ಶಶಿಕಲಾ ನಟರಾಜನ್ ಅವರಿಗೆ 15 ದಿನಗಳ ಪೆರೋಲ್ ಮಂಜೂರು
ಬೆಂಗಳೂರು, ಮಾರ್ಚ್ 20: ಪತಿ ನಟರಾಜನ್(75) ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುವ ಸಲುವಾಗಿ ಎಐಎಡಿಎಂಕೆ ನಾಯಕಿ ಶಶಿಕಲಾ ನಟರಾಜನ್ ಅವರಿಗೆ 15 ದಿನಗಳ ಪೆರೋಲ್ ಮಂಜೂರು ಮಾಡಲಾಗಿದೆ.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಶಶಿಕಲಾ ಪತಿ ಎಂ.ನಟರಾಜನ್ ಮಾರುತಪ್ಪ ಚೆನ್ನೈನ ಗ್ಲೆಗ್ಲಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಇಂದು(ಮಾ.20) ಬೆಳಗ್ಗಿನ ಜಾವ ಸುಮಾರು 1:35 ಕೊನೆಯುಸಿರೆಳೆದರು.
ಬಹು ಅಂಗಾಂಗ ವೈಫಲ್ಯದಿಂದ ಶಶಿಕಲಾ ಪತಿ ನಟರಾಜನ್ ನಿಧನ
ಅಕ್ರಮ ಆಸ್ತಿ ಹೊಂದಿರುವ ಆರೋಪದಲ್ಲಿ ದೋಷಿ ಎಂದು ಪರಿಗಣಿಸಲ್ಪಟ್ಟ ಶಶಿಕಲಾ ಅವರು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಪತಿಯ ನಿಧನದ ಹಿನ್ನೆಲೆಯಲ್ಲಿ ಅವರು ಇಂದು ಬೆಳಿಗ್ಗೆ ಪೆರೋಲ್ ಗೆ ಅರ್ಜಿ ಸಲ್ಲಿಸಿದ್ದರು.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !