ಆನಂದ್ ರಾವ್ ವೃತ್ತದ ಫ್ಲೈ ಓವರ್‌ಗೆ ಸಂಗೊಳ್ಳಿ ರಾಯಣ್ಣ ಹೆಸರು

ಬೆಂಗಳೂರು, ಆಗಸ್ಟ್ 27 : ಬೆಂಗಳೂರು ನಗರದ ಆನಂದ್ ರಾವ್ ವೃತ್ತದ ಫ್ಲೈ ಓವರ್‌ಗೆ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಮೇಲುಸೇತುವೆ ಎಂದು ನಾಮಕರಣ ಮಾಡಲಾಗಿದೆ. ನಗರದ ಹೃದಯ ಭಾಗದಲ್ಲಿರುವ ಫ್ಲೈ ಓವರ್ ಇದಾಗಿದೆ.

ಗುರುವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮೊದಲು ರೈಲು ನಿಲ್ದಾಣದ ಸಮೀಪದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಬಳಿಕ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಮೇಲುಸೇತುವೆ ಉದ್ಘಾಟಿಸಿದರು.

Recommended Video

      ಮತ್ತೆ ಕರ್ನಾಟಕ ರಾಜ್ಯವನ್ನ ಮೂಲೆ ಗುಂಪು ಮಾಡುತ್ತಾರಾ?? | Oneindia Kannada

      ಬೆಂಗಳೂರು ನಗರದ ಹೃಯದ ಭಾಗದಲ್ಲಿರುವ ಫ್ಲೈ ಓವರ್‌ಗೆ ಇಷ್ಟು ದಿನ ನಾಮಕರಣ ಮಾಡಿರಲಿಲ್ಲ. ಆನಂದ್ ರಾವ್ ಸರ್ಕಲ್ ಫ್ಲೈ ಓವರ್ ಎಂದೇ ಕರೆಯಲಾಗುತ್ತಿತ್ತು. ಈಗ ಮೇಲು ಸೇತುವೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರು ಇಡಲಾಗಿದೆ. ಬಿಬಿಎಂಪಿ ಈ ಫ್ಲೈ ಓವರ್ ನಿರ್ವಹಣೆ ನೋಡಿಕೊಳ್ಳುತ್ತದೆ.

      Anand Rao Circle Flyover Renamed As Kranteevera Sangoli Rayana Flyover

      ಮೆಜೆಸ್ಟಿಕ್‌ನಲ್ಲಿರುವ ರೈಲು ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ. ರೈಲು ನಿಲ್ದಾಣದ ಮುಂಭಾಗದಲ್ಲಿ ಸಂಗೊಳ್ಳಿ ರಾಯಣ್ಣ ಅಶ್ವರೂಢ ಪ್ರತಿಮೆ ಇದೆ.

      'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಫ್ಲೈ ಓವರ್ ಮೆಜೆಸ್ಟಿಕ್‌ನಿಂದ ರೇಸ್‌ಕೋರ್ಸ್ ರಸ್ತೆ, ವಿಧಾನಸೌಧ, ಎಂ. ಜಿ. ರಸ್ತೆ, ಹಡ್ಸನ್ ವೃತ್ತ, ಕೆ. ಆರ್. ಸರ್ಕಲ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ.

      Anand Rao Circle Flyover Renamed As Kranteevera Sangoli Rayana Flyover

      ಬೆಂಗಳೂರು ನಗರದಲ್ಲಿ ರೈಲು ನಿಲ್ದಾಣದ ಮುಂಭಾಗದಲ್ಲಿ ಆರಂಭವಾಗುವ ಪ್ರತಿಭಟನೆಗಳು 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಫ್ಲೈ ಓವರ್ ಮೂಲಕವೇ ಸಾಗಿ ಸ್ವಾತಂತ್ರ್ಯ ಉದ್ಯಾನ ತಲುಪುತ್ತವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+