ಎಟಿಎಂಗೆ ಹಣ ಭರಿಸುವ ಮೊದಲೇ 75 ಲಕ್ಷ ದೋಚಿ ಚಾಲಕ ಪರಾರಿ
ಬೆಂಗಳೂರು, ನವೆಂಬರ್ 8: ಎಟಿಎಂಗೆ ಹಣ ಭರಿಸುವ ಮೊದಲೇ 75 ಲಕ್ಷ ರೂ ದೋಚಿಕೊಂಡು ಚಾಲಕ ಪರಾರಿಯಾದ ಘಟನೆ ಬೆಂಗಳೂರಲ್ಲಿ ನಡೆದಿದೆ. ಆತ ಕ್ಯಾಷ್ ಮ್ಯಾನೇಜ್ ಮೆಂಟ್ ಕಂಪನಿಯ ಚಾಲಕನಾಗಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
ಚಾಲಕ ಅಬ್ದುಲ್ ಶಹೀದ್ ಬಂಧನಕ್ಕೆ ಕೆಜಿ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ. ನಗರದ ಪೂರ್ವ ವಿಭಾಗದ ಎಟಿಎಂಟಗಳಿಗೆ 1.20 ಕೋಟಿ ರೂ ತುಂಬಲು ರೈಟರ್ಸ್ ಸೇಫ್‌ಗಾರ್ಡ್ ಪ್ರೈ.ಲಿ ಕಂಪನಿಯ ನೌಕರರಾದ ಶ್ರೀಶೈಲ್, ಹರೀಶ ಮತ್ತು ಗನ್‌ಮ್ಯಾನ್ ಜನೀತ್ ಸಿಂಗ್ ಜತೆಗೆ ಚಾಲಕ ಶಹೀದ್ ತೆರಳಿದ್ದ, ನಾಗವಾರ ಮುಖ್ಯ ರಸ್ತೆಯ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಹಣ ಜಮೆ ಮಾಡಲು ವ್ಯಾನ್ ನಿಲ್ಲಿಸಲಾಗಿತ್ತು.

ಆ ಸಂದರ್ಭದಲ್ಲಿ ಶಹೀದ್‌ನನ್ನು ವಾಹನದ ಬಳಿ ನಿಲ್ಲಿಸಿ ಶ್ರೀಶೈಲ, ಹರೀಶ್ ಮತ್ತು ಜನೀತ್ ಸಿಂಗ್ 45 ಲಕ್ಷ ರೂಗಳನ್ನು ಟೆಟಿಎಂಗೆ ತುಂಬಲು ಹೋಗಿದ್ದರು. ವಾಒಸ್ ಬಂದಾಗ ಜಹೀದ್ ಇರಲಿಲ್ಲ. ವಾಹನದಲ್ಲಿ ಪರಿಶೀಲಿಸಿದಾಗ ಹಣದ ಟ್ರಂಕ್ ಮತ್ತು 2 ಬ್ಯಾಗ್‌ಗಳು ಕಾಣೆಯಾಗಿದ್ದವು. ತಕ್ಷಣ ಕೆಜಿ ಹಳ್ಳಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.












Click it and Unblock the Notifications