ಒಂಟಿ ಮಹಿಳೆಯನ್ನು ಇರಿದು ಕೊಂದಿದ್ದ ಸೈಕೋಗಳಿಗೆ ಗುಂಡೇಟು

ಆನೇಕಲ್, ಸೆ. 22: ರಾಜ್ಯ ರಾಜಧಾನಿಯ ಹೊರವಲಯದಲ್ಲಿ ಮತ್ತೆ ಪೊಲೀಸರ ಗನ್ ಆರ್ಭಟಿಸಿದೆ. ಕೊಲೆ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಸಮೀಪದ ಮುತ್ಯಾಲಮಡು ಬಳಿ ವೇಲು ಅಲಿಯಾಸ್ ಸೈಕೋ ಹಾಗೂ ಬಾಲಕೃಷ್ಣ ಅಲಿಯಾಸ್ ಬಾಲ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ.

ಇತ್ತೀಚೆಗೆ ಆನೇಕಲ್‌ನ ಸಿಂಗೇನ ಅಗ್ರಹಾರದ ಬಳಿ ಒಂಟಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕಳ್ಳತನ ಮಾಡಲು ನುಗ್ಗಿದ್ದ ಕಳ್ಳರು ಮನೆಯಲ್ಲಿದ್ದ ಮಹಿಳೆ ಕೂಗಿಕೊಂಡಳು ಅಂತಾ ಮಹಿಳೆ ಎದೆಗೆ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಶ್ವೇತಾ ಎಂಬಾಕೆಯನ್ನು ಕೊಲೆ ಮಾಡಲಾಗಿತ್ತು. ಕೊಲೆಯ ಕ್ರೂರತೆ ಹೇಗಿತ್ತು ಎಂದರೆ, ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ದರು.\

Anekal Police Fire On Accused Of A Lone Woman Killing

ಹೀಗೆ ಸೈಕೋಗಳ ರೀತಿ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಸೈಕೋಪಾತ್‌ಗಳ ಜಾಡು ಹಿಡಿದ ಪೊಲೀಸರು ಆರೋಪಿಗಳ ಬಂಧನಕ್ಕೆ ತೆರಳಿದ್ದರು. ಆದರೆ ಬಂಧನಕ್ಕೆ ಬಂದಿದ್ದ ಪೊಲೀಸರ ಮೇಲೆಯೇ ಈ ಕಿರಾತಕರು ಹಲ್ಲೆ ನಡೆಸಿದ್ದಾರೆ. ಕೂಡಲೇ ತಮ್ಮ ಗನ್‌ಗೆ ಬುದ್ಧಿ ಹೇಳಿದ ಹೆಬ್ಬಗೋಡಿ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಬನ್ನೇರುಘಟ್ಟ ಪಿಎಸ್‌ಐ ಫೈರಿಂಗ್ ಮಾಡಿದ್ದಾರೆ. ಘಟನೆಯಲ್ಲಿ ಆರೋಪಿಗಳ ಕಾಲಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

Anekal Police Fire On Accused Of A Lone Woman Killing

ಎದೆಗೆ ಇರಿದು ಕೊಂದಿದ್ದ ಕ್ರೂರಿಗಳು

ಕೊಲೆಯಾಗಿದ್ದ ಶ್ವೇತಾ 6 ವರ್ಷಗಳ ಹಿಂದೆ ಮುರಳಿ ಎಂಬುವವರನ್ನು ಮದುವೆಯಾಗಿದ್ದರು. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರದಲ್ಲಿ ಶ್ವೇತಾ ದಂಪತಿ ವಾಸವಿದ್ದರು. ಶ್ವೇತಾ ಪತಿ ಮುರಳಿ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದರು. ಘಟನೆ ನಡೆದ ದಿನ ಮೃತ ಶ್ವೇತಾಳ ಅತ್ತೆ ಹಾಗೂ ಮಗ ಬೇರೆ ಊರಿಗೆ ತೆರಳಿದ್ದರು. ಹೀಗಾಗಿ ರಾತ್ರಿ ಶ್ವೇತಾ ಮನೆಯಲ್ಲಿ ಒಬ್ಬರೇ ಗಂಡನಿಗಾಗಿ ಕಾಯುತ್ತಿದ್ದರು. ಇದನ್ನೆಲ್ಲಾ ಗಮನಿಸಿದ್ದ ಕಳ್ಳರು ಮನೆಗೆ ನುಗ್ಗಿದ್ದಾರೆ. ಮೊದಲಿಗೆ ಶ್ವೇತಾ ಮೇಲೆ ಹಲ್ಲೆ ಮಾಡಿ, ಒಡವೆ ಹಾಗೂ ಹಣ ದೋಚಲು ಶುರು ಮಾಡಿದ್ದಾರೆ. ಇದನ್ನು ಕಂಡು ಶ್ವೇತಾ ಜೋರಾಗಿ ಕೂಗಿಕೊಂಡಿದ್ದಾರೆ, ಈ ವೇಳೆ ತಕ್ಷಣ ಚಾಕುವಿನಿಂದ ಶ್ವೇತಾಳ ಎದೆ ಭಾಗಕ್ಕೆ ಚುಚ್ಚಿ ಕೊಲೆ ಮಾಡಿದ್ದರು.

Anekal Police Fire On Accused Of A Lone Woman Killing

ನೀರಿನಂತೆ ಹರದಿತ್ತು ನೆತ್ತರು

Recommended Video

      ಮೊದಲನೇ ಮ್ಯಾಚ್ ಬಗೆ RCB ಆರಂಭಿಕ ಬ್ಯಾಟ್ಸ್ ಮನ್ Finch ಹೇಳಿದ್ದೇನು | Oneindia Kannda

      ಈ ಕೊಲೆಯಲ್ಲಿ ಕ್ರೂರಿಗಳ ಅಟ್ಟಹಾಸ ಹೇಗಿತ್ತು ಎಂದರೆ, ಶ್ವೇತಾ ಎದೆ ಭಾಗಕ್ಕೆ ಚುಚ್ಚಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿತ್ತು. ರಕ್ತ ನೀರಿನಂತೆ ಮನೆ ತುಂಬಾ ಚೆಲ್ಲಾಡಿತ್ತು. ಬಹುಶಃ ಆಗ ಜೀವ ಉಳಿಸಿಕೊಳ್ಳಲು ಶ್ವೇತಾ ಒದ್ದಾಡಿರಬಹುದು, ಇದೇ ಕಾರಣಕ್ಕೆ ಶ್ವೇತಾ ದೇಹದ ತುಂಬಾ ರಕ್ತ ಹಬ್ಬಿಕೊಂಡಿತ್ತು. ಈ ಬರ್ಬರ ಕೊಲೆ ಬೆಂಗಳೂರಿನಲ್ಲಿ ಸಂಚಲನ ಸೃಷ್ಟಿಸಿತ್ತು. ಘಟನೆಯ ಗಂಭೀರತೆ ಅರಿತಿದ್ದ ಪೊಲೀಸರು, ಹಂತಕರಿಗಾಗಿ ಬಲೆ ಬೀಸಿದ್ದರು. ಪೊಲೀಸರ ಬಲೆಗೆ ಬಿದ್ದ ಆರೋಪಿಗಳನ್ನು ಬಂಧಿಸಲು ತೆರಳಿದ್ದಾಗ ಕೊಲೆಗಡುಕರು ಪೊಲೀಸರ ಜೊತೆಗೆ ಕಿರಿಕ್ ಮಾಡಿದ್ದು, ಖಾಕಿ ಪಡೆ ಗುಂಡಿನ ರುಚಿ ತೋರಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+