• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹದಾಯಿ, ಬಿಜೆಪಿಗೆ ತಿರುಗುಬಾಣವಾಗುತ್ತಾ? ಬಿಜೆಪಿ ಎಂಎಲ್ಎ ಸಂದರ್ಶನ

By ಬಾಲರಾಜ್ ತಂತ್ರಿ
|
   ಬಿ ಎನ್ ವಿಜಯ್ ಕುಮಾರ್ ಬಿಜೆಪಿ ಎಂಎಲ್ಎ ಸಂದರ್ಶನ : ಬಿಜೆಪಿಗೆ ಮಹದಾಯಿ ತಿರುಗುಬಾಣವಾಗುತ್ತಾ? | Oneindia Kannada

   ಬೆಂಗಳೂರು ಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಬಿ ಎನ್ ವಿಜಯ್ ಕುಮಾರ್, ಮೂಲತ: ಸಿವಿಲ್ ಇಂಜಿನಿಯರಿಂಗ್ ಪದವೀಧರರು. ಹನ್ನೆರಡು ವರ್ಷ ಬಿಜೆಪಿ ಬೆಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವವಿರುವ ವಿಜಯ್ ಕುಮಾರ್, ಬೆಂಗಳೂರು ಘಟಕದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.

   ಬೆಂಗಳೂರು ಹೊರವಲಯದ ನೆಲಮಂಗಲ ಮೂಲದ ವಿಜಯ್ ಕುಮಾರ್, ಸತತವಾಗಿ ಎರಡು ಬಾರಿ ಜಯನಗರ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಸ್ವಚ್ಚ ಭಾರತ್ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದ ಹೆಗ್ಗಳಿಕೆಯನ್ನು ಹೊಂದಿರುವ ವಿಜಯ್ ಕುಮಾರ್ ಅವರ ಜೊತೆಗಿನ ಸಂದರ್ಶನದ ಮುಂದುವರಿದ ಆಯ್ದ ಭಾಗ, ಮುಂದೆ ಓದಿ..

   ಪ್ರ: ಮಹದಾಯಿ ಯೋಜನೆ, ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ತಿರುಗುಬಾಣವಾಗಲಿದೆಯಾ?

   ವಿಜಯ್ ಕುಮಾರ್: ಮಹದಾಯಿ ಯೋಜನೆಯ ವಿಚಾರದಲ್ಲಿ ಕಾಂಗ್ರೆಸ್ ಮಾಡುತ್ತಿರುವ ರಾಜಕೀಯ ಎಲ್ಲರಿಗೂ ಗೊತ್ತು. ಜಾತಿ ಮತ್ತು ಸಮಾಜವನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಎಲ್ಲದಕ್ಕೂ ಬಿಜೆಪಿಯನ್ನು ದೂರುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದ್ದೆ. ಜನ ಇದನ್ನೆಲ್ಲಾ ಅರಿತಿದ್ದಾರೆ, ನಮ್ಮ ಪಕ್ಷಕ್ಕೆ ಜನ ಆಶೀರ್ವಾದ ಮಾಡುತ್ತಾರೆ ಎನ್ನುವ ನಂಬಿಕೆ ನಮಗಿದೆ.

   ಪ್ರ: ಮೋದಿ ಹವಾ, ಅಮಿತ್ ಶಾ ತಂತ್ರಗಾರಿಕೆ ವರ್ಕೌಟ್ ಆಗುತ್ತಾ ಕರ್ನಾಟಕದಲ್ಲಿ?

   ವಿಜಯ್ ಕುಮಾರ್: ಮೋದಿಯವರ ವರ್ಚಸ್ಸು ಮತ್ತು ಅಮಿತ್ ಶಾ ಅವರ ತಂತ್ರಗಾರಿಕೆ ಈ ನೆಲದಲ್ಲಿ ಚೆನ್ನಾಗಿ ಫಲಿತಾಂಶ ನೀಡುತ್ತದೆ ಎನ್ನುವ ವಿಶ್ವಾಸ ನನ್ನದು. ಪರಿವರ್ತನಾ ಯಾತ್ರೆ ಮುಂದಿನ ತಿಂಗಳು ಮುಕ್ತಾಯಗೊಳ್ಳಲಿದೆ. ರಾಷ್ಟ್ರೀಯ ನಾಯಕರು ಬೆಂಗಳೂರಿಗೆ ಬರುವವರಿದ್ದಾರೆ. ಮುಂದಿನ ಕಾರ್ಯತಂತ್ರದ ಬಗ್ಗೆ ರೂಪುರೇಷೆ ಸಿದ್ದವಾಗಲಿದೆ.

   ಪ್ರ: ವಿಜಯ್ ಕುಮಾರ್ ಬರೀ ಬೆಂಗಳೂರಿಗೆ ಸೀಮಿತ ಬಿಜೆಪಿ ಶಾಸಕರೇ?

   ವಿಜಯ್ ಕುಮಾರ್: ಆ ರೀತಿ ಏನೂ ಇಲ್ಲ. ಈ ಹಿಂದೆ ಕೋಲಾರ, ಮೈಸೂರು ಮುಂತಾದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ. ನನ್ನದು ಜಯನಗರ ಕ್ಷೇತ್ರವಾಗಿರುವುದರಿಂದ, ಇಲ್ಲಿ ಹೆಚ್ಚಿನ ಸಮಯವನ್ನು ವಿನಿಯೋಗಿಸುತ್ತಿದ್ದೇನೆ.

   ಪ್ರ: ಈಗಿನ ಟ್ರೆಂಡ್ ನಲ್ಲಿ ಸೋಷಿಯಲ್ ಮಿಡಿಯಾ ಪ್ರಮೋಷನ್ ಎಷ್ಟು ಮುಖ್ಯ?

   ವಿಜಯ್ ಕುಮಾರ್: ಜನ ತಮ್ಮ ಹೆಚ್ಚಿನ ಸಮಯಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಕಳೆಯುತ್ತಿದ್ದಾರೆ. ನಾವೂ ಇನ್ನೂ aggressive ಆಗಿ ಸಾಮಾಜಿಕ ತಾಣವನ್ನು ಬಳಸಲು ಮುಂದಾಗಿದ್ದೇವೆ. ಇದು ಜನರನ್ನು ತಲುಪಲು ಇರುವ ಪ್ರಮುಖ ಸಾಧನವಾಗಿ ಬೆಳೆದಿದೆ.

   ಪ್ರ: ನಿಮ್ಮ ಕ್ಷೇತ್ರದ ಮತದಾರರಿಗೆ ನಿಮ್ಮ ಮನವಿ?

   ವಿಜಯ್ ಕುಮಾರ್: ರಾಗೀಗುಡ್ಡ ಸ್ಲಮ್, ಮಳೆನೀರು ಕೊಯ್ಲು , ಲೈಬ್ರೆರಿ, ಹತ್ತನೇ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್, ರಸ್ತೆ ರಿಪೇರಿ ಮುಂತಾದ ಹಲವು ಕೆಲಸಗಳನ್ನು ನಾನು ಈ ಕ್ಷೇತ್ರದಲ್ಲಿ ಮಾಡಿದ್ದೇನೆ. ಯಾವುದೇ ಜಾತಿಯ ತಾರತಮ್ಯವನ್ನು ನಾನು ಮಾಡಲಿಲ್ಲ. ಜೊತೆಗೆ, ಕಾರಣಾಂತರದಿಂದ ಜಯನಗರ ಶಾಪ್ಪಿಂಗ್ ಕಾಂಪ್ಲೆಕ್ಸ್ ಕೆಲಸ ಮುಗಿಸಲು ಆಗಲಿಲ್ಲ ಎನ್ನುವ ನೋವೂ ಇದೆ. ಮುಂದಿನ ಚುನಾವಣೆಯಲ್ಲೂ ಜನ ನನ್ನ ಮೇಲೆ ವಿಶ್ವಾಸವಿಟ್ಟು, ನನಗೆ ಆಶೀರ್ವದಿಸಬೇಕು, ಜಯನಗರ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ದಿಗೊಳಿಸಬೇಕು ಎನ್ನುವ ಕನಸನ್ನು ಹೊಂದಿದ್ದೇನೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   An exclusive interview of Jayanagar constituency (in Bengaluru, Karnataka) MLA BN Vijayakumar - Part 2. Vijayakumar explained his view on Mahadayi issue, PM Modi and Amit Shah trend in Karnataka and his appeal to voters of Jayanagar constituency.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more