ಬೆಂಗಳೂರಿನ ಜೆ.ಪಿ.ಭವನದಲ್ಲಿದ್ದ ಅಪ್ಪಾಜಿ ಕ್ಯಾಂಟೀನ್‌ಗೆ ಬೀಗ
ಬೆಂಗಳೂರು, ಡಿಸೆಂಬರ್ 26 : ಬೆಂಗಳೂರಿನ ಜೆಡಿಎಸ್ ಕೇಂದ್ರ ಕಚೇರಿಯಲ್ಲಿದ್ದ 'ಅಪ್ಪಾಜಿ ಕ್ಯಾಂಟೀನ್' ಬಾಗಿಲು ಮುಚ್ಚಿದೆ. ಕ್ಯಾಂಟೀನ್ ಅನ್ನು ಮುಚ್ಚಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಸ್ಪಷ್ಟಪಡಿಸಿದ್ದಾರೆ.
'ಜೆಡಿಎಸ್ ಕಚೇರಿ ಆವರಣದಲ್ಲಿ ಆರಂಭವಾಗಿದ್ದ ಕ್ಯಾಂಟೀನ್ 1 ವರ್ಷದಿಂದ ನಡೆಯುತ್ತಿತ್ತು. ಕ್ಯಾಂಟೀನ್‌ಗೆ ಹೆಚ್ಚಿನ ಜನರು ಬರದ ಕಾರಣ ಆಹಾರ ವ್ಯರ್ಥವಾಗುತ್ತಿದೆ. ಆದ್ದರಿಂದ, 20 ದಿನಗಳ ಹಿಂದೆಯೇ ಕ್ಯಾಂಟೀನ್ ಮುಚ್ಚುವ ತೀರ್ಮಾನ ಮಾಡಲಾಗಿತ್ತು' ಎಂದು ಟಿ.ಎ.ಶರವಣ ಹೇಳಿದ್ದಾರೆ.
'ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರೊಂದಿಗೆ ಯಾವುದೇ ಅಸಮಾಧಾನವಿಲ್ಲ. ಎಚ್.ಡಿ.ರೇವಣ್ಣ ಅವರಿಗೆ ತಿಳಿಸಿಯೇ ಕ್ಯಾಂಟೀನ್ ಮುಚ್ಚುವ ತೀರ್ಮಾನವನ್ನು ಕೈಗೊಂಡಿದ್ದೇನೆ' ಎಂದು ಶರವಣ ಅವರು ಸ್ಪಷ್ಟನೆ ನೀಡಿದ್ದಾರೆ.

'ಹನುಂತನಗರದಲ್ಲಿರುವ ಕ್ಯಾಂಟೀನ್ ಅನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಪ್ರತಿ ದಿನ ಇಲ್ಲಿ 3,500 ಜನರು ಊಟ ಮಾಡುತ್ತಿದ್ದಾರೆ. ಹಸಿದವರಿಗೆ ಊಟ ನೀಡುವ ನನ್ನ ಉದ್ದೇಶ ಮುಂದುವರೆಯಲಿದೆ' ಎಂದು ಶರವಣ ತಿಳಿಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 5 ರೂ.ಗೆ ಉಪಹಾರ, 10 ರೂ. ಗೆ ಊಟ ನೀಡುವ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದರು. ಆದರೆ, ಅದಕ್ಕೂ ಮೊದಲೇ ಹನುಮಂತನಗರದಲ್ಲಿ ಟಿ.ಎ.ಶರವಣ ಅವರು ಅಪ್ಪಾಜಿ ಕ್ಯಾಂಟೀನ್ ಅನ್ನು ಹನುಮಂತ ನಗರದಲ್ಲಿ ಮೊದಲು ಆರಂಭಿಸಿದರು.
5 ರೂ.ಗೆ ತಟ್ಟೆ ಇಡ್ಲಿ, ವಡೆ, ಖಾರಾಬಾತ್, ಕೇಸರಿ ಬಾತ್. 10 ರೂ.ಗೆ ಪೊಂಗಲ್, ರಾಗಿ ಮುದ್ದೆ, ಅನ್ನ ಸಾಂಬಾರು, 3 ರೂ. ಗೆ ಕಾಫಿ, ಟೀ ದೊರೆಯುತ್ತಿದೆ.












Click it and Unblock the Notifications