ಬೆಂಗಳೂರಲ್ಲಿ 8 ಕೋಟಿ ನಾಯಿ ಕಳವು; ಹುಡುಕಿಕೊಟ್ಟರೆ 1 ಲಕ್ಷ ಬಹುಮಾನ

ಬೆಂಗಳೂರು, ಡಿಸೆಂಬರ್ 22 : ಬೆಂಗಳೂರಿನಲ್ಲಿ ಮೂರುವರೆ ವರ್ಷದ ನಾಯಿ ಮರಿಯೊಂದು ಕಾಣೆಯಾಗಿದೆ. ನಾಯಿಯನ್ನು ಹುಡುಕಿಕೊಟ್ಟರೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಲಾಗಿದೆ.

ಅಲಸ್ಕನ್ ಮಲಮುಟೆ ತಳಿಗೆ ಸೇರಿದ ನಾಯಿ ಮರಿ ಬೆಂಗಳೂರಿನ ಶ್ರೀನಗರದಿಂದ ಕಾಣೆಯಾಗಿದೆ. ಕಳೆದ ಎರಡೂವರೆ ವರ್ಷಗಳ ಹಿಂದೆ ಚೀನಾದಿಂದ 8 ಕೋಟಿ ರೂ. ನೀಡಿದ ಬ್ರೀಡರ್ ಸತೀಶ್ ಈ ನಾಯಿ ಮರಿಯನ್ನು ತಂದಿದ್ದರು.

ಕೆಂಪು-ಬಿಳಿ ಬಣ್ಣ ಮಿಶ್ರಿತ ನಾಯಿ ಮರಿ ಡಿಸೆಂಬರ್ 5ರಂದು ಕಾಣೆಯಾಗಿದೆ. ನಾಯಿ ಮರಿ ಹುಡುಕಿಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಸತೀಶ್ ಹೇಳಿದ್ದಾರೆ. ಹನುಮಂತನಗರ ಪೊಲೀಸ್ ಠಾಣೆಯಲ್ಲಿ ನಾಯಿ ಕಾಣೆಯಾದ ಬಗ್ಗೆ ದೂರು ನೀಡಲಾಗಿದೆ.

Alaskan Malamute Dog Missing From Bengaluru

ಅಲಸ್ಕನ್ ಮಲಮುಟೆ ತಳಿಗೆ ಸೇರಿದ ನಾಯಿ ಭಾರತದಲ್ಲಿ ಇರುವುದು 3 ಮಾತ್ರ. ಅದರಲ್ಲಿ ಬೆಂಗಳೂರಿನಲ್ಲಿದ್ದ ನಾಯಿ ಕೂಡಾ ಒಂದಾಗಿತ್ತು. ಈಗ ಅದು ಕಾಣೆಯಾಗಿದ್ದು, ಮಾಲೀಕರು ನಾಯಿ ಪತ್ತೆಗೆ ಹರಸಾಹಸಪಡುತ್ತಿದ್ದಾರೆ.

ಸತೀಶ್ ಅವರು ಮನೆ ಮುಂದೆ ಕಟ್ಟಿಹಾಕಿದ್ದ ನಾಯಿಯನ್ನು ಚೈನ್ ಸಮೇತ ಕಳ್ಳತನ ಮಾಡಲಾಗಿದೆ. ಅಲಸ್ಕನ್ ಮಲಮುಟೆ ತಳಿಗೆ ಸೇರಿದ ನಾಯಿ ಹಸ್ಕಿ ತಳಿಯ ನಾಯಿಯಂತೆಯೇ ಕಾಣುತ್ತದೆ. ಆದರೆ, ಅದಕ್ಕಿಂತ ಮೂರು ಪಟ್ಟು ದೊಡ್ಡದಾಗಿರುತ್ತದೆ. ಚೀನಾದಲ್ಲಿ ಹೆಚ್ಚಾಗಿ ಈ ನಾಯಿಗಳು ಸಿಗುತ್ತವೆ.

ಸತೀಶ್ ನಾಯಿ ಹುಡುಕಲು ಪ್ರಯತ್ನಗಳನ್ನು ಮುಂದುವರಸಿದ್ದಾರೆ. ವಾಟ್ಸಪ್‌ ಗ್ರೂಪ್‌ಗಳಲ್ಲಿ ನಾಯಿಯ ಚಿತ್ರವನ್ನು ಹಾಕಿ ಮಾಹಿತಿ ಇದ್ದರೆ ನೀಡುವಂತೆ ಕೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+