ಅಮ್ನೆಸ್ಟಿ ಇಂಡಿಯಾ ಮುಖ್ಯಸ್ಥ ಆಕರ್ ಪಟೇಲ್‌ಗೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಡೆ

ಬೆಂಗಳೂರು, ಏ. 6: ಮಾನವ ಹಕ್ಕು ಕಣ್ಗಾವಲು ಸಂಸ್ಥೆ ಎನಿಸಿರುವ ಅಮ್ನೆಸ್ಟಿ ಇಂಟರ್ನ್ಯಾಷನಲ್‌ನ ಭಾರತ ವಿಭಾಗದ ಮಾಜಿ ಮುಖ್ಯಸ್ಥ ಆಕರ್ ಪಟೇಲ್ ಅವರು ಅಮೆರಿಕಕ್ಕೆ ಹೋಗದಂತೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಡೆದ ಘಟನೆ ಬೆಳಕಿಗೆ ಬಂದಿದೆ. ಈ ವಿಚಾರವನ್ನು ಸ್ವತಃ ಆಕರ್ ಪಟೇಲ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಅಮೆರಿಕದ ಕೆಲ ವಿಶ್ವವಿದ್ಯಾಲಯಗಳ ಆಹ್ವಾನದ ಮೇರೆಗೆ ಉಪನ್ಯಾಸ ನೀಡಲು ಆಕರ್ ಪಟೇಲ್ ಅವರು ಅಮೆರಿಕಕ್ಕೆ ತೆರಳಿದ್ದರೆನ್ನಲಾಗಿದೆ. ಈ ವೇಳೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಅವರನ್ನು ತಡೆಯಲಾಗಿದೆ.

2019ರಲ್ಲಿ ಅಮ್ನೆಸ್ಟಿ ಇಂಡಿಯಾ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದರ ಸಂಬಂಧ ಸಿಬಿಐನಿಂದ ಮಾನವ ಹಕ್ಕು ಕಣ್ಗಾವಲು ಸಂಸ್ಥೆ ಎನಿಸಿರುವ ಅಮ್ನೆಸ್ಟಿ ಇಂಟರ್ನ್ಯಾಷನಲ್‌ನ ಭಾರತ ವಿಭಾಗದ ಮುಖ್ಯಸ್ಥ ಆಕರ್ ಪಟೇಲ್ ಅವರು ಅಮೆರಿಕಕ್ಕೆ ಹೋಗದಂತೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಡೆದ ಘಟನೆ ಬೆಳಕಿಗೆ ಬಂದಿದೆ. ಈ ವಿಚಾರವನ್ನು ಸ್ವತಃ ಆಕರ್ ಪಟೇಲ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಅಮೆರಿಕದ ಕೆಲ ವಿಶ್ವವಿದ್ಯಾಲಯಗಳ ಆಹ್ವಾನದ ಮೇರೆಗೆ ಉಪನ್ಯಾಸ ನೀಡಲು ಆಕರ್ ಪಟೇಲ್ ಅವರು ಅಮೆರಿಕಕ್ಕೆ ತೆರಳಿದ್ದರೆನ್ನಲಾಗಿದೆ. ಈ ವೇಳೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಅವರನ್ನ ತಡೆಯಲಾಗಿದೆ.

2019ರಲ್ಲಿ ಅಮ್ನೆಸ್ಟಿ ಇಂಡಿಯಾ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದರ ಸಂಬಂಧ ಸಿಬಿಐನಿಂದ ಆಕರ್ ಪಟೇಲ್ ಅವರಿಗೆ ಲುಕ್ ಔಟ್ ಸರ್ಕ್ಯೂಲರ್ ಬಂದಿದ್ದ ಹಿನ್ನೆಲೆಯಲ್ಲಿ ವಲಸೆ ಅಧಿಕಾರಿಗಳು ಈ ಕ್ರಮ ಕೈಗೊಂಡಿರುವುದು ತಿಳಿದುಬಂದಿದೆ. ಈ ಘಟನೆಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಆಕರ್ ಪಟೇಲ್, ಸಿಬಿಐನಿಂದ ಲುಕ್ ಔಟ್ ಸರ್ಕ್ಯೂಲರ್ (Look-out Circular) ಬಂದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Amnesty India ex-chief Aakar Patel stopped at Bengaluru airport from traveling to US

"ಇಂದು ಬೆಳಗ್ಗೆ ನಾನು ಏರ್‌ಪೋರ್ಟ್‌ಗೆ ಹೋದಾಗ ವಲಸೆ ಅಧಿಕಾರಿಗಳು ತಡೆದರು. ಸಿಬಿಐನಿಂದ ಲುಕೌಟ್ ಸರ್ಕುಲರ್ ಬಂದಿದೆ ಎಂದು ತಿಳಿಸಿದರು. ಈ ವಿಚಾರ ನನಗೆ ತಿಳಿದಿರಲಿಲ್ಲ. ಸಿಬಿಐನವರು ಕರೆದಾಗೆಲ್ಲಾ ನಾನು ವಿಚಾರಣೆಗೆ ಹಾಜರಾಗಿದ್ದೇನೆ. ನನ್ನ ಇರುವಿಕೆ ಗೊತ್ತಿದ್ದರೂ ಅವರು ಲುಕೌಟ್ ಸರ್ಕ್ಯೂಲರ್ ಹೊರಡಿಸಿದ್ದು ಏಕೆ ಎಂದು ಗೊತ್ತಾಗುತ್ತಿಲ್ಲ. ನಾನು ಏರ್‌ಪೋರ್ಟ್‌ಗೆ ಹೋದಾಗಷ್ಟೇ ಸಿಬಿಐನ ಲುಕೌಟ್ ಲಿಸ್ಟ್‌ನಲ್ಲಿ ನಾನಿರುವ ವಿಚಾರ ತಿಳಿದದ್ದು. ವಲಸೆ ವಿಭಾಗದಲ್ಲಿ ಚೆಕ್-ಇನ್ ಆದಾಗ ಈ ಬೆಳವಣಿಗೆ ಆಗಿದ್ದು.." ಎಂದು 51 ವರ್ಷದ ಪಟೇಲ್ ಹೇಳಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಮಾಡಿ ಆಕರ್ ಪಟೇಲ್ ಪೋಸ್ಟ್ ಹಾಕಿದ್ದರು. 2019ರಲ್ಲಿ ಬಿಜೆಪಿ ಶಾಸಕರೊಬ್ಬರು ಅಮ್ನೆಸ್ಟಿ ಇಂಡಿಯಾ ಸಂಸ್ಥೆ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಆಕರ್ ಪಟೇಲ್ ಅವರ ಪಾಸ್‌ಪೋರ್ಟ್ ಅನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು.

ಇತ್ತೀಚೆಗಷ್ಟೇ, ಅಂದರೆ ಫೆಬ್ರವರಿ ತಿಂಗಳಲ್ಲಿ ಸೂರತ್‌ನ ನ್ಯಾಯಾಲಯವೊಂದು ಆದೇಶ ಹೊರಡಿಸಿ ಆಕರ್ ಪಟೇಲ್ ಅವರಿಗೆ ಪಾಸ್‌ಪೋರ್ಟ್ ಮರಳಿಸುವ ವ್ಯವಸ್ಥೆ ಮಾಡಿತ್ತು. ಮಾರ್ಚ್ 1 ರಿಂದ ಮೇ 30 ರವರೆಗೆ ಅವರು ಅಮೆರಿಕಕ್ಕೆ ಪ್ರಯಾಣಿಸಲು ಅನುವಾಗುಂತೆ ಪಾಸ್‌ಪೋರ್ಟ್ ಅನ್ನು ಬಿಡುಗಡೆ ಮಾಡಲಾಗಿತ್ತು. ಎರಡು ಲಕ್ಷ ರೂ ಠೇವಣಿ, ಜೊತೆಗೆ ಅಮೆರಿಕದಲ್ಲಿ ಎಲ್ಲಿಲ್ಲಿ ಪ್ರಯಾಣ ಮಾಡುವುದು, ಅಲ್ಲಿಯ ಸಂಪರ್ಕ ಸಂಖ್ಯೆ, ಸ್ಥಳ ಇತ್ಯಾದಿ ಮಾಹಿತಿಯನ್ನ ನೀಡಬೇಕೆಂದು ಕೋರ್ಟ್ ಷರತ್ತು ಹಾಕಿತ್ತು.

Amnesty India ex-chief Aakar Patel stopped at Bengaluru airport from traveling to US

"ಅಮೆರಿಕದ ಬರ್ಕಲೀ ಮತ್ತು ನ್ಯೂಯಾರ್ಕ್ ಮೊದಲಾದ ಕೆಲ ವಿಶ್ವವಿದ್ಯಾಲಯಗಳಿಗೆ ತೆರಳಿ ನಾನು ಭಾಷಣ ಮಾಡುವುದಿತ್ತು. ಸೂರತ್‌ನಲ್ಲಿ ಬಿಜೆಪಿ ಶಾಸಕರೊಬ್ಬರು ನನ್ನ ವಿರುದ್ಧ ದಾಖಲಿಸಿದ ಪ್ರಕರಣ ಸಂಬಂಧ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ನನಗೆ ಜಾಮೀನು ನೀಡುವಾಗ ಕೊಟ್ಟ ಷರತ್ತಿನ ಭಾಗವಾಗಿ ನನ್ನ ಪಾಸ್‌ಪೋರ್ಟ್ ಅನ್ನು ನೀಡಬೇಕಿತ್ತು. ಅಮೆರಿಕದ ವಿವಿಗಳಿಂದ ಭಾಷಣಕ್ಕೆ ಆಹ್ವಾನ ಬಂದಾಗ ನಾನು ಕೋರ್ಟ್‌ಗೆ ಹೋಗಿ ನನ್ನ ಪಾಸ್‌ಪೋರ್ಟ್ ವಾಪಸ್ ಪಡೆದೆ ಸರಕಾರ ಇದನ್ನ ವಿರೋಧಿಸಿತು. ಪಬ್ಲಿಕ್ ಪ್ರಾಸಿಕ್ಯೂಟರ್ ಕೂಡ ವಿರೋಧ ಮಾಡಿದರು. ಆದರೆ, ಸರಕಾರದ ವಾದಕ್ಕೆ ಕೋರ್ಟ್ ಮಣೆಹಾಕದೆ ಅಮೆರಿಕ್ಕೆ ಹೋಗಲು ನನಗೆ ಅನುಮತಿ ನೀಡಿದೆ" ಎಂದು ಆಕರ್ ಪಟೇಲ್ ವಿವರಿಸಿದ್ದಾರೆ.

ಈಗ ಆಕರ್ ಪಟೇಲ್ ಅವರಿಗೆ ಸಿಬಿಐನಿಂದ ಲುಕ್ ಔಟ್ ಸರ್ಕ್ಯೂಲರ್ ಹೊರಟಿರುವುದು ಸೂರತ್‌ನ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ. ಅಮ್ನೆಸ್ಟಿ ಇಂಟರ್ನ್ಯಾಷನಲ್ ವಿರುದ್ಧ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯ (FCRA- Foreign Contribution Regulation Act) ನಿಯಮ ಉಲ್ಲಂಘನೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ.

ಅಮ್ನೆಸ್ಟಿ ಇಂಡಿಯಾ ಸಂಸ್ಥೆಯ ಮುಖ್ಯಸ್ಥರಾದ್ದರಿಂದ ಆಕರ್ ಪಟೇಲ್ ಅವರು ಭಾರತ ಬಿಟ್ಟ ಹೊರಹೋಗದಂತೆ ಸಿಬಿಐ ಎಚ್ಚರ ವಹಿಸಿದೆ. ಹೀಗಾಗಿ ಲುಕ್ ಔಟ್ ನೋಟೀಸ್ ಕೊಟ್ಟಿರುವುದು ತಿಳಿದುಬಂದಿದೆ. ಆಕರ್ ಪಟೇಲ್ ಅವರಿಗೆ ಲುಕ್ ಔಟ್ ಸರ್ಕ್ಯೂಲರ್ ಬಂದಿದ್ದ ಹಿನ್ನೆಲೆಯಲ್ಲಿ ವಲಸೆ ಅಧಿಕಾರಿಗಳು ಈ ಕ್ರಮ ಕೈಗೊಂಡಿರುವುದು ತಿಳಿದುಬಂದಿದೆ. ಈ ಘಟನೆಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಆಕರ್ ಪಟೇಲ್, ಸಿಬಿಐನಿಂದ ಲುಕ್ ಔಟ್ ಸರ್ಕ್ಯೂಲರ್ ಬಂದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+