Get Updates
Get notified of breaking news, exclusive insights, and must-see stories!

ಸಾಂಪ್ರದಾಯಿಕ ಆಭರಣಗಳಿಗೆ ಸರಿಸಾಟಿ ಬೇರೆ ಇಲ್ಲ: ನಟಿ ಐಂದ್ರಿತಾ ರೈ

ಬೆಂಗಳೂರು ಏಪ್ರಿಲ್ 27: ನಮ್ಮ ದೇಶದ ಸಾಂಪ್ರದಾಯಿಕ ಆಭರಣಗಳಿಗೆ ಸರಿಸಾಟಿ ಬೇರೆ ಇಲ್ಲ. ಇಂಥ ಆಭರಣಗಳನ್ನು ಧರಿಸುವುದಕ್ಕೆ ಸಂತಸವಾಗುತ್ತದೆ ಎಂದು ನಟಿ ಐಂದ್ರಿತಾ ರೈ ಅಭಿಪ್ರಾಯಪಟ್ಟರು. ನಗರದಲ್ಲಿ ದೇಶದ ಖ್ಯಾತನಾಮ ಆಭರಣಗಳ ತಯಾರಕ ಮತ್ತು ಮಾರಾಟ ಸಂಸ್ಥೆಯಾದ ಪ್ರವೀಣ್ ಜ್ಯುವೆಲ್ಲರ್ಸ್ ಅವರ ನೂತನ ಶೋರೂಂ ಗೆ ಚಾಲನೆ ನೀಡಿ ಮಾತನಾಡಿದರು.

ಆಭರಣಗಳು ಮಹಿಳೆಯರ ಸಂಗಾತಿ ನಿಜ, ಅದರಲ್ಲೂ ಈ ಸಾಂಪ್ರದಾಯಿಕ ಆಭರಣಗಳು ಸಂಗ್ರಹವನ್ನು ಉದ್ಘಾಟಿಸುವುದಕ್ಕೆ ಬಹಳ ಸಂತಸವಾಗುತ್ತದೆ. ಈ ಆಭರಣ ಮಳಿಗೆಯಲ್ಲಿ ಸಾಂಪ್ರದಾಯಿಕ ಚಿನ್ನದ ಆಭರಣಗಳು, ವಜ್ರದ ಆಭರಣಗಳು ಗಮನ ಸೆಳೆಯುವಂತಿವೆ ಎಂದರು.

Aindrita Ray inaugurates Praveen Jewellers new showroom at RPC layout

ಪ್ರವೀಣ್ ಜ್ಯೂವೆಲ್ಲರ್ಸ್ ಮಾಲೀಕರಾದ ಪ್ರವೀಣ್ ಮಾತನಾಡಿ, ಗ್ರಾಹಕರಿಗೆ ಅತ್ಯುತ್ಕೃಷ್ಠವಾದ ಆಭರಣಗಳನ್ನು ಒದಗಿಸಲು ಬದ್ಧವಾಗಿರುವ ಪ್ರವೀಣ್ ಜ್ಯುವೆಲ್ಲರ್ಸ್ ಇದೀಗ ವಿಜಯನಗರದ ಆರ್‍ಪಿಸಿ ಲೇಔಟ್‍ನಲ್ಲಿ ತನ್ನ ಹೊಸ ಶೋರೂಂ ಅನ್ನು ಆರಂಭಿಸುತ್ತಿದ್ದು, ಸುತ್ತಮುತ್ತಲಿನ ಆಭರಣ ಪ್ರಿಯರಿಗೆ ಹೊಸ ಹೊಸ ವಿನ್ಯಾಸದ ಆಭರಣಗಳ ಕಣಜವನ್ನು ಹೊತ್ತು ತರುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಗ್ರಾಹಕರು ನೀಡುತ್ತಾ ಬಂದಿರುವ ಅಭೂತಪೂರ್ವ ಪ್ರತಿಕ್ರಿಯೆಯಿಂದ ಪ್ರವೀಣ್ ಜ್ಯುವೆಲ್ಲರ್ಸ್ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಬರುತ್ತಿದೆ. ಇದರ ಪ್ರತೀಕವಾಗಿ ಇದೀಗ ಆರ್ ಪಿ ಸಿ ಲೇ ಔಟ್ (ಹಂಪಿನಗರ)ನಲ್ಲಿ ತನ್ನ ಹೊಸ ಮಳಿಗೆಯನ್ನು ಆರಂಭಿಸುತ್ತಿದೆ ಎಂದರು.

Aindrita Ray inaugurates Praveen Jewellers new showroom at RPC layout

ಕಾರ್ಯಕ್ರಮದಲ್ಲಿ ಶಿರಾದ ಸ್ಫಟಿಕಪುರಿ ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರು ನಂಜವಾಧೂತ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಈ ಹೊಸ ಶೋರೂಂ ಅನ್ನು ಉದ್ಘಾಟಿಸಲಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+