• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದ ಎಸಿಬಿ ಚುರುಕಾಗಲು ಹೈಕೋರ್ಟ್‌ ಅಸಮಾಧಾನ ಕಾರಣ!

|
Google Oneindia Kannada News

ಬೆಂಗಳೂರು, ಜುಲೈ05: ಎಸಿಬಿಯಿಂದ ಐಎಎಸ್ ಅಧಿಕಾರಿ ಬಂಧಿಸಿದೆ. ಸಿಐಡಿ ಐಪಿಎಸ್ ಅಧಿಕಾರಿಯನ್ನು ಅರೆಸ್ಟ್ ಮಾಡಿದೆ. ಎಸಿಬಿ ಅಧಿಕಾರಿಗಳು ಮಂಗಳವಾರ ಜಮೀರ್ ಅಹ್ಮದ್ ಖಾನ್ ನಿವಾಸ, ಕಚೇರಿ ಸೇರಿದಂತೆ ಐದಕ್ಕೂ ಹೆಚ್ಚು ಕಡೆ ದಾಳಿಯನ್ನು ನಡೆಸಿದೆ. ಈ ಮೂರು ಕೇಸ್‌ನಲ್ಲಿ ಅಧಿಕಾರಿಗಳು ಕಾರ್ಯಾಚರಣೆ ಮಾಡಲು ಕಾರಣವಾಗಿದ್ದೇ ಕರ್ನಾಟಕ ಹೈಕೋರ್ಟ್ ಚಾಟಿ.

ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ನಾಗರೀಕ ಸೇವೆಗೆ ಆಯ್ಕೆಯಾಗಿ ಕರ್ತವ್ಯ ನಿರತ ಐಪಿಎಸ್ ಮತ್ತು ಐಎಎಸ್ ಅಧಿಕಾರಿ ಒಂದೇ ದಿನ ವಿಭಿನ್ನ ಲಂಚ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟಿದ್ದಾರೆ. ಪ್ರಸ್ತುತ ಶಿಶು ಅಭಿವೃದ್ದಿ ಇಲಾಖೆಯಲ್ಲಿ ನಿರ್ದೇಶಕಾಗಿರುವ ಜೆ. ಮಂಜುನಾಥ್ ಮತ್ತು ಆಂತರಿಕ ಭದ್ರತಾ ವಿಭಾಗದಲ್ಲಿ ಎಡಿಜಿಪಿಯಾಗಿರುವ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಬಂಧನವಾಗಿದೆ.

Recommended Video

   Zameer Ahmed ಅವರಿಗೆ ಸಂಬಂಧಿಸಿದ 5 ಜಾಗಗಳ ಮೇಲೆ ACB ದಾಳಿ | *Politics | OneIndia Kannada

   ನಾಗರೀಕ ಸೇವೆಯಲ್ಲಿ ನಿರತರಾಗಿ ಸಮಾಜಕ್ಕೆ ಉತ್ತಮ ಸೇವೆಯನ್ನು ಸಲ್ಲಿಸಬೇಕಾದ ಇಬ್ಬರು ಅಧಿಕಾರಿಗಳು ಹಗರಣಗಳಲ್ಲಿ ಸಿಕ್ಕಿಬಿದ್ದರುವುದು ವಿಪರ್ಯಾಸ ಎನ್ನದೇ ವಿಧಿಯಿಲ್ಲ, ಮೇಲಧಿಕಾರಿಗಳೇ ಹೀಗೆ ಲಂಚ , ಭ್ರಷ್ಟಾಚಾರದಲ್ಲಿ ತೊಡಗಿಕೊಂಡರೇ ಇವರ ಅಧೀನದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಭ್ರಷ್ಟರಾಗಿ ಜನರ ರಕ್ತವನ್ನು ಹೀರುವ ಜಿಗಣೆಗಳಾಗಿಬಿಡುತ್ತಾರೆ. ಇದಕ್ಕಾಗಿ ಹೈಕೋರ್ಟ್ ಸಿಐಡಿಯ ಉನ್ನತಾಧಿಕಾರಿ ಸಂಧುರವರನ್ನು ಕರೆಸಿ ಸಚಿವರಿರಲಿ, ದೊಡ್ಡವರಿರಲಿ ಬಂಧಿಸಿ ಎಂದು ಹೇಳಿತ್ತು. ಜೆ. ಮಂಜುನಾಥ್ ವಿಚಾರದಲ್ಲಿ ತನಿಖೆಯ ಬಗ್ಗೆಯೂ ಅಸಮಾಧಾನವನ್ನು ವ್ಯಕ್ತಪಡಿಸಿತ್ತು. ಬಿ ರಿಪೋರ್ಟ್‌ಗಳ ವರದಿಯನ್ನು ಕೇಳಿ ಎಸಿಬಿಗೆ ಶಾಕ್ ನೀಡಿತ್ತು.

   ಮೊದಲ ಬಾರಿಗೆ ರಾಜ್ಯದಲ್ಲಿ ನಡೆದ ಎಡಿಜಿ ಬಂಧನ

   ಮೊದಲ ಬಾರಿಗೆ ರಾಜ್ಯದಲ್ಲಿ ನಡೆದ ಎಡಿಜಿ ಬಂಧನ

   ಐಪಿಎಸ್ ಅಧಿಕಾರಿಗಳ ಮೇಲೆ ಯಾವುದೇ ಶಿಸ್ತು ಕ್ರಮ ಆಗುವುದಿಲ್ಲ ಎಂದು ಬಹಳಷ್ಟು ಜನ ನನಗೆ ಹೇಳುತ್ತಿದ್ದರು ಇದು ಸುಳ್ಳು ಎಂಬುದಕ್ಕೆ ಇಂದು ಮೊತ್ತ ಮೊದಲ ಬಾರಿಗೆ ರಾಜ್ಯದಲ್ಲಿ ನಡೆದ ಎಡಿಜಿಪಿ ಹುದ್ದೆಯ ಅಧಿಕಾರಿ ಬಂಧನವೇ ಸಾಕ್ಷಿ. ಕಾನೂನಿನ ಮುಂದೆ ಎಲ್ಲರೂ ಒಂದೇ. ಅಖಿಲ ಭಾರತ ಸಿವಿಲ್ ಸೇವಾ ನಿಯಮದಡಿ ಬಂಧನ ಆದರೆ ಸಸ್ಪೆಂಡ್ ಕೂಡ ಮಾಡಲೇಬೇಕಾಗುತ್ತದೆ ಎಂದು ಐಪಿಎಸ್ ಅಧಿಕಾರಿ ಡಿ. ರೂಪ ಟ್ವೀಟ್ ಮಾಡಿದ್ದಾರೆ.

   ಚಾರ್ಚ್‌ಶೀಟ್‌ ಸಲ್ಲಿಕೆ ಮಾಡಲಿ

   ಚಾರ್ಚ್‌ಶೀಟ್‌ ಸಲ್ಲಿಕೆ ಮಾಡಲಿ

   ""ಬೆೆಂಗಳೂರಿನ ಜಿಲ್ಲಾಧಿಕಾರಿಯ ಸ್ಥಾನವನ್ನು ಪಡೆಯುವುದು ಸುಲಭದ ಸಂಗತಿಯಲ್ಲ. ಜೆ. ಮಂಜುನಾಥ್‌ರವರಿಗೆ ರಾಜಕಾರಣಿಗಳ ಸಹಕಾರವಿದೆ. ಎಡಿಜಿಪಿ ಅಮೃತ್ ಪೌಲ್ ಮೇಲೆ ಆರೋಪಗಳಿವೆ. ಈ ಪ್ರಕರಣದಲ್ಲಿ ದೊಡ್ಡದೊಡ್ಡ ರಾಜಕಾರಣಿಗಳು ಸಹಕಾರನನ್ನು ನೀಡಿದ್ದಾರೆ. ಅವರನ್ನು ಬಂಧಿಸಬೇಕು ಜೊತೆಗೆ ಚಾರ್ಜ್ ಶೀಟ್ ಹಾಕುವಾಗ ಕ್ಲೀನ್ ಚೀಟ್ ನೀಡದೆ ಸಾಕ್ಷ್ಯಾಧಾರಗಳ ಸಹಿತವಾಗಿ ಆರೋಪಪಟ್ಟಿಯನ್ನು ದಾಖಲಿಸಬೇಕು'' ಎಂದು ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಆಪ್ ಮುಖಂಡ ಭಾಸ್ಕರ್ ರಾವ್ ತಿಳಿಸಿದ್ದಾರೆ.

   ಐಟಿ, ಇಡಿ, ಇದೀಗ ಎಸಿಬಿ ದಾಳಿ

   ಐಟಿ, ಇಡಿ, ಇದೀಗ ಎಸಿಬಿ ದಾಳಿ

   ಶಾಸಕ ಜಮೀರ್ ಅಹಮದ್ ಖಾನ್ ಮನೆಯ ಮೇಲೆ ದಾಳಿಯನ್ನು ಮಾಡಲು ಕಾರಣವಾಗಿದ್ದು ಹೈಕೋರ್ಟ್‌ನ ಚಡಿಯೇಟು ಎನ್ನಬಹುದು. ಸಣ್ಣ ಪುಟ್ಟ ಅಧಿಕಾರಿಗಳ ಮೇಲೆ ಮಾತ್ರವೇ ದಾಳಿಯನ್ನು ಮಾಡುತ್ತಿರುವ ಬಗ್ಗೆಯು ಹೈಕೋರ್ಟ್ ಅಸಮಧಾನವನ್ನ ಹೊರಹಾಕಿತ್ತು. ಶಾಸಕರರಾಗಲಿ, ಸಚಿವರ ಮನೆಗಳ ಮೇಲೆ ದಾಳಿಯನ್ನು ಮಾಡುವುದಿಲ್ಲ ಎಂಬ ಮಾತು ಕೇಳಿಬಂದಿತ್ತು. ಇದರಿಂದಾಗಿ ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ದಾಳಿಯಾಗಿದೆ. ಸಿದ್ದರಾಮಯ್ಯರಿಗೂ ಆಪ್ತನಾಗಿರುವ ಜಮೀರ್ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿಯನ್ನು ಮಾಡಿದ್ದರು. ಇದೀಗ ಎಸಿಬಿ ದಾಳಿಯನ್ನು ನಡೆಸಲಾಗಿದೆ. ಆದಾಯ ತೆರಿಗೆ ಮತ್ತು ಇಡಿ ಶೋಧದಲ್ಲಿ ಸಿಗದಿರುವ ಅದ್ಯಾವ ದಾಖಲೆಯನ್ನು ಎಸಿಬಿ ಶೋಧಿಸಲಿದೆಯೋ ಅನ್ನೋದು ದಾಳಿ ಬಳಿಕ ತಿಳಿಯಲಿದೆ. ಎಸಿಬಿ ಬರಿಗೈಯಲ್ಲಿ ವಾಪಸ್ಸಾದರೇ ಜಮೀರ್ ಮನೆ ಮೇಲಿನ ದಾಳಿಯನ್ನು ರಾಜಕೀಯ ಪ್ರೇರಿತ ಅನ್ನೋದರಲ್ಲಿ ಅನುಮಾನವಿಲ್ಲದಂತೆ ಆರೋಪಗಳು ಬರಲಿವೆ.

   ಬಿಜೆಪಿಗೆ ಧಿಕ್ಕಾರ ಕೂಗುತ್ತಿರುವ ಬೆಂಬಲಿಗರು

   ಬಿಜೆಪಿಗೆ ಧಿಕ್ಕಾರ ಕೂಗುತ್ತಿರುವ ಬೆಂಬಲಿಗರು

   ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಕಚೇರಿ ಮೇಲೆ ದಾಳಿಯನ್ನು ಖಂಡಿಸಿ ಬೆಂಬಲಿಗರು ಜಮೀರ್ ಅಹ್ಮದ್ ಖಾನ್‌ ಮನೆಯ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿಗೆ ಧಿಕ್ಕಾರವನ್ನು ಕೂಗುತ್ತಿದ್ದಾರೆ. ಆದರೆ ಎಸಿಬಿ ಜಾರಿ ನಿರ್ದೇಶನಾಲಯ (ಇಡಿ) ಕೊಟ್ಟ ವರದಿ ಆಧಾರದಲ್ಲಿ ದಾಳಿ ನಡೆಸಿರುವುದಾಗಿ ತಿಳಿಸಿದೆ.

   English summary
   After Karnataka High Court rap, Anti-Corruption Bureau Arrested IAS officer J Manjunath, IPS Officer ADGP Amrit Paul and Conducts Raids on Congress MLA Zameer Ahmed Khan in disproportionate assets case,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X