ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದ್ಯಪಾನ ಮಾಡಿದ್ದ ಪೈಲಟ್ ಅಮಾನತು ಮಾಡಿದ ಏರ್ ಇಂಡಿಯಾ

|
Google Oneindia Kannada News

ಬೆಂಗಳೂರು, ಜುಲೈ 15: ಮದ್ಯಪಾನ ಮಾಡಿದ್ದ ಪೈಲಟ್‌ನನ್ನು ಏರ್ ಇಂಡಿಯಾ ಸಂಸ್ಥೆ ಅಮಾನತು ಮಾಡಿದೆ.

ಜುಲೈ 13ರಂದು ರಜೆಯಲ್ಲಿದ್ದ ಪೈಲಟ್ ಜಿತೇಂದ್ರ ಸಿಂಗ್ ಅವರು ಕಾಕ್ ಪಿಟ್ ನಲ್ಲಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅವರನ್ನು ಆಲ್ಕೋಹಾಲ್ ಪರೀಕ್ಷೆಗೆ ಒಳಪಡಿಸಾಗಿದ್ದು, ಪರೀಕ್ಷೆಯಲ್ಲಿ ಮದ್ಯಪಾನ ಮಾಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ.

ಏರ್ ಕೆನಡಾ ವಿಮಾನ ತುರ್ತು ಲ್ಯಾಂಡಿಂಗ್:35 ಪ್ರಯಾಣಿಕರಿಗೆ ಗಾಯಏರ್ ಕೆನಡಾ ವಿಮಾನ ತುರ್ತು ಲ್ಯಾಂಡಿಂಗ್:35 ಪ್ರಯಾಣಿಕರಿಗೆ ಗಾಯ

ವಿಮಾನ ಚಾಲನೆ ಮಾಡಿಲ್ಲದಿದ್ದರೂ ಮದ್ಯಪಾನ ಮಾಡಿ ಕಾಕ್‌ಪಿಟ್‌ನಲ್ಲಿ ಪ್ರಯಾಣಿಸುತ್ತಿದ್ದ ಪೈಲಟ್‌ನನ್ನು 3 ತಿಂಗಳ ಕಾಲ ಸೇವೆಯಿಂದ ಅಮಾನತುಗೊಳಿಸಲಾಗಿದೆ.

Air India pilot suspended after failing Breathalyser test in Bengaluru

ವಿಮಾನದಲ್ಲಿ ಒಂದೇ ಒಂದು ಆಸನ ಕೂಡ ಖಾಲಿ ಇಲ್ಲದ ಕಾರಣ ಪೈಲಟ್ ಜಿತೇಂದ್ರ ಸಿಂಗ್ ಅವರಿಗೆ ಸಹಾಯಕ ಪೈಲಟ್ ಆಗಿ ಕಾಕ್ ಪಿಟ್ ನಲ್ಲಿ ಪ್ರಯಾಣಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯದ ನಿಯಮಗಳಡಿ ಅನುಮತಿ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಕಾಕ್ ಪಿಟ್ ಪ್ರವೇಶಿಸುವ ಪ್ರತಿಯೊಬ್ಬರು ಪ್ರಯಾಣಕ್ಕು ಮುನ್ನ ಮತ್ತು ನಂತರ ಆಲ್ಕೋಹಾಲ್ ಪರೀಕ್ಷೆಗೆ ಒಳಪಡುವುದು ಕಡ್ಡಾಯವಾಗಿದೆ ಮತ್ತು ಮದ್ಯಪಾನ ಮಾಡಿ ಕಾಕ್ ಪಿಟ್ ನಲ್ಲಿ ಪ್ರಯಾಣಿಸುವಂತಿಲ್ಲ ಎಂಬ ನಿಯಮವಿದೆ.

English summary
Air India pilot suspended after failing Breathalyser test in Kempegowda international Airport.has been suspended for three months as he failed a Breathalyser test after reaching the Kempe Gowda International Airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X