ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬದಲಾದ ಏರ್‌ಪೋರ್ಟ್ ಮೆಟ್ರೋ ಮಾರ್ಗ: ಕಾಮಗಾರಿ ಯಾವಾಗ?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 14: ಏರ್‌ಪೋರ್ಟ್ ಮೆಟ್ರೋ ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಮ್ಮ ಮೆಟ್ರೋ ಫೇಸ್ 2ಬಿ ಯೋಜನೆಯಡಿ ಕೆಆರ್‌ಪುರಂ -ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕಾಮಗಾರಿ ಶೀಘ್ರವೇ ಪ್ರಾರಂಭಗೊಳ್ಳಲಿದ್ದು, ಈ ಮಾರ್ಗದ ಬೀದಿದೀಪಗಳನ್ನು ಸ್ಥಳಾಂತರಿಸಲು ಮೆಂಟ್ರೋ ನಿಗಮ ಟೆಂಡರ್ ಕರೆದಿದೆ.

ಮೆಟ್ರೋಗಾಗಿ ಮರ ಕಟಾವು: ಸುಪ್ರೀಂಕೋರ್ಟ್ ಮಧ್ಯಂತರ ತಡೆಮೆಟ್ರೋಗಾಗಿ ಮರ ಕಟಾವು: ಸುಪ್ರೀಂಕೋರ್ಟ್ ಮಧ್ಯಂತರ ತಡೆ

ಅರ್ಜಿ ಸಲ್ಲಿಸಲು ನ.4 ಕೊನೆಯ ದಿನಾಂಕವಾಗಿದೆ. ಕಾಮಗಾರಿ ಮೊತ್ತ 93.14 ಲಕ್ಷ ಎಂದು ಅಂದಾಜಿಸಲಾಗಿತ್ತು. ಆರು ತಿಂಗಳಲ್ಲಿ ಕಾಮಗಾರಿ ಮುಗಿಸಬೇಕೆಂದು ಷರತ್ತು ವಿಧಿಸಲಾಗಿತ್ತು. ಟೆಂಡರ್‌ದಾರರು 1.86 ಲಕ್ಷ ಭದ್ರತೆಯನ್ನು ಇಡಬೇಕಾಗಿದೆ. ನಿಗಮದ ವೆಬ್‌ಸೈಟ್ ನಲ್ಲಿ 56 ಸಾವಿರ ರೂ ಪಾವತಿಸಿ ಟೆಂಡರ್ ಅರ್ಜಿ ಪಡೆಯಬಹುದಾಗಿದೆ.

ಅಡೆತಡೆ ನಿವಾರಿಸಲು ಸಿದ್ಧತೆ

ಅಡೆತಡೆ ನಿವಾರಿಸಲು ಸಿದ್ಧತೆ

ಕೆಆರ್ ಪುರಂ-ಏರ್‌ಪೋರ್ಟ್ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗದ ಕಾಮಗಾರಿ ಶೀಘ್ರವೇ ಆರಂಭಿಸುವ ಉದ್ದೇಶದಿಂದ ಇರುವ ಅಡೆತಡೆ ನಿವಾರಿಸಲು ಬಿಎಂಆರ್‌ಸಿಎಲ್ ಕಾರ್ಯೋನ್ಮುಖವಾಗಿದೆ. ಬೀದಿ ದೀಪ ತೆರವು ಮತ್ತು ಒಳಚರಂಡಿ ವ್ಯವಸ್ಥೆ ಬದಲಿಸುವ ಕಾರ್ಯ ಮುಗಿದ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೇಗವೂ ಹೆಚ್ಚು

ವೇಗವೂ ಹೆಚ್ಚು

ಮೆಟ್ರೋ ಒಂದನೇ ಹಂತದಲ್ಲಿ 80 ಕೆಎಂಪಿಎಚ್ ವೇಗದ ಸಾಮರ್ಥ್ಯಕ್ಕೆ ಅನುಗುಣವಾಗಿ ಮೆಟ್ರೋ ಮಾರ್ಗ ನಿರ್ಮಿಸಲಾಗಿದೆ.

ಆದರೂ ಮೆಟ್ರೋ ರೈಲುಗಳು ಸರಾಸರಿ 34 ಕೆಎಂಪಿಎಚ್ ವೇಗದಲ್ಲಿ ಸಂಚರಿಸುತ್ತವೆ. ಕೆಂಪೇಗೌಡ ವಿಮಾನ ನಿಲ್ದಾಣ -ಕೆಆರ್ ಪುರಂ ಮಾರ್ಗದ ಸಾಮರ್ಥ್ಯ 90ರಿಂದ 95 ಕೆಎಂಪಿಎಚ್ ಇರಲಿದ್ದು, ಮೆಟ್ರೋ ರೈಲುಗಳ ಸಂಚಾರ ಪ್ರತಿ ಗಂಟೆಗೆ 60 ಕಿ.ಮೀ ವೇಗ ಇರಲಿದೆ.

ಆರ್‌ವಿ ರಸ್ತೆಯ ಮೆಟ್ರೋ ನಿಲ್ದಾಣದ ಒಂದು ಪ್ರವೇಶದ್ವಾರ ಕೆಡವಲು ಸಿದ್ಧತೆಆರ್‌ವಿ ರಸ್ತೆಯ ಮೆಟ್ರೋ ನಿಲ್ದಾಣದ ಒಂದು ಪ್ರವೇಶದ್ವಾರ ಕೆಡವಲು ಸಿದ್ಧತೆ

ಈ ಮಾರ್ಗದಲ್ಲಿ ಒಟ್ಟು 17 ಮೆಟ್ರೋ ನಿಲ್ದಾಣಗಳು ಬರಲಿವೆ

ಈ ಮಾರ್ಗದಲ್ಲಿ ಒಟ್ಟು 17 ಮೆಟ್ರೋ ನಿಲ್ದಾಣಗಳು ಬರಲಿವೆ

ಮೆಟ್ರೋ ಹೊಸ ಸಂಪರ್ಕ ಮಾರ್ಗದ ಅನ್ವಯ ಕೆಆರ್ ಪುರಂ, ಚನ್ನಸಂದ್ರ, ಹೊರಮಾವು, ಕಲ್ಯಾಣ ನಗರ, ಎಚ್‌ಆರ್‌ಬಿಆರ್ ಲೇಔಟ್‌, ನಾಗವಾರ, ವೀರಣ್ಣ ಪಾಳ್ಯ, ಕೆಂಪಾಪುರ ಕ್ರಾಸ್, ಹೆಬ್ಬಾಳ, ಕೊಡಿಗೆಹಳ್ಳಿ, ಜಕ್ಕೂರು, ಕೋಗಿಲು ಕ್ರಾಸ್, ಫೆರಿಫೆರಲ್ ರಿಂಗ್ ರಸ್ತೆ, ಟ್ರಂಪೆಟ್ ಇಂಟರ್‌ಸೆಕ್ಷನ್ ಮತ್ತು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಎರಡು ನಿಲ್ದಾಣಗಳು ಸೇರಿ 17 ನಿಲ್ದಾಣಗಳು ಬರಲಿವೆ.

ಮಾರ್ಗ ಬದಲಾವಣೆ ಏಕೆ?

ಮಾರ್ಗ ಬದಲಾವಣೆ ಏಕೆ?

ಈ ಹಿಂದೆ ಕೆಆರ್‌ಪುರಂ ಮೂಲಕ ನಾಗವಾರದಿಂದ ಆರ್‌ಕೆ ಹೆಗಡೆ ನಗರದ ಮಾರ್ಗವಾಗಿ ಏರ್ಪೋರ್ಟ್‌ಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸಲಾಗಿತ್ತು. ಈ ರ್ಮಾವಾಗಿ ಏರ್‌ಪೋರ್ಟ್ ತಲುಪಲು ಕೇವಲ 29 ಕಿ.ಮೀ ಇತ್ತು. ಆದರೆ ಇದೇ ಮಾರ್ಗದಲ್ಲಿ ಜಲಮಂಡಳಿ ಎರಡು ಬೃಹತ್ ಪೈಪ್‌ಲೈನ್ ಇದ್ದು, ಆರ್‌ಕೆ ಹೆಗಡೆ ನಗರದಿಂದ ಜಕ್ಕೂರು ರಸ್ತೆ ಮಧ್ಯೆ ಬೃಹತ್ ಗ್ಯಾಸ್ ಪೈಪ್‌ಲೈನ್ ಅಳವಡಿಕೆಯಾಗಿದೆ. ನೀರಿನ ಪೈಪ್‌ಲೈನ್‌ ಬಿಟ್ಟು ರಸ್ತೆಯ ಉತ್ತರ ಅಥವಾ ದಕ್ಷಿಣ ಭಾಗದಲ್ಲಿ ಮೆಟ್ರೋ ಲೈನ್ ಮಾಡುವುದಕ್ಕೆ ಹೊರಟರೆ 4.6 ಕಿ.ಮೀ ಮಾರ್ಗದಲ್ಲಿ ವಸತಿ ಪ್ರದೇಶವಿದ್ದು ಭೂಸ್ವಾಧೀನ ಅನಿವಾರ್ಯವಾಗಿತ್ತು. ಆದ್ದರಿಂದ 37 ಕಿ.ಮೀ ಮಾರ್ಗ ನಿರ್ಮಾಣ ಮಾಡಬೇಕಿದೆ.

English summary
BMRCL officials have said that the Airport Metro works will start soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X