ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರ್ಷಿಣಿ ಭಾರದ್ವಾಜ್ ಅವರಿಂದ 'ನನ್ನ ಕಥೆ' ಏಕವ್ಯಕ್ತಿ ನಾಟಕ

By Nayana
|
Google Oneindia Kannada News

ಬೆಂಗಳೂರು, ಜೂನ್ 4: ಅನ್ವೇಷಣೆ ರಂಗತಂಡ ಏಕವ್ಯಕ್ತಿ ಏಕಾಂಕ ನಾಟಕವನ್ನು ವರ್ಷಿಣಿ ಭಾರದ್ವಾಜ್ ಅವರಿಂದ 'ನನ್ನ ಕಥೆ 'ಎಂಬ ಶೀರ್ಷಿಕೆಯಡಿ ಜೂನ್ 6 ರಂದು ಸಂಜೆ 7 ಗಂಟೆಗೆ ಹುನುಮಂತನಗರದ ಕೆಎಚ್‌ ಕಲಾಸೌಧದಲ್ಲಿ ಏರ್ಪಡಿಸಿದೆ.

ಕುಟುಂಬ, ಗೆಳೆಯರು, ಕೆಲಸ, ಉದ್ಯೋಗ, ಪ್ರೀತಿ, ತನ್ನೊಳಗೆ ಮಹಿಳೆ ಹೀಗೆ ಹಲವು ಆಂತರಿಕ ತುಮುಲಗಳನ್ನು ಅಭಿವ್ಯಕ್ತಿ ಪಡಿಸುವ ನನ್ನ ಕತೆ ಏಕವ್ಯಕ್ತಿ ಪ್ರದರ್ಶನ ಇದಾಗಿದ್ದು, ಮಹಿಳೆಯರು ಭಾವನಾತ್ಮಕ ಶಕ್ತಿಯನ್ನು ಪ್ರದರ್ಶಿಸುವ ಹಾಗೂ ಪುರುಷರನ್ನು ಎದುರಿಸುವ ಬಗೆಯನ್ನು ಈ ನಾಟಕವು ಅಭಿವ್ಯಕ್ತಪಡಿಸಲಿದೆ.

Anveshane presents Nanna Kathe one women one act show

ಗುರುಪ್ರಸಾದ್ ರಚನೆ ಮತ್ತು ನಿರ್ದೇಶಿಸಿದ್ದಾರೆ, ಪುನೀತ್ ರಂಗನಾಥ್ ಸಂಗೀತ ನೀಡಿದ್ದಾರೆ. ಮಹಿಳೆಯ ಬದುಕಿನುದ್ದಕ್ಕೂ ಭಾವನಾತ್ಮಕವಾಗಿ ಪುರುಷನಿಗಿಂತ ಅತ್ಯಂತ ಶಕ್ತಿಶಾಲಿ ಎಂಬುದು ಬದುಕಿನ ನಾನಾ ಹಂತಗಳಲ್ಲಿ ಸಾಬೀತಾಗುತ್ತದೆ ಆದರೆ ಎದುರಾಗುವ ಭಾವನಾತ್ಮಕ ಸಮಸ್ಯೆಗಳನ್ನು ಮಹಿಳೆ ಹೇಗೆ ಒಬ್ಬ ಪತ್ನಿಯಾಗಿ, ಮಗಳಾಗಿ, ಪ್ರೇಯಸಿಯಾಗಿ ಹಾಗೂ ಉದ್ಯೋಗಿಯಾಗಿ ಹೇಗೆ ಎದುರಿಸುತ್ತಾಳೆ ಎಂಬುದು ಕೂಡ ಕೌತುಕ.

ನನ್ನ ಕತೆ ಸಾಮಾಜಿಕ ಬದುಕಿನಲ್ಲಿ ಮಹಿಳೆ ಎದುರಿಸುವ ನೋವುಗಳನ್ನು ಅಭಿವ್ಯಕ್ತಪಡಿಸಲು ಈ ವೇದಿಕೆ ಅತ್ಯಂತ ಪ್ರಭಾವಶಾಲಿಯಾಗಿದ್ದು ಏಕಾಂತ ನಾಟಕದ ಮೂಲಕ ಹೊರಹೊಮ್ಮಲಿದೆ.

English summary
Team Anveshane presenting 'Nanna Kathe', one women one act show by Varshini Bharadwaj on June 6 at 7 PM at KH Kalasoudha in Hanumantha Nagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X