ಅನಂತ್ ಅಂತಿಮ ಯಾತ್ರೆ LIVE: ಜನಾನುರಾಗಿ ನಾಯಕಗೆ ಭಾವಪೂರ್ಣ ವಿದಾಯ
ಬೆಂಗಳೂರು, ನವೆಂಬರ್ 13: ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ, ಸದಾ ಹಸನ್ಮುಖಿಯಾಗಿ, ಸ್ನೇಹಜೀವಿಯಾಗಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ವಿಧಿವಶರಾಗಿದ್ದಾರೆ ಎಂಬ ಸುದ್ದಿಯನ್ನು ಅರಗಿಸಿಕೊಳ್ಳುವುದು ಕಷ್ಟವೇ.
ಶ್ವಾಸಕೋಶದ ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ನ.12 ರಂದು ಬೆಳಗ್ಗಿನ ಜಾವ 2 ಗಂಟೆಯ ಸುಮಾರಿಗೆ ವಿಧಿವಶರಾದರು.
ಅನಂತ್ ಕುಮಾರ್ ಅವರ ಅಂತ್ಯ ಸಂಸ್ಕಾರ ಇಂದು ಚಾಮರಾಜಪೇಟೆಯ ಚಿತಾಗಾರದಲ್ಲಿ ನಡೆಯಲಿದ್ದು, ರಾಷ್ಟ್ರ, ರಾಜ್ಯದ ಗಣ್ಯಾತಿಗಣ್ಯ ನಾಯಕರು ಅವರ ಅಂತಿಮ ದರ್ಶನ ಪಡೆಯಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಅನಂತ್ ಕುಮಾರ್ ಅವರ ಅಂತಿಮ ದರ್ಶನ ಪಡೆದರು.

ಅನಂತ್ ಕುಮಾರ್ ಅಂತಿಮ ಯಾತ್ರೆಯ ಕ್ಷಣ ಕ್ಷಣದ ಮಾಹಿತಿಯನ್ನು 'ಒನ್ಇಂಡಿಯಾ' ಕನ್ನಡ ಇಲ್ಲಿ ನೀಡಲಿದೆ.
ಅನಂತ್ ಕುಮಾರ್ ಮೃತದೇಹಕ್ಕೆ ಹೊದಿಸಿದ್ದ ರಾಷ್ಟ್ರಧ್ವಜ ತೆಗೆದು ಅವರ ಪತ್ನಿ ತೇಜಸ್ವಿನಿ ಅವರಿಗೆ ಹಸ್ತಾಂತರಿಸಿದ ಸೇನಾಧಿಕಾರಿ
ಅನಂತ್ ಕುಮಾರ್ ಮೃತದೇಹಕ್ಕೆ ಹೊದಿಸಿದ್ದ ರಾಷ್ಟ್ರಧ್ವಜ ತೆಗೆದು ಅವರ ಪತ್ನಿ ತೇಜಸ್ವಿನಿ ಅವರಿಗೆ ಹಸ್ತಾಂತರಿಸಿದ ಸೇನಾಧಿಕಾರಿ
ಚಾಮರಾಜಪೇಟೆಯ ಚಿತಾಗಾರಕ್ಕೆ ತೆರಳಿದ ಬಿಜೆಪಿ ಮುಖಂಡರಾದ ಎಲ್.ಕೆ. ಅಡ್ವಾಣಿ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಅಮಿತ್ ಶಾ, ರವಿಶಂಕರ್ ಪ್ರಸಾದ್.
ಪಂಪಮಹಾಕವಿ ರಸ್ತೆ, ಆಶ್ರಮ
ಬುಲ್ ಟೆಂಪಲ್ ರೋಡ್,
ಉಮಾ ಟಾಕೀಸ್, ಚಾಮರಾಜಪೇಟೆ ಮಾರ್ಗವಾಗಿ ಸಾಗಲಿರುವ ಶವಯಾತ್ರೆ.
ಅನಂತ್ ಕುಮಾರ್ ಅವರಿಗೆ ಗಂಡುಮಕ್ಕಳಿಲ್ಲದ ಕಾರಣ ಅವರ ಸಹೋದರ ನಂದಕುಮಾರ್ ಅವರೇ ಅಂತಿಮ ವಿಧಿವಿಧಾನ ನೆರವೇರಿಸಲಿದ್ದಾರೆ.
READ MORE












Click it and Unblock the Notifications