಮೀಣ ಯುವಜನರಿಗೆ ಕನ್ನಡ ಮಾಧ್ಯಮದಲ್ಲಿ ಅತ್ಯುತ್ತಮ ಶಿಕ್ಷಣ ನೀಡುವುದು ಆ ಮೂಲಕ ಅವರ ಸಾಮಾಜಿಕ ಚಲನೆಯನ್ನು ಮೇಲ್ದರ್ಜೆಗೆ ಕೊಂಡೊಯ್ಯವುದು ಬದುಕು ಕಮ್ಯೂನಿಟಿ ಕಾಲೇಜಿನ ಮುಖ್ಯ ಗುರಿ.

ಪ್ರಸ್ತುತ ವರ್ಷದ ಮಾಧ್ಯಮ ಕೋರ್ಸ್ 2015-16 ರ ಸಾಲಿಗೆ ಸಾಮಾಜಿಕವಾಗಿ-ಆರ್ಥಿಕವಾಗಿ ಹಿಂದುಳಿದ ಸಮುದಾಯ, ಪ್ರದೇಶಗಳ ಹಿನ್ನಲೆಯ, ಮಾಧ್ಯಮಕರ್ತರಾಗಲು ಆಸಕ್ತಿ ಇರುವ ಯುವಜನರು ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ.

ಕೋರ್ಸ್‌ನ ವಿಶೇಷಗಳು:
* ಮಾಧ್ಯಮ ಅಧ್ಯಯನ, ಸಾಮಾಜಿಕ ವಿಜ್ಞಾನ, ಕಾನೂನು, ಸಂಸ್ಕೃತಿ ಚಿಂತನೆ, ಇತಿಹಾಸ, ಸಾಹಿತ್ಯ, ಮತ್ತು ತತ್ವಶಾಸ್ತ್ರ ಮುಂತಾದ ಬಹುಶಿಸ್ತೀಯ ಅಧ್ಯಯನವಿರುವ ಪಠ್ಯಕ್ರಮ.
* ವಿಡಿಯೋ ಎಡಿಟಿಂಗ್, ಕ್ಯಾಮರ,ಮುದ್ರಣ ವಿನ್ಯಾಸ (ಇನ್ ಡಿಸೈನ್/ಡಿ.ಟಿ.ಪಿ),ಮುಂತಾದ ತಂತ್ರಜ್ಞಾನ ಕೌಶಲ್ಯ.
* ಇಂಗ್ಲಿಷ್‌ ಭಾಷೆ, ಭಾಷಾಂತರ ಕಲೆ, ವರದಿಗಾರಿಕೆ, ಬರವಣಿಗೆ ಮುಂತಾದ ಕೌಶಲ್ಯಗಳು.
* ತಾತ್ವಿಕ ವಿಚಾರಗಳ ಕಲಿಕೆ, ಮಾಧ್ಯಮ ಕೌಶಲ್ಯಗಳ ಅಭ್ಯಾಸ ಮತ್ತು ಜೀವನ ಕೌಶಲ್ಯಗಳ ಕಲಿಕೆಯನ್ನು ಶಿಷ್ಟವಾಗಿ ಮಿಳಿತಗೊಳಿಸಲಾಗಿದೆ.
* ಕ್ಷೇತ್ರಾಧ್ಯಯನ, ಪತ್ರಿಕಾಲಯ - ದೃಶ್ಯ - ಶ್ರವಣ ಮಾಧ್ಯಮ ಕೇಂದ್ರಗಳಿಗೆ ಭೇಟಿ, "ವಿಚಾರಸಂಕಿರಣ, ಚಲನಚಿತ್ರೋತ್ಸವ, ಅಧ್ಯಯನ ಪ್ರವಾಸ, ಭಾರತ ಮತ್ತು ಕರ್ನಾಟಕದ ಪ್ರಸಿದ್ಧ ಪತ್ರಕರ್ತರೊಂದಿಗೆ ಸಂವಾದ "ಗೆ ವೈವಿದ್ಯಮಯ ತರಗತಿಗಳು, ಬೋಧನಾ ವಿಧಾನಗಳು.

Application invited from aspirants for creative Diploma course

* ಹಲವು ವರ್ಷಗಳ ಅನುಭವವಿರುವ ಶಿಕ್ಷಕರಿಂದ ಮತ್ತು ಅನುಭವಿ ಪತ್ರಕರ್ತರಿಂದ ಪಾಠ-ಮಾರ್ಗದರ್ಶನ.
* ಕ್ಷೇತ್ರ ಕಾರ್ಯ ಮತ್ತು ಇಂಟರ್ನ್‌ಶಿಪ್ ಅವಕಾಶಗಳು.
* ಅಭ್ಯರ್ಥಿಗಳ ಸಾಮಾಜಿಕ-ಆರ್ಥಿಕ ಹಿನ್ನಲೆಗನುಗುಣವಾಗಿ ತರಬೇತಿ ಶುಲ್ಕ, ಸೂಕ್ತ ಅಭ್ಯರ್ಥಿಗಳಿಗೆ ವಿಶೇಷ ಸ್ಕಾಲರ್ ಶಿಪ್, ಫೆಲೋಶಿಪ್‌ಗಳ ಅವಕಾಶ"ವಿದೆ. ಅಗತ್ಯವಿರುವವರಿಗೆ ವಸತಿ ಸೌಕರ್ಯ ಒದಗಿಸಲಾಗುವುದು.
* ಇದುವರೆಗೆ ಕೋರ್ಸ್‌ನಿಂದ 60 ಯುವಜನರು ಡಿಪ್ಲೊಮಾ ಪದವಿ ಪಡೆದಿದ್ದು 50 ಯುವಜನರು ಪ್ರಮುಖ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೋರ್ಸ್‌ನ ಅವಧಿ: 2015 ಜುಲೈ ತಿಂಗಳಿಂದ 2016 ಜನವರಿವರಗೆ.

ಅರ್ಹತೆ: 21 ರಿಂದ 35 ವರ್ಷ ವಯೋಮಾನ, ಯಾವುದಾದರೂ ವಿಷಯದಲ್ಲಿ ಪದವಿ ಪಡೆದಿರಬೇಕು (ಪದವಿಯಲ್ಲಿ ಅನುತೀರ್ಣ ಹೊಂದಿದವರಿಗೂ ಆವಕಾಶ ಇದೆ)
* ಮಹಿಳೆ ಮತ್ತು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯ, ಪ್ರದೇಶಗಳ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ. ಈಗಾಗಲೇ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವವರೂ ಅರ್ಜಿ ಸಲ್ಲಿಸಬಹುದು.
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 5. 2015.

ಶಿಕ್ಷಣ ಮಾಧ್ಯಮ: ಇಂಗ್ಲಿಷ್ ಕಲಿಕೆ - ಬಳಕೆಯೊಂದಿಗೆ ಕನ್ನಡ ಮಾಧ್ಯಮ.

Application invited from aspirants for creative Diploma course

ಆಸಕ್ತರು ಅರ್ಜಿ ಸಲ್ಲಿಸಲು ಬದುಕು ಕಮ್ಯುನಿಟಿ ಕಾಲೇಜನ್ನು ಸಂಪರ್ಕಿಸಲು ಕೋರಲಾಗಿದೆ. ಆಯ್ಕೆ ಪ್ರಕ್ರಿಯೆಯು ಬೆಂಗಳೂರು, ಕರಾವಳಿ, ಉತ್ತರಕರ್ನಾಟಕ, ಮಧ್ಯ ಕರ್ನಾಟಕದ ಪ್ರಮುಖ ಸ್ಥಳಗಳಲ್ಲಿ ನಡೆಯಲಿದೆ.

ವಿಳಾಸ: ಸಂವಾದ
ಬದುಕು ಕಮ್ಯುನಿಟಿ ಕಾಲೇಜು
Baduku Community College For Alternatives
136/7,2nd Cross, Elephant Rock Road,
Near South End Circle, 3rd Block Jayanagar
Bangalore 560011.

ಇಮೇಲ್ :
badukucollege.media @gmail.com, [email protected]
ಪೋನ್: 080-2664 0244
* ಮುರಳಿ ಮೋಹನ ಕಾಟಿ-99720 89471

ಈ ಕಾಲೇಜಿನಿಂದ ಉತ್ತೀರ್ಣರಾಗಿ ಪ್ರಮಾಣ ಪತ್ರ ಪಡೆದುಕೊಂಡವರು ಬಿಟಿವಿ, ಸಮಯ, ಈಟಿವಿವ್ ಕನ್ನಡ, ರಾಜ್ ನ್ಯೂಸ್, ಕಸ್ತೂರಿ ಸುದ್ದಿ ವಾಹಿನಿ, ಟಿವಿ9 ಕನ್ನಡ, ಉದಯ ಟಿವಿ, ವಿಜಯ ಕರ್ನಾಟಕ, ವಾರ್ತಾಭಾರತಿ, ಪ್ರಜಾವಾಣಿ ಮುಂತಾದ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

English summary
Baduku community college, Bengaluru has invited application from aspirants for creative Diploma course of six months duration. Application can be submitted before June 5, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X