ಬೆಂಗಳೂರಿನಲ್ಲಿ ಆ್ಯಪ್ ಬೆಂಬಲಿತ ಇಂಧನ ಡೆಲಿವರಿ ಸೇವೆ ಆರಂಭ

ಬೆಂಗಳೂರು, ಆಗಸ್ಟ್ 10: ಇಂಧನ ಪೂರೈಕೆ ಮಾಡುವ ಆ್ಯಪ್ ಬೆಂಬಲಿತ "ದಿ ಫ್ಯುಯೆಲ್ ಡೆಲಿವರಿ" ತನ್ನ ಕಾರ್ಯಾಚರಣೆಯನ್ನು ಬೆಂಗಳೂರಿನಲ್ಲಿ ಆರಂಭಿಸಿರುವುದಾಗಿ ಮಂಗಳವಾರ ಘೋಷಣೆ ಮಾಡಿದೆ.

ದೆಹಲಿ ಹಾಗೂ ಮುಂಬೈ ನಂತರ ಈ ಸೇವೆ ಪಡೆಯಲಿರುವ ಮೂರನೇ ನಗರ ಬೆಂಗಳೂರು ಆಗಿದೆ. ಭಿನ್ನ ವಲಯಗಳಿಗೆ ಅಂದರೆ, ಮೂಲಸೌಕರ್ಯ ಅಭಿವೃದ್ಧಿ, ಆಸ್ಪತ್ರೆ, ಆರೋಗ್ಯ ಸೇವೆಗಳು, ಕಾರ್ಪೊರೇಟ್ ಕಚೇರಿಗಳು ಹಾಗೂ ಐಟಿ ಪಾರ್ಕ್‌ಗಳು, ಉತ್ಪಾದನೆ ಹಾಗೂ ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು, ಶಾಪಿಂಗ್ ಮಾಲ್‌ಗಳು, ವೇರ್‌ಹೌಸ್‌ಗಳು, ಕೃಷಿ ಹಾಗೂ ಗಣಿಗಾರಿಕೆಗೆ ಸೇವೆ ಒದಗಿಸಲಿವೆ.

2020ರಲ್ಲಿ ಈ ಡೆಲಿವರಿ ಸೇವೆ ಆರಂಭಗೊಂಡಿದ್ದು, ಸದ್ಯಕ್ಕೆ ದೆಹಲಿ, ಮುಂಬೈನಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. 24x7 ಲಭ್ಯವಿರುವ ಈ ಸೇವೆ ಪಡೆಯಲು ಮುಂಚಿತವಾಗಿಯೇ ಬುಕ್ ಮಾಡಬಹುದು ಇಲ್ಲವೇ ಎಕ್ಸ್‌ಪ್ರೆಸ್ ಡೆಲಿವರಿಯೂ ಲಭ್ಯವಿದೆ.

App Based The Fuel Delivery Service Launches Operations In Bengaluru

"ಬೆಂಗಳೂರು ವಾಣಿಜ್ಯ ಕೇಂದ್ರವಾಗಿದ್ದು, ಹಲವು ಉತ್ಪಾದನಾ ವಲಯಗಳಿಂದ ಇಂಧನಕ್ಕೆ ಭಾರೀ ಬೇಡಿಕೆ ಹೊಂದಿರುವ ನಗರವಾಗಿದೆ. ಹೀಗಾಗಿ ಇಲ್ಲಿ ಸೇವೆ ನೀಡಲು ಬಯಸಿದ್ದೇವೆ. ನಗರದಲ್ಲಿ ಉದ್ಯೋಗ ಸೃಷ್ಟಿಗೂ ಇದು ನೆರವಾಗಲಿದೆ" ಎಂದು "ಫ್ಯುಯೆಲ್ ಡೆಲಿವರಿ" ಸಂಸ್ಥಾಪಕ ಹಾಗೂ ಸಿಇಒ ರಾಕ್ಷಿತ್ ಮಾತುರ್ ಈ ಸೇವೆಯ ಪರಿಚಯ ನೀಡಿದರು.

ಕೊರೊನಾ ಕಾರಣವಾಗಿ ಡೆಲಿವರಿ, ಇ-ಕಾಮರ್ಸ್ ಸೇವೆಗಳಿಗೆ ಬೇಡಿಕೆ ಹೆಚ್ಚಾದ ಬೆನ್ನಲ್ಲೇ ಕಾರ್ಯಾಚರಣೆಯನ್ನು ಬೆಂಗಳೂರಿನಲ್ಲಿ ವಿಸ್ತರಿಸುವ ಆಲೋಚನೆ ಮಾಡಿದ್ದಾಗಿ ಅವರು ತಿಳಿಸಿದ್ದಾರೆ. ಗ್ರಾಹಕರು ಇಂಧನಕ್ಕಾಗಿ ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲಿದೆ ಎಂದು ವಿವರಣೆ ನೀಡಿದರು.

ತಿಂಗಳಿಗೆ 80ರಿಂದ 90 ಲೀಟರ್ ಇಂಧನ ಅವಶ್ಯಕತೆಯನ್ನು ಸದ್ಯಕ್ಕೆ ಪೂರೈಸಲಾಗುತ್ತಿದೆ. ಇಂಧನ ಅವಶ್ಯಕತೆಯನ್ನು ಸೂಕ್ತವಾಗಿ, ಸುರಕ್ಷಿತವಾಗಿ, ತಕ್ಕ ಬೆಲೆಯಲ್ಲಿ ಪೂರೈಸುವ ಉದ್ದೇಶದೊಂದಿಗೆ ಈ ಸೇವೆಯನ್ನು ಆರಂಭಿಸಲಾಗಿದೆ. ಗ್ರಾಹಕರಿಗೆ ಅನುಕೂಲವಾಗುವಂತೆ ವಾಹನ ಟ್ರ್ಯಾಕಿಂಗ್ ಸೇವೆಯನ್ನು ಒದಗಿಸಲಾಗಿದೆ. ಬೆರಳ ತುದಿಯಲ್ಲೇ ಇಂಧನ ಸೇವೆಯನ್ನು ಪಡೆಯಬಹುದಾದ ಈ ಸೇವೆ ದೆಹಲಿ ಹಾಗೂ ಮುಂಬೈನಲ್ಲಿ ಮೆಚ್ಚುಗೆಯನ್ನೂ ಗಳಿಸಿಕೊಂಡಿದೆ. ಬೆಂಗಳೂರಿನಲ್ಲಿ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತಗೊಳ್ಳುವ ನಿರೀಕ್ಷೆಯಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ವೇಗವಾಗಿ ಇಂಧನ ತಲುಪಿಸುವ ಈ ಸೇವೆಗೆ ಜನರು ಬೆಂಬಲಿಸಿದ್ದಾರೆ. ಭಾರತದಲ್ಲಿಯೇ ಉತ್ತಮ ಸೇವೆ ಒದಗಿಸುವ ಕಂಪನಿಯಾಗಿ ಉನ್ನತಿ ಸಾಧಿಸುವ ಗುರಿ ಹೊಂದಿರುವುದಾಗಿ ಸಿಇಒ ರಕ್ಷಿತ್ ಹೇಳಿದ್ದಾರೆ.

ಚಂಡೀಗಢ, ಹೈದರಾಬಾದ್, ಚೆನ್ನೈ, ಕೋಲ್ಕತ್ತಾದಲ್ಲಿ ಕೂಡ ಮುಂದಿನ 12-18 ತಿಂಗಳಿನಲ್ಲಿ ಈ ಸೇವೆಯನ್ನು ವಿಸ್ತರಿಸುವ ಯೋಜನೆಯನ್ನು ಕಂಪನಿ ಹೊಂದಿದೆ. 2021ರ "ಇಂಡಿಯನ್ ಅಚೀವರ್ಸ್" ಪ್ರಶಸ್ತಿಯನ್ನೂ ಈ ಸ್ಟಾರ್ಟ್ ಅಪ್ ಕಂಪನಿ ಪಡೆದುಕೊಂಡಿದೆ. ತೈಲ ಉತ್ಪಾದಕ ಕಂಪನಿಗಳು ಈ ಸ್ಟಾರ್ಟ್ ಅಪ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅತಿ ವೇಗವಾಗಿ ಈ ಡೆಲಿವರಿ ಸೇವೆ ಬೆಳೆಯುತ್ತಿದೆ.

ಮೊಬೈಲ್ ಅಥವಾ ವೆಬ್‌ ಆ್ಯಪ್ ಮೂಲಕ ಇಂಧನಕ್ಕೆ ಆರ್ಡರ್ ಮಾಡಬೇಕು. ಗ್ರಾಹಕರ ಹೆಸರು, ಮೊಬೈಲ್ ಸಂಖ್ಯೆ, ಎಷ್ಟು ಇಂಧನ ಬೇಕು ಎನ್ನುವ ಮಾಹಿತಿ, ವಿಳಾಸ ಹಾಗೂ ಸ್ಥಳ ಹಾಗೂ ಇಂಧನ ಬೇಕಾದ ಸಮಯವನ್ನು ನಮೂದಿಸಬೇಕು. ಆಗ ಆ ಸಮಯಕ್ಕೆ ಇಂಧನ ಮನೆ ಬಾಗಿಲಿಗೇ ತಲುಪಲಿದೆ ಎಂದು ಕಂಪನಿ ತಿಳಿಸಿದೆ. ಇಂಧನ ಪೂರೈಸುವ ಎಲ್ಲಾ ವಾಹನಗಳ ಟ್ರ್ಯಾಕಿಂಗ್ ವ್ಯವಸ್ಥೆಯೂ ಇದೆ.

ಪೆಟ್ರೋಲಿಯಂ, ನೈಸರ್ಗಿಕ ಅನಿಲ ಸಚಿವಾಲಯದ ನಿಯಮಗಳ ಅಡಿಯಲ್ಲಿ ಈ ಸೇವೆಯನ್ನು ನೀಡಲಾಗುತ್ತಿದೆ. ಗ್ರಾಹಕರು ಕೂಡ ಆರ್ಡರ್ ಮಾಡಿದಾಗಿನಿಂದ ಇಂಧನ ತಲುಪುವವರೆಗೂ ವಾಹನವನ್ನು ಟ್ರ್ಯಾಕ್ ಮಾಡಬಹುದು ಎಂದು ರಕ್ಷಿತ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ www.thefueldelivery.comಗೆ ಭೇಟಿ ನೀಡಿ...

Recommended Video

      ಕೊರೋನ ಮೂರನೇ ಅಲೆ ಶುರು! | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+