KIA: ರಾಜ್ಯಪಾಲರನ್ನು ಬಿಟ್ಟು ಹಾರಿದ್ದ ಏರ್ ಏಶಿಯಾ ವಿಮಾನ, ಸ್ಟೇಷನ್ ಮ್ಯಾನೇಜರ್ ಅಮಾನತು
ಬೆಂಗಳೂರು, ಜುಲೈ 31: ಹೈದರಾಬಾದ್‌ಗೆ ಕರ್ನಾಟಕ ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಏರ್ ಏಶಿಯಾ ವಿಮಾನವು ಬಿಟ್ಟು ಹೋಗಿತ್ತು. ಈ ಪ್ರಕರಣ ಸಂಬಂಧ ಇದೀಗ ಏರ್‌ಪೋರ್ಟ್ ಸ್ಟೇಷನ್ ವ್ಯವಸ್ಥಾಪಕರನ್ನು ಒಂದು ತಿಂಗಳ ಕಾಲ ಅಮಾನತು ಮಾಡಲಾಗಿದೆ.
ಗುರುವಾರ (ಜು.27) ಮಧ್ಯಾಹ್ನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೈದರಾಬಾದ್‌ಗೆ ತೆರಳಬೇಕಿತ್ತು. ಆದರೆ ಅವರು ಹತ್ತು ನಿಮಿಷ ತಡವಾಗಿ ಬಂದರೆಂದು ಅವರಿಗಾಗಿ ಕಾಯದೇ ಏರ್ ಏಶಿಯಾ ವಿಮಾನವು ಅವರನ್ನು ಬಿಟ್ಟು ಹಾರಿತ್ತು. ಸದ್ಯ ರಾಜ್ಯಪಾಲರು ಸಮಯಕ್ಕೆ ಸರಿಯಾಗಿ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು ಎಂದು ರಾಜಭವನ ಸಮರ್ಥಿಸಿಕೊಂಡಿದೆ.

ಸಮಯಕ್ಕೆ ಸರಿಯಾಗಿ ರಾಜ್ಯಪಾಲರು ತೆರಳಿದರೂ ಸಹಿತ ಏರ್‌ಲೈನ್‌ನ ಗ್ರೌಂಡ್ ಸ್ಟಾಫ್‌ನ ಲೋಪದಿಂದಾಗಿ ರಾಜ್ಯಪಾಲರು ವಿಮಾನವನ್ನು ತಪ್ಪಿಸಿಕೊಳ್ಳುವಂತಾಯಿತು. ಏರ್‌ಏಷ್ಯಾ ಅಧಿಕಾರಿಗಳು ಸೋಮವಾರ ಗವರ್ನರ್ ಕಚೇರಿಯನ್ನು ಭೇಟಿಯಾಗಿ ಈ ವಿಷಯ ವಿವರಿಸುವ ಮೊದಲೇ ಇನ್ನೂ ಇಬ್ಬರು ಏರ್ ಏಶಿಯಾ ವಿಮಾನಯಾನ ಸಿಬ್ಬಂದಿಯು ಅಮಾನತುಗೊಳ್ಳುವ ಸಾಧ್ಯತೆಗಳು ಇವೆ.
ಏರ್‌ಏಶಿಯಾ ಸಿಬ್ಬಂದಿ ವಿರುದ್ಧ ದಂಡಕ್ರಮ
ವಿಮಾನಯಾನ ಸಂಸ್ಥೆಯ ಪ್ರಾಥಮಿಕ ತನಿಖೆಯ ಬಳಿಕ ಸಿಬ್ಬಂದಿ ವಿರುದ್ಧ ದಂಡನಾತ್ಮಕ ಕ್ರಮ ಜರುಗಿಸಲಿದೆ. ಬೆಂಗಳೂರು ಕೆಂಪೇಗೌಡ ವಿಮಾಣ ನಿಲ್ದಾಣದಲ್ಲಿ (KIA) ನಲ್ಲಿ ಏರ್ ಏಶಿಯಾದ ಸ್ಟೇಷನ್ ಮ್ಯಾನೇಜರ್ ಝಿಕೋ ಸೋರೆಸ್ (Zico Soares) ಅವರನ್ನು ಶನಿವಾರದಿಂದಲೇ ಒಂದು ತಿಂಗಳು ಅಮಾನತು ಮಾಡಲಾಗಿದೆ.
ಕಳೆದ ಗುರುವಾರ ಮಧ್ಯಾಹ್ನ 2.05ಕ್ಕೆ ಏರ್‌ಏಷಿಯಾ ಸಂಖ್ಯೆ I5 972 ವಿಮಾನ ವಿಮಾನವು KIA ಟರ್ಮಿನಲ್ 2 ರಿಂದ ರಿಂದ ತೆರಳಿತು. ಈ ವೇಳೆ ಇದರಲ್ಲಿ ಪ್ರಯಾಣಿಸಬೇಕಿದ್ದ ರಾಜ್ಯಪಾಲರಿಗೆ ಈ ವಿಮಾನ ತಪ್ಪಿತ್ತು.
ಇದೀಗ ಘಟನೆಗೆ ಉಂಟಾದ ಲೋಪ ಮತ್ತು ಕೈಗೊಳ್ಳಲಿರುವ ದಂಡನಾತ್ಮಕ ಕ್ರಮಗಳ ಕುರಿತು ವಿವರಿಸಲು ಏರ್ ಏಶಿಯಾದ ಹಿರಿಯ ಅಧಿಕಾರಿಗಳು ಸೋಮವಾರ ರಾಜ್ಯಪಾಲ ಥಾವಚೆಂದ್ ಗೆಹ್ಲೋಟ್ ಹಾಗೂ ಅವರ ತಂಡವನ್ನು ಭೇಟಿ ಮಾಡಲಿದ್ದಾರೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಒಂದು ಗಂಟೆ ತಡವಾಗಿ ರಾಜ್ಯಪಾಲರ ಪ್ರಯಾಣ
ರಾಜ್ಯಪಾಲರಿಗೂ ಮೊದಲು ಅವರ ಇಬ್ಬರ ಸಿಬ್ಬಂದಿ ಬ್ಯಾಗ್ ಸಮೇತ ಬೆಂಗಳೂರು ವಿಮಾನ ನಿಲ್ದಾಣ ತಲುಪಿ ಕಾಯುತ್ತಿದ್ದರು. ರಾಜ್ಯಪಾಲರು ಮಧ್ಯಾಹ್ನ 2.07 ಕ್ಕೆ ಏರ್‌ಪೋರ್ಟ್ ತಲುಪಿದ್ದಾರೆ. ಬಳಿಕ ಅವರು ತಮ್ಮ ಅಧಿಕೃತ ಕಾರಿನಲ್ಲಿ ಏರ್ ಏಶಿಯಾ ವಿಮಾನದತ್ತ ತೆರಳುತ್ತಿದ್ದಾರೆ. ಅಷ್ಟರಲ್ಲಿ ಪ್ರಯಾಣಿಕರಿಂದ ತುಂಬಿದ್ದ ವಿಮಾನವು ಮಧ್ಯಾಹ್ನ 2.05 ಗಂಟೆಗೆ ಟೇಕ್ ಆಫ್ ಆಗಲು ನಿರ್ಧರಿಸಿತ್ತು. ಇದರಿಂದಾಗಿ ಒಂದು ಗಂಟೆ ತಡವಾಗಿ ರಾಜ್ಯಪಾಲರು ಹೈದರಾಬಾದ್‌ಗೆ ತೆರಳಬೇಕಾಯಿತು.
AIX ಕನೆಕ್ಟ್ ವಕ್ತಾರರು ಗುರುವಾರ ನಡೆದ ಈ ಘಟನೆಗೆ ವಿಷಾದ ವ್ಯಕ್ತಪಡಿಸಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಘಟಕೆ ಕುರಿತು ಇಲಾಖಾ ತನಿಖೆ ಕುರಿತು ಉಲ್ಲೇಖಿಸಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ದೂರು ನೀಡಿದ್ದಾಗಿ ರಾಜಭವನ ಮಾಹಿತಿ ನೀಡಿದೆ. ಈ ಕುರಿತು ವಿಮಾನಯಾನ ಸಂಸ್ಥೆ ತನಿಖೆ ಆರಂಭಿಸಿದೆ.












Click it and Unblock the Notifications