ನಮ್ಮ ಮಾಹಿತಿ ಕೇಳುತ್ತಿರುವುದೇಕೆ? ಪೊಲೀಸರಿಗೆ ಅಪಾರ್ಟ್‌ಮೆಂಟ್ ನಿವಾಸಿಗಳ ಪ್ರಶ್ನೆ
ಬೆಂಗಳೂರು, ಆಗಸ್ಟ್ 18: ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರ ವಿವರವನ್ನು ಪೊಲೀಸರು ಕೇಳುತ್ತಿದ್ದಾರೆ ಎಂದು ಡಾ.ಕವಿತಾ ರೆಡ್ಡಿ ಎಂಬುವವರು ಆರೋಪಿಸಿ ಟ್ವೀಟ್ ಮಾಡಿದ್ದಾರೆ. ತನ್ನ ಟ್ವೀಟ್ ಅನ್ನು ನಗರ ಪೊಲೀಸರಿಗೂ ಟ್ಯಾಗ್ ಮಾಡಿದ್ದಾರೆ. ಆದರೆ ಪೊಲೀಸರು ಮಾತ್ರ ನಾವು ಯಾವುದೇ ಮಾಹಿತಿಯನ್ನು ಕೇಳಿಲ್ಲ ಎಂದಿದ್ದಾರೆ. ಆದರೆ, ಅಪಾರ್ಟ್‌ಮೆಂಟ್ ಆಡಳಿತ ಮಂಡಳಿಗಳು ತಮ್ಮ ಎಲ್ಲಾ ನಿವಾಸಿಗಳ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಿ ಎಂದು ಸೂಚಿಸಿದ್ದಾರೆ.
ಕವಿತಾ ರೆಡ್ಡಿಯಿಂದ ಬೆಂಗಳೂರು ನಗರ ಪೊಲೀಸ್‌ಗೆ ಟ್ವೀಟ್
ಬಂಡೆಪಾಳ್ಯ ಪೊಲೀಸರು ಅಪಾರ್ಟ್‌ಮೆಂಟ್ ನಿವಾಸಿಗಳ ಡೇಟಾವನ್ನು ಕೇಳಿದ್ದಾರೆ. ಅವರಿಗೇಕೆ ಪರ್ಸನಲ್ ಡೇಟಾ ನೀಡಬೇಕು ಎಂದು ಕವಿತಾ ರೆಡ್ಡಿ ಎಂಬುವವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ. ಅಪಾರ್ಟ್‌ಮೆಂಟ್ ನಿವಾಸಿಗಳ ಬಳಿಯಲ್ಲಿ ಕೇಳಲಾಗಿದ್ದ ಮಾಹಿತಿಯ ಅರ್ಜಿಯನ್ನು ಸಹ ಪೋಸ್ಟ್ ಮಾಡಿ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.

ಕವಿತಾರೆಡ್ಡಿ ಹೇಳಿದ್ದೇನು?
ಕವಿತಾ ರೆಡ್ಡಿಯವರು ಹೆಚ್‌ಎಸ್‌ಆರ್ ಲೇಔಟ್ ನಿವಾಸಿಯಾಗಿದ್ದು. ಬಂಡೇಪಾಳ್ಯ ಪೊಲೀಸರು ನೀಡಿದ್ದ ಅರ್ಜಿಯನ್ನು ಟ್ವೀಟ್ ಮಾಡಿದ್ದಾರೆ. "ಅಪಾರ್ಟ್‌ಮೆಂಟ್ ನಿವಾಸಿಗಳ ಪರ್ಸನಲ್ ಮಾಹಿತಿ ಪೊಲೀಸರಿಗೆ ಏಕೆ ನೀಡಬೇಕು. ಐಡಿ ನಂಬರ್, ಡ್ರೈವಿಂಗ್ ಲೈಸನ್ಸ್, ಪಾಸ್‌ಪೋರ್ಟ್ ವಿವರವನ್ನೆಲ್ಲಾ ಕೇಳಿದ್ದಾರೆ. ನಾವು ಅಪಾರ್ಟ್‌ಮೆಂಟ್ ಆಡಳಿತದಾರು ಯಾವ ಆದೇಶದ ಮೇರೆಗೆ ಡೇಟಾ ಬೇಕಿದೆ ಎಂದು ಕೇಳಿದ್ದೇವೆ. ಇದೀಗ ಅಪಾರ್ಟ್‌ಮೆಂಟ್ ಮಾಲೀಕರು ಡೇಟಾ ಪಡೆದು ಇಟ್ಟುಕೊಳ್ಳಿ ಎಂದಿದ್ದಾರೆ. ನಾವು ಯಾವುದೇ ಆದೇಶವಿಲ್ಲದೇ ಮಾಹಿತಿ ನೀಡಲು ಸಾಧ್ಯವಿಲ್ಲ. ನಮಗೆ ಅರ್ಜಿ ಕೊಟ್ಟವರ ಮಾಹಿತಿಯು ನಮ್ಮ ಬಳಿಯಿದೆ" ಎಂದು ಕವಿತಾ ರೆಡ್ಡಿ ಹೇಳಿದ್ದಾರೆ.

ಅಪಾರ್ಟ್‌ಮೆಂಟ್ ನಿವಾಸಿಗಳ ಮಾಹಿತಿ ಬಗ್ಗೆ ಪೊಲೀಸರ ಸ್ಪಷ್ಟನೆ
ಅಪಾರ್ಟ್‌ಮೆಂಟ್ ನಿವಾಸಿಗಳ ಮಾಹಿತಿಯನ್ನು ಕೇಳಿಲ್ಲ. ಅಪಾರ್ಟ್‌ಮೆಂಟ್‌ನಲ್ಲಿರುವವರ ಮಾಹಿತಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಆಡಳಿತ ಮಂಡಳಿಗೆ ಸೂಚಿಸಿದ್ದೇವೆ. ಯಾವ ರೀತಿ ಸಂಗ್ರಹಿಸಬೇಕು ಎಂದಾಗ ಅನುಕೂಲಕ್ಕಾಗಿ ಫಾರ್ಮೆಟ್ ಅನ್ನು ನೀಡಿದ್ದೇವೆ ಅಷ್ಟೇ, ಆದರೆ ಈ ಬಗ್ಗೆ ಗೊಂದಲ ಉಂಟಾಗಿದೆ. ನಾವು ಯಾವುದೇ ದಾಖಲೆಯನ್ನು ನೀಡುವಂತೆ ಕೇಳಿಲ್ಲ ಎಂದು ಪೊಲೀಸರು ಸ್ಪಷ್ಟನೆಯನ್ನು ನೀಡಿದ್ದಾರೆ.

ಕೆಲವೊಮ್ಮೆ ಪೊಲೀಸರು ಅನಧಿಕೃತ ನಿವಾಸಿಗಳನ್ನು ಪತ್ತೆ ಮಾಡಲು. ವಿದೇಶಿದಿಂದ ಅಕ್ರಮವಾಗಿ ನೆಲಸಿರುವವರ ಮಾಹಿತಿ ಕಲೆಹಾಕಲು, ಕೆಲವೊಮ್ಮೆ ಸೇಫ್ಟಿ ದೃಷ್ಟಿಯಿಂದ ಮಾಹಿತಿಯನ್ನು ಕೇಳಿರುತ್ತಾರೆ. ಆದರೆ ಈ ಎಲ್ಲಾ ಮಾಹಿತಿಯು ಅಪಾರ್ಟ್‌ಮೆಂಟ್ ಆಡಳಿತ ಮಂಡಳಿ ತಿಳಿದಿರ ಬೇಕಾಗಿರುತ್ತದೆ. ಪೊಲೀಸರು ಕೆಲವೊಮ್ಮೆ ಕಳ್ಳತನವಾದಗಲೋ, ಕೊಲೆಯಾದಗಲೋ ಮನೆಯವರ ವಿವರವನ್ನು ಕೇಳಿದರೇ ಆ ಮಾಹಿತಿಯೇ ಸರಿಯಾಗಿ ಸಿಗುವುದಿಲ್ಲಾ . ಇಂಥಾ ಕಾರಣಕ್ಕಾದರೂ ಮನೆಯಲ್ಲಿರುವವರ ವಿವರವನ್ನು ಫೋನ್ ನಂಬರ್ ಸೇರಿ ಕೆಲವು ಮಾಹಿತಿಯನ್ನು ಅಪಾರ್ಟ್‌ಮೆಂಟ್ ಮಾಲೀಕರು, ಆಡಳಿತ ಮಂಡಳಿ ಸಂಗ್ರಹಿಸಿಡಬೇಕಾಗುತ್ತದೆ.












Click it and Unblock the Notifications