Bengaluru Agriculture Fair 2023: ನಾಳೆ ನ.17ರಂದು ಕೃಷಿ ಮೇಳಕ್ಕೆ ಸಿಎಂ ಚಾಲನೆ, ಏನೇನಿರಲಿದೆ, ವಿಶೇಷತೆಗಳೇನು ತಿಳಿಯಿರಿ

ಬೆಂಗಳೂರು, ನವೆಂಬರ್ 16: ರಾಜಧಾನಿ ಬೆಂಗಳೂರಿನ ಸುತ್ತಲಿನ ಹಾಗೂ ರಾಜ್ಯದ ರೈತರು ಕಾತರದಿಂದ ಕಾಯುತ್ತಿರುವ ಹೆಬ್ಬಾಳದ ಜಿಕೆವಿಕೆಯಲ್ಲಿ 'ಕೃಷಿ ಮೇಳ' ನಾಳೆ ನವೆಂಬರ್ 17ರಿಂದ 20ರವರೆಗೆ ನಡೆಯಲಿದೆ. ಈ ಭಾರಿ ಆಹಾರ-ಆರೋಗ್ಯ-ಆದಾಯಕ್ಕಾಗಿ ಸಿರಿಧಾನ್ಯಗಳು' ಎಂಬ ಘೋಷವಾಕ್ಯದಡಿ ಅದ್ಧೂರಿಯಾಗಿ ಕೃಷಿ ಮೇಳಕ್ಕೆ ಚಾಲನೆ ದೊರೆಯಲಿದೆ.

ಈ ಕೃಷಿ ಮೇಳದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು (ಜಿಕೆವಿಕೆ) ಈ ಐದು ಹೊಸ ತಳಿಗಳನ್ನು ಬಿಡುಗಡೆ ಮಾಡಲಿದೆ. ಜತೆಗೆ ಕೃಷಿಯಲ್ಲಿ ಸಾಧನೆ ಮಾಡಿದ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್‌.ವಿ.ಸುರೇಶ ಮಾಹಿತಿ ನೀಡಿದರು.

agriculture-fair-2023-start-from-november-17

ಇದೆ ನವೆಂಬರ್ 17ರಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಕೆವಿಕೆ ಆವರಣದಲ್ಲಿ ಕೃಷಿ ಮೇಳವನ್ನು ಉದ್ಘಾಟಿಸಲಿದ್ದಾರೆ. ಲಕ್ಷಾಂತರ ಜನರು, ರೈತರು ಆಗಮಿಸಲಿದ್ದಾರೆ. ಕೃಷಿ ಮೇಳದಲ್ಲಿ ಕ್ಷೇತ್ರ ಸಂದರ್ಶನ, ತಜ್ಞರೊಂದಿಗೆ ಚರ್ಚೆ, ವಸ್ತು ಪ್ರದರ್ಶನಗಳನ್ನು ಕೃಷಿ ಮೇಳವು ಒಳಗೊಂಡಿರಲಿದೆ. ವಸ್ತು ಪ್ರದರ್ಶನದಲ್ಲಿ 625 ಮಳಿಗೆಗಳು ಇರಲಿವೆ. ರೈತರು ಇಲ್ಲಿ ಅಗತ್ಯ ಮಾಹಿತಿ, ಕೃಷಿ ಕುರಿತು ಸಲಹೆಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದರು.

ವಿವಿಧ ತಳಿ ಬೀಜ, ಸಸಿಗಳು, ಉತ್ಪನ್ನ ಮಾರುಕಟ್ಟೆಗೆ

ಮುಖ್ಯವಾಗಿ ಅಧಿಕ ಇಳುವರಿಯ ತಳಿಗಳು ಮೇಳದಲ್ಲಿ ಬಿಡುಗಡೆ ಆಗಲಿವೆ. ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ನೀಡುವ ಎಂಎಲ್-322 ರಾಗಿ ತಳಿ, ಜಿಪಿಯುಎಲ್-11ಸಾಮೆ, ಜಿಪಿಯುಪಿ-32 ಬರಗು, ಕೆಬಿಎಸ್‌ಎಚ್‌-85 ಸೂರ್ಯಕಾಂತಿ ಹಾಗೂ ಹಾಗೂ ಪ್ರಕಟಣೆ ಜಿಕೆವಿಕೆ, ಕೆಂಪು ಹಲಸಿನ ನೂತನ ತಳಿಗಳನ್ನು ಲೋಕಾರ್ಪಣೆ ಆಗಲಿವೆ.

ರಾಜ್ಯದಲ್ಲಿ ಈಗಾದಂತೆ ಬರಗಾಲ ಉಂಟಾಗಿ ಮಳೆ ನೀರು ಸಿಗದಿದ್ದರೆ ಹೇಗೆ ಬೆಳೆ ಬೆಳೆಯಬೇಕು ಎಂಬ ಬಗ್ಗೆ ತಿಳಿಸಲಾಗುವುದು. ಅದಕ್ಕು ಮೊದಲು ಕಡಿಮೆ ನೀರನ್ನು ಬಯಸುವ ಬೆಳೆಗಳ ಬಿತ್ತನೆ ಬೀಜವನ್ನು ಇದೇ ಮೊದಲ ಬಾರಿಗೆ ಮಾರುಕಟ್ಟೆಗೆ ಪರಿಯಚಯಿಸಲಾಗುವುದು. ಈ ಬಗ್ಗೆ ರೈತರಿಗೆ ಸ್ಥಳದಲ್ಲಿಯೇ ಮಾಹಿತಿ ನೀಡಲಾಗುವುದು.

ಪ್ರಾತ್ಯಕ್ಷಿಕೆ, ಯಂತ್ರೋಪಕರಣ ಲಭ್ಯ

ಮೇಳದಲ್ಲಿ ಸಮಗ್ರ ಬೇಸಾಯ ಪದ್ಧತಿ, ಬೆಳೆ ಪದ್ಧತಿ, ಹನಿ ಮತ್ತು ತುಂತುರು ನೀರಾವರಿ, ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಾರುಕಟ್ಟೆ ನೈಪುಣ್ಯತೆ, ರೈತರ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ ನೀಡಲಾಗುತ್ತಿದೆ. ಕೃಷಿ ಪರಿಕರಗಳು ಮತ್ತು ಪ್ರಕಟಣೆಗಳ ಮಾರಾಟಕ್ಕೂವ್ಯವಸ್ಥೆ ಕಲ್ಪಿಸಲಾಗಿದೆ. ಬಾಟಲ್ ಬದನೆ, ಅಲಂಕಾರಿಕ ಇದೇ ಸೂರ್ಯಕಾಂತಿ ಮತ್ತಿತರ ವಿದೇಶಿ ತಳಿಯ ಸಸ್ಯಗಳ ಪ್ರಾತ್ಯಕ್ಷಿಕೆಯನ್ನು ರೈತರು ನೋಡಬಹುದು ಎಂದು ಅವರು ವಿವರಿಸಿದರು.

ಹೋರಿ ಸೇರಿ ವಿವಿಧ ಪ್ರಾಣಿಗಳು ಮೇಳದ ಆಕರ್ಷಣೆ

ಹೊಸ ಹೊಸ ತಳಿ ಸಸಿಗಳು, ಬೀಜಗಳ ಬಳಕೆ, ಪರಿಚಯದ ಜೊತೆಗೆ ಕೀಟನಾಶಕ, ಬಿತ್ತನೆ ಬೀಜ, ರಸಗೊಬ್ಬರ, ಆತ್ಯಾಧುನಿಕ ಸಲಕರಣೆ ಖರೀಸಬಹುದಾಗಿದೆ. ಮೇಳದಲ್ಲಿ ಮುಖ್ಯವಾಗಿ ಪ್ರಾಣಿ ಪಕ್ಷಗಳು ರೈತರನ್ನು, ಸಾರ್ವಜನಿಕರನ್ನು ಆಕರ್ಷಿಸಲಿವೆ. ಡಾರ್ಪರ್, ಬನ್ನೂರು ಸೇರಿದಂತೆ ವಿವಿಧ ಕುರಿ ತಳಿ, ವಿವಿಧ ಜಾತಿಯ ಹೋರಿ (ಎತ್ತು) ಗಳು ಇರುತ್ತವೆ. ದೊಡ್ಡ ರೈತರಿಂದ ಹಿಡಿದು ಸಣ್ಣ ಹಿಡುವಳಿದಾರರಿಗೂ ಕೃಷಿ ಮೇಳದಲ್ಲಿ ಅಗತ್ಯ ಮಾಹಿತಿಗಳು, ಸಲಹೆಗಳು ಸಿಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+