ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೌರತ್ವ ಕಾಯ್ದೆ ವಿರುದ್ದ ಗುಡುಗಿದ ಜಮೀರ್ ಅಹಮ್ಮದ್

|
Google Oneindia Kannada News

ಬೆಂಗಳೂರು, ಜನವರಿ 3: ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶುಕ್ರವಾರ ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಶಾಸಕ ಜಮೀರ್ ಅಹಮ್ಮದ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು.

ಈ ವೇಳೆ ಮಾತನಾಡಿದ ಚಾಮರಾಜಪೇಟೆ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಬಿ ಜಡ್ ಜಮೀರ್ ಅಹಮ್ಮದ್ ಖಾನ್, ಮೋದಿ ಹಾಗೂ ಅಮಿತ್ ಷಾ ವಿರುದ್ಧ ಘೋಷಣೆ ಕೂಗಿದರು. ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ತರುವ ಮೂಲಕ ಮೋದಿ ಹಾಗೂ ಅಮಿತ್ ಷಾ ಮುಸ್ಲಿಂರಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ ಎಂದು ಖಂಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು. ಪೊಲೀಸರು ಭಾರೀ ಭದ್ರತೆ ಕೈಗೊಂಡಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.

ಏನಂದ್ರು ಜಮೀರ್?

ಏನಂದ್ರು ಜಮೀರ್?

ಮೋದಿ ಹಾಗೂ ಅಮಿತ್ ಷಾ ವಿರುದ್ಧ ಘೋಷಣೆ ಕೂಗಿದರು. ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ತರುವ ಮೂಲಕ ಮೋದಿ ಹಾಗೂ ಅಮಿತ್ ಷಾ ಮುಸ್ಲಿಂರಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ. ಮೋದಿ ಹಾಗೂ ಅಮಿತ್ ಷಾ ಅವರಿಗೆ ಭಾರತೀಯ ಎನ್ನಲು ದಾಖಲೆಗಳಿವೆಯೇ ಎಂದು ಪ್ರಶ್ನಿಸಿರುವ ಅವರು, ಅವರು ತಮ್ಮ ಅಜ್ಜನ ಕಾಲದ ದಾಖಲೆಗಳನ್ನು ತೋರಿಸಲಿ ಎಂದು ಸವಾಲು ಹಾಕಿದ್ದಾರೆ.

ವಾಪಸ್ ಪಡೆಯಬೇಕು

ವಾಪಸ್ ಪಡೆಯಬೇಕು

ದೆಹಲಿಯ ಇಂಡಿಯಾ ಗೇಟ್ ಮೇಲೆ ಸಾವಿರಾರು ಹುತಾತ್ಮರ ಹೆಸರುಗಳನ್ನು ಬರೆದಿದ್ದಾರೆ. ಅದರಲ್ಲಿ ಬಿಜೆಪಿ ಆರ್‌ಎಸ್‌ಎಸ್‌ನವರ ಒಂದೇ ಒಂದು ಹೆಸರು ಇಲ್ಲ. ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ. ನನ್ನ ರಹವಾಸಿ ದಾಖಲೆಗಳನ್ನು ತಗಿಸಲು ನನಗೆ ನಾಲ್ಕು ತಿಂಗಳು ಹಿಡಿದಿತ್ತು. ಇನ್ನು ಜನಸಾಮಾನ್ಯರ ಪಾಡೇನು. ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಸಿ ಟಿ ರವಿ ಅವರೇ ಮೋದಿಗೆ ಕುಡಿಸಿ ಬಿಟ್ರಾ?: ಹೀಗೆಂದು ಕೇಳಿದ್ದು ಯಾರು?ಸಿ ಟಿ ರವಿ ಅವರೇ ಮೋದಿಗೆ ಕುಡಿಸಿ ಬಿಟ್ರಾ?: ಹೀಗೆಂದು ಕೇಳಿದ್ದು ಯಾರು?

ಶಾಂತಿಯುತ ಪ್ರತಿಭಟನೆ

ಶಾಂತಿಯುತ ಪ್ರತಿಭಟನೆ

ಸಮಾವೇಶದಲ್ಲಿ ಕಾಯ್ದೆ ವಿರೋಧಿಸಿ ಮುಸ್ಲಿಂರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಭಾರತದ ಭಾವುಟ ಹಾಗೂ ಕರ್ನಾಟಕ ಭಾವುಟ ಪ್ರದರ್ಶಿಸಿ ಒಗ್ಗಟ್ಟು ಪ್ರದರ್ಶಿಸಿದರು.

ದೇಶಾದ್ಯಂತ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಭಾರೀ ಪ್ರತಿಭಟನೆ, ಹಿಂಸಾಚಾರಗಳು ನಡೆದಿರುವುದರಿಂದ ಚಾಮರಾಜಪೇಟೆಯಲ್ಲಿ ನಡೆಯುತ್ತಿದ್ದ ಈ ಪ್ರತಿಭಟನಾ ಸಮಾವೇಶಕ್ಕೆ ಪೊಲೀಸರು ಭಾರೀ ಬಂದೋಬಸ್ತ್ ಕೈಗೊಂಡಿದ್ದರು. ಸಮಾವೇಶದಲ್ಲಿ ಸುಮಾರು 25 ಸಾವಿರ ಜನ ಸೇರಿದ್ದರು, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್ ಅವರ ನೇತೃತ್ವದಲ್ಲಿ 1 ಸಾವಿರಕ್ಕೂ ಹೆಚ್ಚು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು.

ಹಿಂದೂಸ್ತಾನ್ ಜಿಂದಾಬಾದ್

ಹಿಂದೂಸ್ತಾನ್ ಜಿಂದಾಬಾದ್

3 ಡಿಸಿಪಿ, 10 ಡಿವೈಎಸ್‌ಪಿಗಳು, 20 ಇನ್ಸಪೆಕ್ಟರ್‌ಗಳು, 50 ಸಬ್‌ ಇನ್ಸಪೆಕ್ಟರ್‌ಗಳು ಹಾಗೂ 5 ಕೆಎಸ್‌ಆರ್‌ಪಿ ತುಖಡಿಗಳು ಸೇರಿ ಒಂದು ಸಾವಿರ ಪೊಲೀಸರು ಯಾವುದೇ ದುರ್ಘಟನೆಗಳು ನಡೆಯದಿರುವಂತೆ ಭದ್ರತೆ ಕೈಗೊಂಡಿದ್ದರು. ಈ ವೇಳೆ ಪೊಲೀಸ್ ಆಯುಕ್ತ ರಮೇಶ ಅವರೊಟ್ಟಿಗೆ ಹಿಂದೂಸ್ತಾನ್ ಜಿಂದಾಬಾದ್ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿ ಗಮನ ಸೆಳೆದರು.

ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ: ಮೆಜೆಸ್ಟಿಕ್ ಸುತ್ತ ಟ್ರಾಫಿಕ್ ಜಾಮ್ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ: ಮೆಜೆಸ್ಟಿಕ್ ಸುತ್ತ ಟ್ರಾಫಿಕ್ ಜಾಮ್

English summary
Anti CAA Protest At Bengaluru Chamarajapet. Heavy Security For Chamarajapete Anti CAA Protest Bengaluru this protest led by MLA zmeer ahmed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X