ಜಯಾಗಾಗಿ ತಲೆ ಬೋಳಿಸಿಕೊಂಡ ಅಭಿಮಾನಿಗಳು

ಬೆಂಗಳೂರು, ಅ.6 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಿಡುಗಡೆಗೆ ಒತ್ತಾಯಿಸಿ ಅಮ್ಮಾ ಬೆಂಬಲಿಗರ ಪ್ರತಿಭಟನೆ ಮುಂದುವರೆದಿದೆ. ಸೋಮವಾರ ಜೈಲಿನ ಮುಂದೆ ತಲೆ ಬೋಳಿಸಿಕೊಂಡು ಜಯಾ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.

ಜಯಲಲಿತಾ ಅವರು ಇರುವ ಪರಪ್ಪನ ಅಗ್ರಹಾರ ಜೈಲಿನ ಮುಂಭಾಗದಲ್ಲಿ ಸೋಮವಾರ 15ಕ್ಕೂ ಹೆಚ್ಚು ಜಯಲಲಿತಾ ಬೆಂಬಲಿಗರು ತಲೆ ಬೋಳಿಸಿಕೊಂಡು ಅಮ್ಮಾ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. 'ಭಾರತದ ಅಮ್ಮಾ' ಎಂಬ ಫಲಕ ಹಿಡಿದು ಘೋಷಣೆಗಳನ್ನು ಕೂಗಿದರು. [ಜಯಾ ಜಾಮೀನು ವಿಚಾರಣೆ : ಕೋರ್ಟ್ ಸುತ್ತ ನಿಷೇಧಾಜ್ಞೆ]

Supporter of AIADMK

ಜಯಲಲಿತಾ ಅವರು ಜೈಲು ಸೇರಿದ ದಿನದಿಂದ ಪರಪ್ಪನ ಅಗ್ರಹಾರದಲ್ಲಿ ಅವರ ಅಭಿಮಾನಿಗಳು ಜಯಾ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸೋಮವಾರಕ್ಕೆ ಜಯಲಲಿತಾ ಅವರು ಜೈಲು ಸೇರಿ 10 ದಿನಗಳು ಕಳೆದಿದ್ದು, ಪ್ರತಿಭಟನೆ ಅಂತ್ಯಗೊಂಡಿಲ್ಲ.[ಜಯಾ ಸಾಮಾನ್ಯ ಖೈದಿ, ಎಸಿ, ಟಿವಿ ಕೊಟ್ಟಿಲ್ಲ]

ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮತ್ತು ಜಾಮೀನು ನೀಡುವಂತೆ ಮನವಿ ಮಾಡಿ ಜಯಲಲಿತಾ ಅವರು ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದು, ಅರ್ಜಿಯ ವಿಚಾರಣೆ ಅ.7ರ ಮಂಗಳವಾರ ನಡೆಯಲಿದೆ. ಈ ಹಿನ್ನೆಯಲ್ಲಿ ಹೈಕೋರ್ಟ್ ಸುತ್ತಲಿನ 1 ಕಿ.ಮೀ.ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಮಂಗಳವಾರ ಜಯಲಲಿತಾ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯುವ ಹಿನ್ನಲೆಯಲ್ಲಿ ತಮಿಳುನಾಡಿನಿಂದ ಅವರ ಅಪಾರ ಅಭಿಮಾನಿಗಳು ಬೆಂಗಳೂರಿನಗೆ ಆಗಮಿಸುವ ಸಾಧ್ಯತೆ ಇದ್ದು, ಪರಪ್ಪನ ಅಗ್ರಹಾರ ಜೈಲಿನ ಮುಂದೆ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಆದ್ದರಿಂದ ಜೈಲಿನ ಸುತ್ತಮುತ್ತಲೂ ಇಂದು ರಾತ್ರಿ 12 ಗಂಟೆಯಿಂದ ನಿಷೇಧಾಜ್ಞೆ ಹೇರಲಾಗಿದೆ.

jaya Supporters

ಜಯಲಲಿತಾ ಬಿಡುಗಡೆಗೆ ಆಗ್ರಹಿಸಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮದವರು ಸಾಮೂಹಿಕವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮುಂದೆ ಸೋಮವಾರ ಪ್ರಾರ್ಥನೆ ಸಲ್ಲಿಸಿದರು. ಎಲ್ಲರ ಪ್ರಾರ್ಥನೆ ಫಲಿಸುವುದೇ ಜಯಾ ಬಿಡುಗಡೆಯಾಗುವುದೇ ಎಂಬುದನ್ನು ತಿಳಿಯಲು ಮಂಗಳವಾರದ ತನಕ ಕಾಯಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+