ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಲಾರಿ ಮಾಲೀಕರು ಸಜ್ಜು

ಕೆಆರ್ ಎಸ್ ನಲ್ಲಿನ ಹೂಳು ತೆಗೆಯಬೇಕು ಹಾಗೂ ಆ ಹೂಳನ್ನು ಹೊತ್ತೊಯ್ಯಲು ಕರ್ನಾಟಕದ ಲಾರಿಗಳಿಗೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಅನಿರ್ದಿಷ್ಟವಾಧಿ ಮುಷ್ಕರಕ್ಕೆ ಸಜ್ಜಾದ ಲಾರಿ ಮಾಲೀಕರ ಸಂಘ.

ಬೆಂಗಳೂರು, ಜೂನ್ 5: ಕೆಲವೇ ದಿನಗಳ ಹಿಂದೆ ಅನಿರ್ದಿಷ್ಟಾವಧಿ ಮುಷ್ಕರ ಹೂಡಿದ್ದ ಲಾರಿ ಮಾಲೀಕರ ಸಂಘ ಶೀಘ್ರದಲ್ಲೇ ಮತ್ತೊಮ್ಮೆ ಅಂಥದ್ದೇ ಮುಷ್ಕರಕ್ಕೆ ಸಜ್ಜಾಗಿದ್ದಾರೆ.

ಕನ್ನಂಬಾಡಿಯಲ್ಲಿ ಹೂಳು ತೆಗೆಯಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಈ ಬಾರಿ ಮುಷ್ಕರಕ್ಕಿಳಿಯುತ್ತಿರುವುದಾಗಿ ಲಾರಿ ಮಾಲೀಕರ ಸಂಘ ಹೇಳಿದೆ.

Another strike from Karnataka Lorry Owners association?

ಇತ್ತೀಚೆಗೆ, ತಮಿಳುನಾಡಿನ ಮೆಟ್ಟೂರು ಅಣೆಕಟ್ಟಿನಲ್ಲಿ ಹೂಳು ತೆಗೆಸಲಾಗಿದೆ. ಆ ಹೂಳನ್ನು ಹೊತ್ತೊಯ್ಯಲು ಅಲ್ಲಿನ ಲಾರಿಗಳನ್ನು ಬಳಕೆ ಮಾಡಲಾಗಿದ್ದು, ಅದರಿಂದ ಅನೇಕ ಲಾರಿ ಚಾಲಕರು, ಮಾಲೀಕರಿಗೆ ಅನುಕೂಲವಾಗಿದೆ.

ಹಾಗಾಗಿ, ಕರ್ನಾಟದಲ್ಲಿರುವ ಕನ್ನಂಬಾಡಿ ಅಣೆಕಟ್ಟಿನ ಹೂಳು ತೆಗೆಸಲು ಸರ್ಕಾರ ಮುಂದಾಗಬೇಕಲ್ಲದೆ, ಆ ಹೂಳನ್ನು ಹೊತ್ತೊಯ್ಯಲು ಕರ್ನಾಟಕದ ಲಾರಿಗಳಿಗೇ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಮುಷ್ಕರ ನಡೆಸುವುದಾಗಿ ಲಾರಿ ಮಾಲೀಕರ ಸಂಘದ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+