• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

20 ಕೋಟಿ ಕೊಡ್ತೀನಿ ನನ್ನನ್ನು ಏನೂ ಕೇಳ್ಬೇಡಿ ಎಂದ ಅಲಿಖಾನ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 1:ಆಂಬಿಡೆಂಟ್ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಅಲಿಖಾನ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು ಇದೀಗ ನ್ಯಾಯಾಲಯ ಸಿಸಿಬಿ ಪೊಲೀಸರಿಗೆ ನೀಡಿದೆ.

ಆಂಬಿಡೆಂಟ್ ಕಂಪನಿಯಿಂದ 20 ಕೋಟಿ ಪಡೆದಿದ್ದೇನೆ, ಅದನ್ನು ವಾಪಸ್ ಕೊಡ್ತೀನಿ, ನನ್ನನ್ನು ಬಿಟ್ಟುಬಿಡಿ ಬೇರೇನು ಗೊತ್ತಿಲ್ಲ ಎಂದು ಅಲಿಖಾನ್ ಹೇಳಿಕೆ ನೀಡುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆಂಬಿಡೆಂಟ್ ಕೇಸ್ : ಅಲಿಖಾನ್ ಜಾಮೀನು ಅರ್ಜಿ ವಜಾ, ಕೋರ್ಟ್‌ಗೆ ಶರಣು ಆಂಬಿಡೆಂಟ್ ಕೇಸ್ : ಅಲಿಖಾನ್ ಜಾಮೀನು ಅರ್ಜಿ ವಜಾ, ಕೋರ್ಟ್‌ಗೆ ಶರಣು

ಸಿಸಿಬಿ ಅಧಿಕಾರಿಗಳು 8 ದಿನಗಳ ವಿಚಾರಣೆ ನಡೆಸಿದ್ದರೂ ಹೆಚ್ಚಿನ ಮಾಹಿತಿಗಳನ್ನು ಆತ ಎಲ್ಲಿಯೂ ಬಾಯ್ಬಿಟ್ಟಿಲ್ಲ, ಕೇಳಿದ್ದಕ್ಕೆಲ್ಲಾ ನನಗೆ ಗೊತ್ತಿಲ್ಲ ಮರೆತು ಹೋಗಿದೆ ಎಂದಷ್ಟೇ ಸಬೂಬು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾನೆ ಎನ್ನುವ ಮಾಹಿತಿಗಳು ಲಭ್ಯವಾಗಿದೆ.

ನಾನು ಹಣ ವಾಪಸ್ ಕೊಡ್ತೀನಿ, ಏನೂ ಕೇಳ್ಬೇಡಿ

ನಾನು ಹಣ ವಾಪಸ್ ಕೊಡ್ತೀನಿ, ಏನೂ ಕೇಳ್ಬೇಡಿ

ನಾಣು ಹಣ ವಾಪಸ್ ಕೊಡ್ತೀನಿ ಬೇರೆ ವಿಚಾರಗಳು ಯಾವುದನ್ನೂ ನನಗೆ ಕೇಳಬೇಡಿ, ನಾನು ಜಾಮೀನಿನ ಮೇಲೆ ಹೊರಗೆ ಬಂದ ನಂತರ 20 ಕೋಟಿ ಹಣವನ್ನು ಹೊಂದಿಸಿ ನ್ಯಾಯಾಲಯಕ್ಕೆ ಒಪ್ಪಿಸುತ್ತೇನೆ ಎಂದು ಹೇಳಿದ್ದಾರೆ.

ಆಂಬಿಡೆಂಟ್ ಪ್ರಕರಣ: ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು ಆಂಬಿಡೆಂಟ್ ಪ್ರಕರಣ: ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು

ಅಲಿಖಾನ್ ಮತ್ತೆ ಜೈಲಿಗೆ

ಅಲಿಖಾನ್ ಮತ್ತೆ ಜೈಲಿಗೆ

ಎಂಟು ದಿನಗಳ ಪೊಲೀಸ್ ಕಸ್ಟಡಿ ಮುಗಿದಿದ್ದರಿಂದ ಅಲಿಖಾನ್ ಅವರನ್ನು ಗುರುವಾರವೇ 61ನೇ ಸಿಸಿಎಚ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಆರೋಪಿಗೆ ಮತ್ತೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದೆ.

ಜನಾರ್ದನ ರೆಡ್ಡಿಗೆ ಇನ್ನೂ ಒಂದು ದಿನ ಜೈಲೇ ಗತಿ ಜನಾರ್ದನ ರೆಡ್ಡಿಗೆ ಇನ್ನೂ ಒಂದು ದಿನ ಜೈಲೇ ಗತಿ

ಎಲ್ಲ ಆರೋಪಿಗಳ ಹೇಳಿಕೆ ವಿಡಿಯೋ ಚಿತ್ರೀಕರಣ

ಎಲ್ಲ ಆರೋಪಿಗಳ ಹೇಳಿಕೆ ವಿಡಿಯೋ ಚಿತ್ರೀಕರಣ

ಅಲಿಖಾನ್ ಸೇರಿದಂತೆ ಆಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲಾ ಆರೋಪಿಗಳ ಹೇಳಿಕೆಯನ್ನು ಸಿಸಿಬಿ ಅಧಿಕಾರಿಗಳು ವಿಡಿಯೋ ವಿತ್ರೀಕರಣ ಮಾಡಿಕೊಂಡಿದ್ದಾರೆ. ಆರೋಪಿಗಳು ಪೊಲೀಸ್ ವಶದಲ್ಲಿ ಇದ್ದಾಗ ಒಂದು ರೀತಿ, ಕೋರ್ಟ್‌ಗೆ ಹಾಜರುಪಡಿಸಿದಾಗ ಇನ್ನೊಂದು ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಆಂಬಿಡೆಂಟ್ ಹಗರಣ ಮಾಹಿತಿ

ಆಂಬಿಡೆಂಟ್ ಹಗರಣ ಮಾಹಿತಿ

ಆಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೈಟ್ ಲಿಮಿಟೆಡ್ ಎಂಬ ಈ ಕಂಪನಿಯನ್ನು ಸೈಯದ್ ಅಹಮದ್ ಫರೀದ್ ನಡೆಸುತ್ತಿದ್ದ, ಈತ ಸಾರ್ವಜನಿಕರಿಗೆ 4 ತಿಂಗಳ ಅವಧಿಗೆ ಶೇ. 40 ನಿಂದ ಶೇ. 50 ಬಡ್ಡಿ ಹಣವನ್ನು ನೀಡುವುದಾಗಿ ನಂಬಿಸಿ 600 ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಿಸಿಕೊಂಡು ಸುಮಾರು 15 ಸಾವಿರಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿದ್ದಾರೆ. ಈತನಿಂದ ವಂಚನೆಗೊಳಗಾದವರ ಪೈಕಿ ಸರ್ಫರಾಜ್ ಆಲಂ ತಬರೇಜ್ ರವರು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಮೊ.ಸಂ. 137/2018 ಕಲಂ 420, ಐಪಿಸಿ. ಕಲಂ 4, 5, 6, ಪ್ರೈಜ್ ಚಿಟ್ & ಮನಿ ಸರ್ಕೂಲೇಷನ್ ಸ್ಕೀಮ್ ಬ್ಯಾನಿಂಗ್ ಆಕ್ಟ್ 1978. ಪ್ರಕಾರ 2018ರ ಮೇ ತಿಂಗಳಲ್ಲಿ ಪ್ರಕರಣಗಳು ದಾಖಲಾಗಿದೆ.

English summary
Ambident company fraud case accused Ali Khan is not cooperatting with the CCB police enquiry. He is not giving ay information related to Financial transactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X