ಮಯ್ಯಾಸ್ ಹೋಟೆಲ್‌ಗೆ ಕೆಲಸ ಕೇಳಿ ಹೋಗಿದ್ದ ಉಗ್ರ ಅಖ್ತರ್ ಹುಸೇನ್: ಎನ್‌ಐಎ ಮುಂದೆ ಬಾಯಿಬಿಟ್ಟ
ಬೆಂಗಳೂರು, ಜುಲೈ26: ಬೆಂಗಳೂರಿನಲ್ಲಿ ಸೆರೆಸಿಕ್ಕಿರುವ ಉಗ್ರನನ್ನು ಭೇಟೆಯಾಡಿದ್ದು ತಾನೇ ಎಂದು ಸಿಸಿಬಿ ಹೇಳಿಕೊಳ್ತಿದೆ. ಅಸಲಿಗೆ ಶಂಕಿತ ಉಗ್ರನ ಭೇಟೆಗೆ ಕಾರಣವಾಗಿದ್ದು ರಾಷ್ಟ್ರೀಯ ತನಿಖಾ ದಳ( ಎನ್ಐಎ). ಎನ್‌ಐಎ ನೀಡಿದ ಮಾಹಿತಿಯನ್ನು ಆಧರಿಸಿಯೇ ಸಿಸಿಬಿ ಶಂಕಿತ ಉಗ್ರ ಅಖ್ತರ್ ಹುಸೇನ್‌ನನ್ನು ಬಂಧಿಸಿದ್ದು. ಎನ್ಐಎ ಅಧಿಕಾರಿಗಳ ವಿಚಾರಣೆ ವೇಳೆ ಅಖ್ತರ್ ಹುಸೇನ್ ಹೇಳಿದ್ದೇನು ಅನ್ನೋದರ ಮಾಹಿತಿ 'ಒನ್ಇಂಡಿಯಾ ಕನ್ನಡ'ಕ್ಕೆ ಸಿಕ್ಕಿದೆ.
ಅಖ್ತರ್ ಹುಸೇನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿದ್ದು ಎನ್ಐಎ. ಈ ಮಾಹಿತಿಯನ್ನು ಮೊದಲು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯವರಿಗೆ ತಿಳಿಸಲಾಗುತ್ತದೆ. ಪ್ರತಾಪ್ ರೆಡ್ಡಿಯವರು ಸಿಸಿಬಿಗೆ ಮಾಹಿತಿಯನ್ನು ರವಾನಿಸಿ ಅಖ್ತರ್ ಹುಸೇನ್‌ನನ್ನು ಬಂಧಿಸುವಂತೆ ಸೂಚನೆಯನ್ನು ನೀಡುತ್ತಾರೆ. ಈ ಮಾಹಿತಿಯನ್ನು ಪಡೆದು ತಿಲಕ್ ನಗರ ಪೊಲೀಸರ ಸಹಕಾರವನ್ನು ಪಡೆದ ಸಿಸಿಬಿ ಅಧಿಕಾರಿಗಳು ಮೊದಲು ಮಫ್ತಿಯಲ್ಲಿ ಶಂಕಿತ ಪೂರ್ವಾಪರವನ್ನು ನೆರೆಹೊರೆಯವರ ಬಳಿಯಲ್ಲಿ ಪಡೆದು ಜುಲೈ 25ರ ಬೆಳಗಿನ ಜಾವದಲ್ಲಿ ಅಖ್ತರ್ ಹುಸೇನ್ ನನ್ನು ಬಂಧಿಸುತ್ತಾರೆ.
ಅಸಲಿಗೆ ಅಖ್ತರ್ ಹುಸೇನ್ ಸಿಗುವ ವೇಳೆಗೆ ಎನ್‌ಐಎ ಅಧಿಕಾರಿಗಳು ಬಂದಿರುತ್ತಾರೆ. ಅಖ್ತರ್ ಹುಸೇನ್ ಬಂಧನದ ಬಳಿಕ ಎನ್‌ಐಎ ವಿಚಾರಣೆಯನ್ನು ನಡೆಸಿದ್ದಾರೆ. ಸಿಸಿಬಿಗೆ ಅಧಿಕಾರಿಗಳನ್ನು ಸಮೀಪಕ್ಕೆ ಬಿಡದೇ ರಾಷ್ಟ್ರೀಯ ಭದ್ರತಾ ವಿಚಾರವಾಗಿರುವ ಕಾರಣದಿಂದಾಗಿ ಇಡೀ ದಿನ ಅಖ್ತರ್ ಹುಸೇನ್‌ನನ್ನು ಎನ್ಐಎ ಅಧಿಕಾರಿಗಳು ವಿಚಾರಣೆಯನ್ನು ನಡೆಸಿದ್ದಾರೆ.

ಅಘಾನಿಸ್ತಾನ ಮೂಲಕ ಹೋಗುವ ಪ್ಲಾನ್
ಧರ್ಮ ಯುದ್ದಕ್ಕೆ ಪ್ರಚೋದನೆಯನ್ನು ಕೊಡುತ್ತಿದ್ದ ಅಖ್ತರ್ ಹುಸೇನ್ ಅಸ್ಸಾಂ ಮೂಲದ ಆಸಾಮಿ. ಅಸ್ಸಾಂನಲ್ಲಿನ ಹಿಂದೂ ಬಾಹುಳ್ಯ ಪ್ರದೇಶದಲ್ಲಿ ಬೆಳೆದವನು. ತಾನು ಬೆಳೆಯುವಾಗ ಅನುಭವಿಸಿದ ಕೆಲವು ಕಹಿಘಟನೆಯಿಂದ ನೊಂದಿದ್ದ. ಇದೇ ಕಾರಣಕ್ಕಾಗಿ ತಾನು ಉಗ್ರ ಸಂಘಟೆನೆಯನ್ನು ಸೇರಲು ಬಯಸಿದ್ದ. ಅಖ್ತರ್ ಹುಸೇನ್ ಅಸ್ಸಾಂ ಬಿಟ್ಟು ಅಪ್ರಾಪ್ತ ವಯಸ್ಸಿಗೆ ಅಂದರೆ 17ನೇ ವಯಸ್ಸಿಗೆ ಬೆಂಗಳೂರಿಗೆ ಬಂದಿದ್ದ. ಮೊದಲು ಮಯ್ಯಾಸ್ ಹೋಟೆಲ್‌ಗೆ ಕೆಲಸವನ್ನು ಕೇಳಿಕೊಂಡು ಹೋಗಿದ್ದ. ವಯಸ್ಸಿನ ಕಾರಣ ಮಯ್ಯಾಸ್ ನಲ್ಲಿ ಕೆಲಸವನ್ನು ನೀಡಿರಲಿಲ್ಲ. ಆ ಬಳಿಕ ಸಣ್ಣ ಪುಟ್ಟ ಕೆಲಸವನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದವನು ಆ ಬಳಿಕ ಮುಂಬೈಗೆ ಹೋಗಿದ್ದ. ಎಸ್ಎಸ್ಎಲ್‌ಸಿ ಓದಿದ್ದ ಅಖ್ತರ್ ಹುಸೇನ್ ಮುಂಬೈನಲ್ಲಿ ಕಾಲೇಜು ಸೇರಲು ಬಯಸಿ ಕೆಲಸವನ್ನು ಮಾಡಿದ್ದ ಬಗ್ಗೆ ತನಿಖೆಯ ವೇಳೆ ಗೊತ್ತಾಗಿದೆ. ಆ ಬಳಿಕ ಮತ್ತೆ ಸಿಲಿಕಾನ್ ಸಿಟಿಗೆ 2017 ಬಂದು ಫುಡ್ ಡಿಲಿವರಿ ಬಾಯ್ ಕೆಲಸವನ್ನು ಮಾಡುತ್ತಿದ್ದ. ತನ್ನ ಸಮಾನ ಮನಸ್ಕರರನ್ನು ಹುಡುಕುತ್ತಿದ್ದ ಆಸಾಮಿ. ಉಗ್ರ ಸಂಘಟನೆ ಸೇರಿವ ಮಾರ್ಗವನ್ನು ಹುಡುಕುತ್ತಿದ್ದು. ಆಫ್ಘಾನಿಸ್ತಾನ ಮೂಲಕ ಐಸಿಸ್ ಸಂಘಟನೆ ಸೇರಲು ಬಯಸಿರೋದು ತನಿಖೆಯ ವೇಳೆ ಬಹಿರಂಗವಾಗಿದೆ.

ಮುಸ್ಲಿಂ ಶೋಷಣೆ ತಪ್ಪಿಸಲು ಎಂಬ ಸಬೂಬು
ಶಂಕಿತ ಉಗ್ರ ಅಖ್ತರ್ ಹುಸೇನ್ ಅಸ್ಸಾಂ ಹಿಂದು ಬಾಹುಳ್ಯ ಪ್ರದೇಶದಲ್ಲಿ ಕೆಲವು ಕಹಿ ಘಟನೆ ಅನುಭವಿಸಿದ್ದನಂತೆ. ಇದರಿಂದ ಮುಸ್ಲಿಂರಿಗೆ ಶೋಷಣೆಯಾಗುತ್ತಿದೆ ಎಂದು ಭಾವಿಸಿದ್ದ. ಇದಕ್ಕಾಗಿ ಉಗ್ರ ಸಂಘಟನೆಯನ್ನು ಸೇರುವ ಮೂಲಕ ಮುಸ್ಲಿಂ ಪರವಾಗಿ ಹೋರಾಡಲು ಸನ್ನದ್ಧನಾಗಿದ್ದ. ತನ್ನ ಸಮಾನ ಮನಸ್ಕರು ಎಂದು ಇನ್ನು ಮೂವರನ್ನು ಸಂಪರ್ಕಿಸಿದ್ದ. ಈ ಮೂವರು ಸೇರಿಕೊಂಡು ಐಸಿಸ್ ನಂತಹ ಸಂಘಟನೆಯನ್ನು ಸೇರಲು ಬಯಸಿದ್ದರು. ಇದಕ್ಕಾಗಿ ಯಾವುದಾದರು ಸಂಘಟನೆಯನ್ನು ಸಂಪರ್ಕ ಸಾಧ್ಯವೆ ಎಂದ ವೆಬ್ ಸೈಟ್‌ನಲ್ಲಿ ಹುಡುಕಾಟವನ್ನು ಮಾಡಿದ್ದರು. ಕಾಶ್ಮೀರ ಗಡಿ , ಬಾಂಗ್ಲಾ ಗಡಿ, ದುಬೈ ಮೂಲಕ ಹೀಗೆ ಯಾವೆಲ್ಲಾ ಮಾರ್‍ಗದ ಮೂಲ ಹೋಗಬಹುದು ಎಂದು ಸಹ ಹುಡುಕಾಟವನ್ನು ನಡೆಸಿರುವುದು ತನಿಖೆಯ ಸಮಯದಲ್ಲಿ ತಿಳಿದು ಬಂದಿದೆ.

ತನ್ನಂತೆ ಯೋಚಿಸುವ ನಾಲ್ವರ ಸಂಪರ್ಕ
ಎನ್ಐಎ ಅಧಿಕಾರಿಗಳು ನಡೆಸಿರುವ ಪ್ರಾಥಮಿಕ ತನಿಖೆಯ ವೇಳೆಯಲ್ಲಿ ಕೆಲವು ಮಾಹಿತಿ ಸಿಕ್ಕಿದ್ದು ಅಖ್ತರ್ ಹುಸೇನ್ ಉಗ್ರ ಸಂಘಟನೆಯನ್ನು ಸೇರುವ ಪ್ರಯತ್ನ ಮಾಡಿದ್ದ. ಆದರೆ ಯಾವುದೇ ಉಗ್ರ ಸಂಘಟನಯೆ ಸಂಪರ್ಕಕ್ಕೆ ಬಂಧಿರಲಿಲ್ಲ ಅನ್ನೋದು ತಿಳಿದು ಬಂದಿದೆ. ಆದರೆ ಉಗ್ರ ಸಂಘಟನೆ ಸೇರಲು ಸುಮಾರು 7 ವರ್ಷಗಳಿಂದ ಪ್ರಯತ್ನ ಮಾಡಿದ್ದ ಎಂದು ತಿಳಿದು ಬಂದಿದೆ. ಈತ ಫೇಸ್ ಬುಕ್ ಮೂಲಕ ತಮಿಳುನಾಡಿ ಒಬ್ಬ, ಕೋಲ್ಕತ್ತಾದ ಒರ್ವ ಹಾಗೂ ಬಾಂಗ್ಲಾದ ಇಬ್ಬರು ಸ್ನೇಹಿತರ ಜೊತೆ ಉಗ್ರ ಸಂಘಟನೆ ಸೇರೊ ಫ್ಲಾನ್ ಮಾಡಿದ್ದ ಎಂದು ತಿಳಿದಿ ಬಂದಿದೆ. ಇದಕ್ಕಾಗಿಯೇ ಅಲ್ ಖೈದ, ಐಸಿಸ್ ಸೇರಿ ಹಲವು ಉಗ್ರ ಸಂಘಟನೆಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದ ಎಂದು ತಿಳಿದುಬಂದಿದೆ.
|
ತಮಿಳುನಾಡಿನಲ್ಲಿ ಮತ್ತೊಬ್ಬ ಶಂಕಿತ ಅರೆಸ್ಟ್
ಶಂಕಿತ ಉಗ್ರ ಅಖ್ತರ್ ಹುಸೇನ್ ನಾಲ್ವರ ಜೊತೆ ಸಂಪರ್ಕವನ್ನು ಮಾಡಿದ್ದನು. ಅದರಂತೆ ಎನ್‌ಐಎ ಅಧಿಕಾರಿಗಳಮಾಹಿತಿಯಂತೆ ಸಿಸಿಬಿ ಪೊಲೀಸರು ಅಖ್ತರ್ ಹುಸೇನ್ ನನ್ನು ಬಂಧಿಸಿದ್ದರು. ಅಖ್ತರ್ ಜೊತೆ ಸಂಪರ್ಕ ಬೆಳೆಸಿದ್ದ ತಮಿಳುನಾಡಿನ ಸೇಲಂನಲ್ಲಿದ್ದ ಆದಿಲ್ ಅಲಿಯಾಸ್ ಜುಬಾ ಎಂಬಾತನನ್ನು ಸಿಸಿಬಿ ಪೊಲೀಸರು ಬಲೆಗೆ ಕೆಡವಿದ್ದಾರೆ. ಸಿಸಿಬಿ ಈ ಮೂಲಕ ಇಬ್ಬರು ಶಂಕಿತರನ್ನು ಬಂಧಿಸಿದೆ. ಎನ್‌ಐಎ ಮತ್ತು ಸಿಸಿಬಿ ಸೇರಿ ಜಿಹಾದ್(ಧರ್‍ಮಯುದ್ಧ) ಅಣಿಯಾಗಲು ಸಜ್ಜಾಗುತ್ತಿದ್ದವರ ಹೆಡೆಮುರಿಯನ್ನು ಕಟ್ಟಲಾಗಿದೆ.












Click it and Unblock the Notifications